ಬಿಜೆಪಿಯವರೇನು ಸಾಚಾಗಳಲ್ಲ: ಪ್ರಮೋದ್ ಮುತಾಲಿಕ್ ಹೀಗೆ ಅಂದಿದ್ದೇಕೆ?, ಇಲ್ಲಿದೆ ವಿವರ
ಹುಬ್ಬಳ್ಳಿ, ಜುಲೈ, 11: ಬಿಜೆಪಿಯವರು ಕಾಮಕುಮಾರ ಸ್ವಾಮೀಜಿ ಹತ್ಯೆ ಕೇಸ್ ಸಿಬಿಐಗೆ ಕೊಡಬೇಕು ಅಂತಾರೆ. ಆದರೆ ಅವರೆಣು ಸಾಚಾಗಳಲ್ಲ. ಸಿಬಿಐ ಅನ್ನೋದು ಬುರಡೆ, ಇವರು ಅಧಿಕಾರದಲ್ಲಿದ್ದಾಗ ಕೊಲೆ ಕೇಸ್‌ಗಳನ್ನು ಸಿಬಿಐಗೆ ಕೊಟ್ರು ಏನಾಯ್ತು?. 22 ಕೇಸ್‌ಗಳಿಗೆ ನ್ಯಾಯ ಸಿಕ್ಕಿದೆಯಾ ಎಂದು ವರೂರಿನ ಗುಣಧರನಂದಿ ಸ್ವಾಮೀಜಿ ಬಳಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕೊಡಿಯ ಜೈನ ಮುನಿ ಕಾಮಕುಮಾರ ಸ್ವಾಮೀಜಿ ಹತ್ಯೆ ಹಿನ್ನಲೆ ಪ್ರಮೋದ್ ಮುತಾಲಿಕ್ ಅವರು ವರೂರ ಜೈನ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಇದೇ ವೇಳೆ ಮಾತನಾಡಿದ ಅವರು, ಬಿಜೆಪಿಯವರು ಈ ಪ್ರಕರಣವನ್ನು ಇದೀಗ ಸಿಬಿಐಗೆ ವಹಿಸಿ ಅಂತೀದಾರೆ. ಇವರೇನು ಸಾಚಾಗಳಾ? ಎಂದು ಪ್ರಶ್ನಿಸಿದರು. ಹಾಗೆಯೇ ರಾಜಕಾರಣಿಗಳು ನಿರ್ಲಜ್ಜರು, ನಾನು ಹಿಂದೂತ್ವ ಉಳಿಸಲು ರಾಜಕಾರಣಕ್ಕೆ ಬಂದವನು ಎಂದರು.

ಯುಪಿ ಮಾದರಿಯಲ್ಲೇ ಶಿಕ್ಷೆಯಾಗಬೇಕು
"ಚಿಕ್ಕೋಡಿಯ ಜೈನ್ ಮುನಿ ಕಾಮಕುಮಾರ ಮಹಾರಾಜರ ಹತ್ಯೆ ಹಿಂದೆ ದೊಡ್ಡದೊಂದು ಕೈವಾಡ ಇದೆ. ಹತ್ಯೆ ಮಾಡಿದವರಿಗೆ ಉತ್ತರ ಪ್ರದೇಶ ಯೋಗಿ ಮಾದರಿಯಲ್ಲಿ ಅವರಿಗೆ ಶಿಕ್ಷೆಯಾಗಬೇಕು. ಮತ್ತು ಅವರ ಆಸ್ತಿಯನ್ನು ಜಪ್ತಿ ಮಾಡಬೇಕು. ಬುಲ್ಡೋಜರ್ ಹತ್ತಿಸಿ ಅವರ ಮೂರು ಮನೆಗಳನ್ನು ನೆಲಸಮ ಮಾಡಬೇಕು," ಎಂದು ಒತ್ತಾಯಿಸಿದರು.
ವರೂರ ಜೈನ ಮಂದಿರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇದ್ದಾಗಲೇ ಅದೆಷ್ಟೋ ಹತ್ಯೆಗಳಾಗಿವೆ. ಸಿಬಿಐ ತನಿಖೆಗೂ ವಹಿಸಿದ್ದರು. ಆದರೆ ಏನು ಪ್ರಯೋಜನ ಆಗಲಿಲ್ಲ. ಆ ಆರೋಪಿಗಳಿಗೆ ಜಾಮೀನು ಕೊಡಲು ಯಾರು ಸಾಥ್ ನೀಡಬಾರದೆಂದು ಎಲ್ಲ ವಕೀಲರ ಸಂಘಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಹಾಗೆಯೇ ಜೈನ ಮುನಿ ಹತ್ಯೆಯನ್ನು ಪೊಲೀಸ್ ತನಿಖೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗುತ್ತದೆ ಎಂದರು.
ಪ್ರಮೋದ್ ಮುತಾಲಿಕ್ ಗರಂ
ಇನ್ನು ಮುಸ್ಲಿಂ ಶಾಸಕನೊಬ್ಬ ವಿಧಾನಸೌಧದಲ್ಲಿ ನಮಾಜ್‌ಗೆ ಅನುಮತಿ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿಧಾನಸೌಧವೇನು ಮೆಕ್ಕಾ, ಮದೀನಾನಾ? ಆಜಾನ್, ಹಿಜಾಬ್ ಬಗ್ಗೆ ಚರ್ಚೆ ನಡೆದಾಗ ಗೌರವ ಕೊಟ್ಟಿಲ್ಲ. ಈಗ ನಮಾಜ್ ಮಾಡಲು ಜಾಗ ಕೇಳುತ್ತಿರುವುದು ಖಂಡನೀಯ. ಈಗ ನಮಾಜ್ ಅಂತಾರೆ, ಮುಂದೆ ದರ್ಗಾ, ಮಸೀದಿ ಮಾಡುತ್ತೇವೆ ಅಂತಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗರಂ ಆಗಿದ್ದಾರೆ.
ಮುಸ್ಲೀಮರ ಪ್ರಾರ್ಥನೆಗೆ ವಿಧಾನಸೌಧದಂತಹ ಪವಿತ್ರ ಜಾಗದಲ್ಲಿ ಅವಕಾಶ ಕೊಡಬಾರದು. ವಿಷಯ ಪ್ರಸ್ತಾಪಿಸಿದ ಶಾಸಕರ ವಿರುದ್ಧ ಹೋರಾಟ ಮಾಡುತ್ತೇವೆ.
ಪ್ರಶ್ನೆಯನ್ನು ಕಡತದಿಂದ ತೆಗೆದುಹಾಕಬೇಕು. ಇದು ತುಷ್ಟೀಕರಣದ ಪರಮಾವಧಿಯಾಗಿದೆ ಎಂದು ಆಕ್ರೋಶ ಹೊರಹಾಕಿದರು.
-
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications