ಹುಬ್ಬಳ್ಳಿ-ಧಾರವಾಡದಲ್ಲಿ ಕಾಣಿಸಿಕೊಂಡ ಚಿಕನ್ ಗುನ್ಯಾ

ಧಾರವಾಡ, ಆಗಸ್ಟ್ 10 : ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಚಿಕನ್ ಗುನ್ಯಾ ಕಾಣಿಸಿಕೊಂಡಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಹಲವು ಬಡಾವಣೆಗಳಲ್ಲಿ ರೋಗ ಕಾಣಿಸಿಕೊಂಡಿದ್ದು, ಜನರು ಆತಂಕಗೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣ, ತುಂತುರು ಮಳೆ ಸುರಿಯುತ್ತಿದೆ. ಆದ್ದರಿಂದ, ಚಿಕನ್ ಗುನ್ಯಾ ಪ್ರಕರಣಗಳು ಹೆಚ್ಚುತ್ತಿವೆ. ಪ್ರತಿ ದಿನ 7 ರಿಂದ 8 ಜನರು ಜ್ವರದಿಂದಾಗಿ ಆಸ್ಪತ್ರೆಗೆ ಬಂದು ಹೋಗುತ್ತಿದ್ದಾರೆ.

ಕೆಲವು ಬಡಾವಣೆಗಳಲ್ಲಿ ಚಿಕನ್ ಗುನ್ಯಾ ರೋಗಿಗಳ ಸಂಖ್ಯೆ ಹೆಚ್ಚಿದೆ. ಕೆಲವು ಬಡಾವಣೆಗಳಲ್ಲಿ ಅರ್ಧದಷ್ಟು ಜನರು ರೋಗದಿಂದ ಬಳಲುತ್ತಿದ್ದಾರೆ. ಜೆ.ಪಿ.ನಗರವನ್ನು ಪ್ರತಿಷ್ಠಿತ ಬಡಾವಣೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಈ ಏರಿಯಾದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.

Several cases of Chikungunya reported at Hubballi-Dharwad

ಹುಬ್ಬಳ್ಳಿ ತಾಲೂಕಿನ ಗಮನಗಟ್ಟಿ, ನವಲೂರಿನಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಧಾರವಾಡ ತಾಲೂಕಿನ ಅಮ್ಮಿನಬಾವಿ, ಉಪ್ಪಿನ ಬೆಟಗೇರಿ ಸೇರಿದಂತರ ವಿವಿಧ ಕಡೆ ಹಲವು ಪ್ರಕರಣಗಳು ಪತ್ತೆಯಾಗಿವೆ. ಹಲವು ಜನರು ಜ್ವರದಿಂದ ಬಳಲುತ್ತಿದ್ದಾರೆ.

ಆರೋಗ್ಯ ಇಲಾಖೆ ನೀಡುವ ಮಾಹಿತಿಯಂತೆ ನಗರ ಪ್ರದೇಶದಲ್ಲಿ ಹೆಚ್ಚು ಪ್ರಕರಣದಳು ಪತ್ತೆಯಾಗಿವೆ. 8 ರಿಂದ 10 ಜನರು ಪ್ರತಿದಿನ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ.

ಮುಂಜಾಗ್ರತಾ ಕ್ರಮಗಳು

* ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ
* ಮನೆಯ ಸುತ್ತ ಖಾಲಿ ಡಬ್ಬ, ಟಯರ್‌ ಮುಂತಾದವುಗಳಲ್ಲಿ ನೀರು ಎಲ್ಲದಂತೆ ಎಚ್ಚರ ವಹಿಸಿ
* ಸಂಪೂರ್ಣ ಮೈ ಮುಚ್ಚುವಂತೆ ಬಟ್ಟೆ ಧರಿಸಿ
* ಸೊಳ್ಳೆಗಳಿಂದ ಪಾರಾಗಲು ಕೈ-ಕಾಲುಗಳಿಗೆ ಲೋಶನ್ ಹಚ್ಚಿಕೊಳ್ಳಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+