ಶಿಕ್ಷಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದವನು ಕಂಬಿ ಹಿಂದೆ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಧಾರವಾಡ, ಮಾರ್ಚ್ 18: ಬಸ್ ಗಾಗಿ ಕಾಯುತ್ತಿದ್ದ ಶಿಕ್ಷಕಿಯೊಬ್ಬರ ಅತ್ಯಾಚಾರಕ್ಕೆ ಪ್ರಯತ್ನಿಸಿದ ವ್ಯಕ್ತಿಯೊಬ್ಬನೀಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧಾರವಾಡ ತಾಲೂಕಿನ ಪ್ರಭುನಗರ-ಹೊನ್ನಾಪುರದ ನಿವಾಸಿ ಶಿವಾನಂದ ಕಮತಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ.

ಶಾಲೆಗೆ ತೆರಳುವ ಸಲುವಾಗಿ ಧಾರವಾಡ ತಾಲೂಕು ಮದಿಕೊಪ್ಪದ ಶಿಕ್ಷಕಿ ಶುಕ್ರವಾರ ಬೆಳಗ್ಗೆ ಬೆಳಗಾವಿ ರಸ್ತೆಯಲ್ಲಿರುವ ತೇಗೂರ ಬಳಿ ಮದಿಕೊಪ್ಪ ಕ್ರಾಸ್ ನಲ್ಲಿ ಬಸ್ ನಿಂದ ಇಳಿದಿದ್ದಾರೆ. ಅಲ್ಲಿಂದ ತಮ್ಮ ಗ್ರಾಮಕ್ಕೆ ತೆರಳುವ ಬಸ್ ಗಾಗಿ ಕಾಯುತ್ತಾ ನಿಂತಿದ್ದಾಗ ಶಿವಾನಂದ ಬೈಕ್ ನಲ್ಲಿ ಬಂದಿದ್ದಾನೆ. "ಬೈಕ್ ನಲ್ಲಿ ಕರೆದುಕೊಂಡು ಹೋಗ್ತೀನಿ ಬನ್ನಿ" ಎಂದು ಹತ್ತಿಸಿಕೊಂಡಿದ್ದಾನೆ.[ಸ್ನಾನ ಮಾಡುವುದನ್ನು ಇಣುಕಿ ನೋಡಿ ಹಲ್ಲೆ ಮಾಡಿದ ಭೂಪ..!]

Rape attempt accused arrested by Garaga police

ಮದಿಕೊಪ್ಪಕ್ಕೆ ಹೋಗುವ ಮಾರ್ಗ ಮಧ್ಯೆ ಜನರ ಸಂಚಾರ ಇಲ್ಲದ ಕಡೆ ಆ ಶಿಕ್ಷಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಗಾಬರಿಗೊಂಡು ಆಕೆ ಕೂಗಿಕೊಂಡಿದ್ದಾರೆ. ಆಕೆಯ ಅದೃಷ್ಟಕ್ಕೆ ಇಬ್ಬರು ಸ್ಥಳಕ್ಕೆ ಬಂದಿದ್ದಾರೆ. ಅವರನ್ನು ನೋಡುತ್ತಿದ್ದ ಹಾಗೆ ಶಿವಾನಂದ ಬೈಕ್ ನಲ್ಲಿ ಹೊರಟುಬಿಟ್ಟಿದ್ದಾನೆ. ಆದರೆ ಬೈಕ್ ನ ನಂಬರ್ ನ ಸಹಾಯದಿಂದ ಆತನನ್ನು ಪತ್ತೆ ಹಚ್ಚಿ, ಬಂಧಿಸಲಾಗಿದೆ.[ಬೆಂಗಳೂರಿನಲ್ಲಿ ಯುವಕನ ನಾಲಗೆ ಕತ್ತರಿಸಿದ ದುಷ್ಕರ್ಮಿಗಳು]

ಆರೋಪಿ ಶಿವಾನಂದ್ ಈ ಹಿಂದೆ ಕೂಡ ಇಂಥ ಕೃತ್ಯಕ್ಕೆ ಪ್ರಯತ್ನಿಸಿದ್ದ ಎಂಬ ಸಂಗತಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rape attempt accused arrested by Garaga police, Dharawad district. Shivananda Kamathi accused, he attempted to rape a teacher.
Please Wait while comments are loading...