ದೆಹಲಿ ಚುನಾವಣೆ 2025: ಕಾಂಗ್ರೆಸ್ ಸೋಲಿನ ಭವಿಷ್ಯ ನುಡಿದ ಸಚಿವ ಸಂತೋಷ್ ಲಾಡ್
ಹುಬ್ಬಳ್ಳಿ, ಫೆಬ್ರವರಿ 05: ದೆಹಲಿಯಲ್ಲಿ ವಿಧಾನಸಭಾ ಚನಾವಣೆ 2025 ಇಂದು ಬುಧವಾರ (ಫೆಬ್ರವರಿ 5)ರಂದು ನಡೆಯುತ್ತಿದೆ.ಒಟ್ಟು 70 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲದ ಕಾಂಗ್ರೆಸ್ ಈ ಬಾರಿ ಎಷ್ಟು ಸೀಟುಗಳನ್ನು ಗೆಲ್ಲುತ್ತದೆ. ಮತ್ತೆ ಗೆಲುವಿನ ಖಾತೆ ತೆರೆಯುವ ಬಗ್ಗೆ ಕರ್ನಾಟಕ ರಾಜ್ಯ ಕಾರ್ಮಿಕ ಸಚಿವ ಭವಿಷ್ಯ ನುಡಿದಿದ್ದಾರೆ.
ದೆಹಲಿ ಮತದಾನ ನಡೆಯತ್ತಿದ್ದು, ನಮ್ಮ ಕಾಂಗ್ರೆಸ್ ಪಕ್ಷ 5 ರಿಂದ 10 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುತ್ತದೆ. ಸರ್ವೆಗಳು ಇದನ್ನೆ ಹೇಳಿವೆ ಎಂದು ಹಾಲಿ ಚುನಾವಣೆ ಬಗ್ಗೆ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹುಬ್ಬಳ್ಳಿಯಲ್ಲಿ ಬುಧವಾರ ತಿಳಿಸಿದರು. ಈ ಬಾರಿ ಪಕ್ಷ ಹೊಸದಾಗಿ ಖಾತೆ ತೆರೆಯುವ ಬಗ್ಗೆ ಅವರೇನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಅಷ್ಟು ಸೀಟುಗಳು ಗೆಲುವಿಗೆ ಸಾಕಾಗದು. ಹೀಗಾಗಿ ಇದು ಪರೋಕ್ಷವಾಗಿ ಸೋಲೊಪ್ಪಿಕೊಂಡಂತಾಗಿದೆ.

ಎಎಪಿ ಪಕ್ಷ ಮೊದಲು, ಸೆಕೆಂಡು ಬಿಜೆಪಿ ಇದೆ. ರಾಹುಲ್ ಗಾಂಧಿ ಅವರನ್ನು ಈ ದೇಶದ ಜನ ಅರ್ಥ ಮಾಡಿಕೊಂಡಿಲ್ಲ. ಅವರ ಸಿದ್ಧಾಂತಗಳು ಜನರಿಗೆ ಮುಟ್ಟುವ ಕೆಲಸಗಳು ಆಗುತ್ತಿಲ್ಲ. ಪಾರ್ಲಿಮೆಂಟ್ ನಲ್ಲಿ ಬಹಳ ಚನ್ನಾಗಿ ಮಾತಾಡಿದ್ದಾರೆ. ಆದರೆ ಮಾಧ್ಯಮಗಳು ತೋರಿಸುವುದಿಲ್ಲ. ಅದರ ಬಗ್ಗೆ ಎಲ್ಲೂ ಚರ್ಚೆಗಳು ಆಗುವುದಿಲ್ಲ.
ಬಿಜೆಪಿ ನಾಯಕರು ದೇಶದ ಬಗ್ಗೆ ಮಾತನಾಡುತ್ತಾರೆ. ಚೈನಾಗೆ ಹೋಲಿಸಿಕೊಳ್ಳೋಕೆ ಆಗುತ್ತಿಲ್ಲ. 10 ವರ್ಷದಲ್ಲಿ ಚೈನಾ ಏನೆಲ್ಲಾ ಮಾಡಿದೆ. ಆದರೆ ಭಾರತದ ರೂಪಾಯಿ ಡಾಲರ್ ಮುಂದೆ ದಿನದಿಂದ ದಿನಕ್ಕೆ ಕುಸಿತ ಕಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿ ಪ್ರಜೆ ಮೇಲೆ 1 ಲಕ್ಷ ರೂ. ಸಾಲ ಹೇರಿಕೆ
ದೇಶದ ಸಾಲ ಎಷ್ಟಾಗಿದೆ ಎಂದು ಯಾಕೆ ಕೇಳಬಾರದು. 70 ವರ್ಷದಲ್ಲಿ ಆಗಿರೋ ಸಾಲಕ್ಕೆ 3 ಪಟ್ಟು ಬರೀ 10 ವರ್ಷದಲ್ಲಿ ಆಗಿದೆ. ಪ್ರಧಾನ ನರೇಂದ್ರ ಮಂತ್ರಿ ಮೋದಿ ಒಬ್ಬ ಮನುಷ್ಯನ ತಲೆ ಮೇಲೆ 1 ಲಕ್ಷ ಸಾಲ ಹೋರಿಸಿದ್ದಾರೆ. ಇದು ಸಾಧನೆ ಅಂದ್ರೆ? ಎಲರಿಗಿಂತ ದೊಡ್ಡ ಸಾಧನೆ ಇದು ಅಲ್ಲವೇ ಎಂದು ವ್ಯಂಗ್ಯವಾಡಿದರು.
