ಹುಬ್ಬಳ್ಳಿಯಲ್ಲಿ ಮಹಿಳಾ ಪೊಲೀಸ್ ಪೇದೆ ಮನೆಗೇ ಕನ್ನ
ಹುಬ್ಬಳ್ಳಿ, ಜುಲೈ 16: ಹುಬ್ಬಳ್ಳಿಯ ರಮೇಶ ಭವನದ ಬಳಿ ಮಹಿಳಾ ಪೊಲೀಸ್ ಪೇದೆಯೊಬ್ಬರ ಮನೆಗೆ ಕನ್ನ ತೋಡಿದ ಘಟನೆ ಶನಿವಾರ ನಡೆದಿದೆ.
ಆರತಿ ಎಂಬ ಕೇಶ್ವಾಪೂರ ಪೊಲೀಸ್ ಠಾಣೆಯ ಮಹಿಳಾ ಪೇದೆಯ ಮನೆ ಬೀಗ ಮುರಿದು ಕಳ್ಳರು ಬಂಗಾರ ಹಣ ಕದ್ದು ಪರಾರಿಯಾಗಿದ್ದಾರೆ.

ಶನಿವಾರ ರಾತ್ರಿ ಕರ್ತವ್ಯಕ್ಕೆ ಆರತಿ ಮನೆಯಿಂದ ಹೊರಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಯಾರು ಇಲ್ಲದ ವಿಷಯ ತಿಳಿದ ಖದೀಮರ ಮನೆಯ ಬೀಗ ಮುರಿದು ಒಳ ನುಗ್ಗಿದ್ದಾರೆ. ಮನೆಯಲ್ಲಿದ್ದ 13 ತೋಲೆ ಬಂಗಾರ ಮತ್ತು ಹಣ ಕದ್ದು ಪರಾರಿಯಾಗಿದ್ದಾರೆ.
ಕೇಶ್ವಾಪೂರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications