ಶಾರುಖ್‌ ಖಾನ್, ದೀಪಿಕಾ ಪಡಕೋಣೆ 'ಪಠಾಣ್' ಚಿತ್ರ ಬ್ಯಾನ್‌ಗೆ ಪ್ರಮೋದ್ ಮುತಾಲಿಕ್ ಆಗ್ರಹ

ಧಾರವಾಡ, ಡಿಸೆಂಬರ್‌ 6: ಶಾರುಖ್‌ ಖಾನ್ ಹಾಗೂ ದೀಪಿಕಾ ಪಡಕೋಣೆ ಅಭಿನಯದ ಪಠಾಣ್ ಚಿತ್ರದಲ್ಲಿ ಕೇಸರಿ ಬಣ್ಣದ ಬಿಕಿನಿ ಧರಿಸಿರುವ ಬೇಷರಂ ಹಾಡಿಗೆ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧಾರವಾಡದಲ್ಲಿ ಮಾತನಾಡಿರುವ ಅವರು, ಈ ಹಾಡು ಅಶ್ಲೀಲ ಹಾಗೂ ಅಸಭ್ಯವಾಗಿದೆ. ಈ ಚಿತ್ರದ ಬೇಷರಂ ಹಾಡಿನಲ್ಲಿ ಕೇಸರಿ ಬಣ್ಣದ ಬಗ್ಗೆ ನಾಚಿಕೆಗೇಡು ಎಂಬ ಅರ್ಥದಲ್ಲಿ ಹಾಡಲಾಗಿದೆ. ಅದಕ್ಕಾಗಿ ದೇಶದಾದ್ಯಂತ ಈ ಸಿನಿಮಾ ಬಾಯ್ಕೌಟ್ ಅಭಿಯಾನ ಆರಂಭಿಸಿದ್ದು, ಇದಕ್ಕೆ ಶ್ರೀರಾಮ ಸೇನೆ ಕೂಡ ಬೆಂಬಲ ಸೂಚಿಸುತ್ತದೆ ಎಂದರು.

ಹಿಂದಿ ಚಿತ್ರರಂಗ ಮುಂಬೈನಲ್ಲಿ ಕಮ್ಯುನಿಸ್ಟರ ಹಾಗೂ ನಾಸ್ತಿಕವಾದಿಗಳ ಹಿಡಿತದಲ್ಲಿದೆ. ಇಲ್ಲಿಯವರೆಗೆ ನಿರಂತರವಾಗಿ ಹಿಂದೂಗಳ ಮೇಲೆ ಟಾರ್ಗೆಟ್ ಮಾಡಿ ಕೆಡಿಸುವ ಹಾಗೂ ನಂಬಿಕೆ ಹಾಳು ಮಾಡವ ಪ್ರವೃತ್ತಿ ಬೆಳೆದುಕೊಂಡೇ ಬಂದಿದೆ. ಈ ಪಠಾಣ್ ಸಿನಿಮಾದಲ್ಲಿ ಕೇಸರಿ ಬಣ್ಣ ಟಾರ್ಗೆಟ್ ಮಾಡಿ ಬೇಷರಂ ಹಾಡು ಹಾಕಲಾಗಿದೆ. ಇದು ಅಶ್ಲೀಲ ಹಾಡು ಎಂದು ಆಕ್ರೋಶ ವ್ಯಕ್ತಪಡಿಸಿದರು.

Pramod Muthalik Demands To Ban Shah Rukh Khan, Deepika Padukone Pathan Movie

ಇನ್ನು ಲಿವಿಂಗ್ ಟುಗೆದರ್, ಲವ್ ಜಿಹಾದ್ ಹಾಗೂ ಇತರ ಅಪರಾಧ ಕೃತ್ಯಗಳಿಗೆ, ಈ ರೀತಿಯ ಮಾನಸಿಕತೆಯ ಚಲನಚಿತ್ರಗಳಿಂದಲೇ ಹೊರತು ಬೇರೆ ಯಾವುದರಿಂದಲೂ ಅಲ್ಲ. ಸೆನ್ಸಾರ್ ಮಂಡಳಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸಮಾಜ ಹಾಳು ಮಾಡುವ ಇಂತಹ ಚಲನಚಿತ್ರಗಳನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.

ಪಿಕೆ ಎಂಬ ಸಿನಿಮಾದಲ್ಲಿ ನಮ್ಮ ದೇವರುಗಳನ್ನು ಎಷ್ಟು ಅಸಭ್ಯವಾಗಿ ತೋರಿಸಿದ್ದಾರೆ. ಪಾಕಿಸ್ತಾನದ ಹುಡುಗ ಹಾಗೂ ಭಾರತ ದೇಶದ ಹುಡುಗಿಯ ಜೊತೆ ಪ್ರೀತಿ ಪ್ರೇಮ ಆಗುವುದನ್ನು ತೋರಿಸಿದ್ದಾರೆ. ಪಾಕಿಸ್ತಾನದ ಹುಡುಗನೇ ಯಾಕೆ ಆಗಬೇಕು? ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+