ಹುಬ್ಬಳ್ಳಿ ಪಾಲಿಕೆ ಹೊಸ ಆಯುಕ್ತರ ಮುಂದಿನ ಸವಾಲುಗಳು

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ,ಜುಲೈ, 29: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಮೀಷನರ್ ಆಗಿ ಬಾಗಲಕೋಟೆ ಕೃಷ್ಣ ಮೇಲ್ದಂಡೆ ಯೋಜನೆಯ ಉಪ ಪ್ರಧಾನ ವ್ಯವಸ್ಥಾಪಕರಾಗಿದ್ದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅಧಿಕಾರ ವಹಿಸಿಕೊಂಡಿದ್ದಾರೆ.

ಆಯುಕ್ತರಾಗಿದ್ದ ಸಿ.ಎಂ.ನೂರಮನ್ಸೂರ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಹಿರೇಮಠ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಚರಂಡಿ ಸಮಸ್ಯೆ, ಕೊಳಚೆ, ಒತ್ತುವರಿ ಮುಂತಾದ ಸಮಸ್ಯೆಗಳನ್ನು ಅನುಭವಿಸುತ್ತಿರುವ ಹುಬ್ಬಳ್ಳಿ-ಧಾರವಾಡಕ್ಕೆ ಹೊಸ ಮುಖ ಬಂದಂತೆ ಆಗಿದೆ.[ಹುಬ್ಬಳ್ಳಿಯಲ್ಲಿ ನಿರಂತರ ಮಳೆ: ಸಾಂಕ್ರಾಮಿಕ ರೋಗ ಭೀತಿ]

ಸಿ.ಎಂ.ನೂರಮನ್ಸೂರ್ ಅವರನ್ನು ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಸಚಿವ ಹುದ್ದೆಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಅವಳಿ ನಗರದಲ್ಲಿ ಹುಬ್ಬಳ್ಳಿ ನಗರದಲ್ಲಿ ಅನಧಿಕೃತ ಪಾರ್ಕಿಂಗ್ ಜಾಗ ಅತಿಕ್ರಮಣ ಮಾಡಿಕೊಂಡವರಿಗೆ ಬಿಸಿ ಮುಟ್ಟಿಸಿದ್ದರು. ಆದರೆ ಇದೀಗ ಹೊಸದಾಗಿ ಆಡಳಿತ ವಹಿಸಿಕೊಂಡ ಕಮಿಷನರ್ ಎದುರು ಹಲವಾರು ಸಮಸ್ಯೆಗಳಿವೆ.

ಕಸ ಸಮಸ್ಯೆ

ಕಸ ಸಮಸ್ಯೆ

ಮಹಾನಗರದಲ್ಲಿ ಕಸದ ಸಮಸ್ಯೆ ಭೂತದಂತೆ ಕಾಡುತ್ತಿದೆ. ಬೆಂಗಳೂರಿನಂತೆ ಹುಬ್ಬಳ್ಳಿಗೂ ಕಸದ ಕಂಟಕ ಅಂಟಿಕೊಂಡಿದೆ.

ಸಾಂಕ್ರಾಮಿಕ ರೋಗ ಭೀತಿ

ಸಾಂಕ್ರಾಮಿಕ ರೋಗ ಭೀತಿ

ಸಾಂಕ್ರಾಮಿಕ ರೋಗಗಳ ಭೀತಿ ಸಾರ್ವಜನಿಕರಲ್ಲಿ ಶುರುವಾಗಿದೆ. ಚಿಕೂನ್ ಗುನ್ಯಾ ಕಾಣಿಸಿಕೊಂಡ ವರದಿಯಾಗಿದೆ. ಹಂದಿ, ನಾಯಿ, ಸೊಳ್ಳೆಗಳ ವಾಸಸ್ಥಾನವಾಗಿ ಜನರಿಗೆ ರೋಗದ ಭಯ ಹುಟ್ಟಿಕೊಂಡಿದೆ.

ಅಯ್ಯಪ್ಪಾ ಧೂಳು

ಅಯ್ಯಪ್ಪಾ ಧೂಳು

ಮಳೆ ಬಂದ್ ಆದರೆ ಧೂಳಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಜನರಿಗೆ ಪ್ರಯೋಜನವಾಗಬೇಕಿದ್ದ ಯುಜಿಡಿ ಕಾಮಗಾರಿ ಸಮಸ್ಯೆಯಾಘಿ ಪರಿಣಮಿಸಿದೆ.

ಚರಂಡಿ ಸಮಸ್ಯೆ

ಚರಂಡಿ ಸಮಸ್ಯೆ

ಧಾರಾಕಾರ ಮಳೆ ಬಂತೆಂದರೆ ರಸ್ತೆಗಳ ಮೇಲೆಲ್ಲ ನೀರು ಹರಿಯುತ್ತದೆ. ಒಳಚರಂಡಿ ವ್ಯವಸ್ಥೆ ಹದಗೆಟ್ಟಿದ್ದು ಅದೆಲ್ಲವನ್ನು ಮೀರಿ ನಿಲ್ಲುವ ಸವಾಲು ಹೊಸ ಕಮಿಷನರ್ ಸಿದ್ಧಲಿಂಗಯ್ಯ ಹಿರೇಮಠ ಮೇಲಿದೆ.

ಅಪರಾಧ ಪ್ರಕರಣ

ಅಪರಾಧ ಪ್ರಕರಣ

ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಇತ್ತಿಚೇಗೆ ಅಪರಾಧ ಪ್ರಕರಣಗಳು ಮಿತಿ ಮೀರಿವೆ. ಪಿಸ್ತೂಲ್ ಮಾರಾಟ, ಗಾಂಜಾ ಮಾರಾಟ, ರೌಡಿಗಳ ಅಟ್ಟಹಾಸ ಸಹ ಮಿತಿ ಮೀರಿದ್ದು ಪಾಲಿಕೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubballi: Hubballi-Dharwad Mahanagara Palike gets new commissioner. Major Siddalingayya Hiremath sworn as a new commissioner for Mahanagara Palike on 29, July 2016.
Please Wait while comments are loading...