• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ; ಪಾಲಿಕೆ ವಿರುದ್ಧ ಮುತಾಲಿಕ್ ಆಕ್ರೋಶ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಧಾರವಾಡ, ನವೆಂಬರ್ 9 : ಹುಬ್ಬಳ್ಳಿ ಈದ್ಗಾ (ಚೆನ್ನಮ್ಮ) ಮೈದಾನದಲ್ಲಿ ಟಿಪ್ಪು ಜಯಂತಿ ಮಾಡಲು ಅವಕಾಶ ಪಾಲಿಕೆ ಅನುಮತಿ ಕೊಟ್ಟಿರುವುದು ಅಕ್ಷಮ್ಯ ಅಪರಾಧವನ್ನು ಮಾಡಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಇಲಾಖೆ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಮುತಾಲಿಕ್, ಬಿಜೆಪಿ ಆಡಳಿತದಲ್ಲಿ ಇರುವ‌ ಪಾಲಿಕೆ ಟಿಪ್ಪು ಜಯಂತಿಗೆ ಅನುಮತಿ ದ್ರೋಹ ಮಾಡಿದೆ. ಇದು ಅತ್ಯಂತ ನೀಚವಾದ ಕೆಲಸವನ್ನು ಮಾಡಿದ್ದಾರೆ.

ಕೊರ್ಟ್‌ ಅನುಮತಿ ಪಡೆದು ಧಾರವಾಡ ಗ್ರಾಮೀಣ ಕ್ಷೇತ್ರದಲ್ಲೇ ಸ್ಪರ್ಧೆ: ವಿನಯ್ ಕುಲಕರ್ಣಿ ಕೊರ್ಟ್‌ ಅನುಮತಿ ಪಡೆದು ಧಾರವಾಡ ಗ್ರಾಮೀಣ ಕ್ಷೇತ್ರದಲ್ಲೇ ಸ್ಪರ್ಧೆ: ವಿನಯ್ ಕುಲಕರ್ಣಿ

ಇದೇ ಬಿಜೆಪಿಯವರು ಟಿಪ್ಪು ಜಯಂತಿ ಬ್ಯಾನ್ ಮಾಡಿದ್ದಾರೆ. ಇದೀಗ ಟಿಪ್ಪು ಜಯಂತಿ ಆಚರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇವರ ನಿಲುವು ಹೇಗಿದೆ ಎಂದರೆ ತತ್ವ ಬೇಕಾಗಿಲ್ಲ, ಅಧಿಕಾರ ಬೇಕು, ಓಲೈಕೆ ಬೇಕು ಎಂಬುದು ಬಟಾ ಬಟಾಬಯಲಾಗಿದೆ ಎಂದು ಕಿಡಿಕಾರಿದರು.

ಎಐಎಂಐಎಂ ಒಂದು ದೇಶದ್ರೋಹಿ ಪಕ್ಷ. ಇಂತ ಪಕ್ಷಕ್ಕೆ ಮನ್ನಣೆ ಕೊಡುತ್ತೀರಿ ಎಂದರೆ ಯಾವ ಮಟ್ಟಕ್ಕೆ ಬಂದಿದ್ದೀರಿ, ಇದನ್ನುಕನ್ನಡ ದ್ರೋಹಿ, ಮತಾಂಧ, ದೇವಸ್ಥಾನ ದ್ವಂಸ ಮಾಡಿದ ಟಿಪ್ಪು ಸುಲ್ತಾನ್ ಜಯಂತಿ ಅನುಮತಿ ನೀಡಿರುವುದಕ್ಕೆ ಕನ್ನಡಿಗರು ಕ್ಷಮೆ ಮಾಡಲು ಸಾಧ್ಯವಿಲ್ಲ. ನೀವು ಅನುಮತಿ ಕೊಟ್ಟು ಬಹಳ ದೊಡ್ಡ ತಪ್ಪು ಮಾಡಿದ್ದೀರಿ, ಕನ್ನಡಿಗರು ತಮಗೆ ಎಂದು ಕ್ಷಮೆ ಮಾಡಲ್ಲ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಟಿಪ್ಪು ಜಯಂತಿಗೆ ಅವಕಾಶ ಮಾಡಿಕೊಟ್ಟು ಹಿಂದೂಗಳಿಗೆ ದ್ರೋಹ ಮಾಡಿದ್ದೀರಿ, ಇದನ್ನ ರದ್ದು ಮಾಡಿ ವಾಪಸ್ ತಗೊಬೇಕು. ಇದು ಸರಿಯಲ್ಲ, ಇದನ್ನ ನಾನು ಖಂಡಿಸುತ್ತೆನೆ. ಗುರುವಾರ ಇದನ್ನು ವಿರೋಧಿಸಿ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಪಾಲಿಕೆಗೆ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

Pramod Muthalik Outrage Against Hubli Civil Body for give Permission to Tipu Jayanti in Idgah Midan

ಪಾಲಿಕೆಯಿಂದ ಷರತ್ತುಬದ್ಧ ಅನುಮತಿ
ಈದ್ಗಾ ಮೈದಾನದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವುದಕ್ಕಾಗಿ ಎಐಎಂಐಎಂ ಹಾಗೂ ಕೆಲವು ದಲಿತ ಸಂಘಟನೆಗಳಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುಮತಿ ಕೇಳಿದ್ದವು. ಇದರ ಬಗ್ಗೆ ಸುದೀರ್ಘ ಸಭೆ ನಡೆಸಿದ ಪಾಲಿಕೆ, ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಸೇರಿದಂತೆ ಎಲ್ಲಾ ಮಹನೀಯರ ಜಯಂತಿ ಆಚರಣೆಗೆ ಪಾಲಿಕೆ ಅನುಮತಿ ನೀಡಿದೆ.

ಇನ್ನು ಮುಂದೆ ಈದ್ಗಾ ಮೈದಾನದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ಮಾಡಬಹುದು. ಯಾರೇ ಕಾರ್ಯಕ್ರಮ ಮಾಡಿದರೆ ಹತ್ತು ಸಾವಿರ ಠೇವಣಿ ಇಡಬೇಕು. ಕಾನೂನು ಬಾಹಿರ ಚಟುವಟಿಕೆ ಮಾಡಬಾರದು ಎಂದು ಮಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ತಿಳಿಸಿದ್ದರು.

English summary
Sri ram sene chief Pramod Muthalik Outraged against BJP ruled Hubli-Dharwad munisipality for for grants Permission to celebrate Tipu Jayanti in Idgah maidan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X