ಬಲಿಷ್ಠ 10 ರಾಷ್ಟ್ರಗಳ ಪಟ್ಟಿಯಲ್ಲಿದ್ದ ಭಾರತ ದೇಶ ಇದೀಗ ಆ ಪಟ್ಟಿಯಿಂದ ಹೊರ ಬಿದ್ದಿದೆ ಥೈಲ್ಯಾಂಡ್ ಗೆ ವೀಸಾ ಫ್ರಿ ಅಂದ್ರೆ ಪವರ ಫುಲ್ ಏನ್ರಿ? ಎಂದು ಅವರು ತಮ್ಮದೇ ಧಾಟಿಯಲ್ಲಿ ಪ್ರಶ್ನಿಸಿದ್ದಾರೆ.
ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರ ಪಬ್ಲಿಸಿಟಿಯಿಂದ ದೇಶ ಹಾಳು ಆಗ್ತಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಕರೆಯಿರಿ, ನಾಣು ಚರ್ಚೆ ಸಿದ್ಧ. ಭಾರತ ದೇಶದ ಸಾಲಕ್ಕಿಂತ 20ರಷ್ಟು ಬಡ್ಡಿ ಕಟ್ಟುತ್ತಿದ್ದೇವೆ. ಬೆಳಗಾದರೆ ಸಾಕು ಕೇವಲ ಧರ್ಮ, ಜಾತಿ ಬಗ್ಗೆ ಮಾತನಾಡುತ್ತಾರೆ ಎಂದು ಬಿಜೆಪಿ ಹಾಗೂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ನಾವು ತಲೆ ಕೂದಲು ಎಷ್ಟಿವೆ ಅಷ್ಟು ದೇವಸ್ಥಾನಗಳನ್ನು ಕಟ್ಟಿದ್ದೇವೆ. 57 ಲಕ್ಷ ಕೋಟಿ ಇದ್ದ ಸಾಲ ಈಗ 225 ಕೋಟಿ ಲಕ್ಷದಷ್ಟು ಏರಿಕೆ ಆಗಿದೆ. ಟ್ಯಾಕ್ಸ್ ಕಡಿಮೆ ಮಾಡಿದರೆ ಒಪ್ಕೋಳೋಣಾ, ಆದ್ರೆ ಜಿಎಸ್ ಟಿ ಯಾಕೆ ಕಮ್ಮಿ ಮಾಡಬಾರದು. ದೇಶದಲ್ಲಿ 60% ಬಡವರೇ ಇದ್ದಾರೆ. 27 ಕೇಂದ್ರ ಸರ್ಕಾರದ ಕಂಪನಿ ಮಾರಿದ್ದಾರೆ ಎಂದು ಕಿಡಿ ಕಾರಿದರು.
ಶ್ರೀರಾಮುಲು ಬಂದರೆ ಸ್ವಾಗತ
ಬಿಜೆಪಿ ಒಳೋಳಗೆ ಪ್ರಧಾನಿ ಮೋದಿಯವರ ಬದಲಾವಣೆ ಬಗ್ಗೆ ಚರ್ಚೆ ಆಗುತ್ತಿದೆ. ಪ್ರಧಾನಿ ಮೋದಿ ವಿರುದ್ಧ ಮಾತನಾಡೋಕೆ ಯಾರಿಗೂ ಧೈರ್ಯ ಇಲ್ಲ. ಇನ್ನೂ ಬಿಜೆಪಿ ನಾಯಕ ಶ್ರೀರಾಮುಲು ಅವರು ಇಷ್ಟಪಟ್ಟು ಕಾಂಗ್ರೆಸ್‌ಗೆ ಬಂದರೆ ವೈಯಕ್ತಿಕವಾಗಿ ನಾನು ಸ್ವಾಗತ ಮಾಡುತ್ತೇನೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.












Click it and Unblock the Notifications