ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

225 ಮೀಟರ್ ಆಳದ ಝಂಜ್ರಾ ಭೂತಳ ಗಣಿಯನ್ನು ವೀಕ್ಷಣೆ ಮಾಡಿದ ಪ್ರಲ್ಹಾದ್‌ ಜೋಶಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ನವೆಂಬರ್‌, 24: ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್‌ನ ಪಶ್ಚಿಮ ಬಂಗಾಳದ ಝಂಜ್ರಾ ಭೂತಳ ಗಣಿಯನ್ನು ಗುರುವಾರ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿಯವರು ಪರಿಶೀಲಿಸಿದರು. ಈ ಗಣಿಯು ಭೂಮಿಯ ಮೇಲ್ಮೈನಿಂದ 225 ಮೀಟರ್ ಆಳವನ್ನು ಹೊಂದಿದ್ದು, ಇದು ವಾರ್ಷಿಕ 3.5 ಮಿಲಿಯನ್ ಟನ್ ಸಾಮರ್ಥ್ಯದಲ್ಲಿ ಭಾರತದ ಅತೀ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ಯಾಂತ್ರೀಕೃತ ಭೂಗತ ಗಣಿಯಾಗಿದೆ.

ನಂತರ ಈ ಬಗ್ಗೆ ಪ್ರಲ್ಹಾದ್‌ ಜೋಶಿ ಮಾತನಾಡಿದ್ದು, ಇದೇ ಮೊದಲ ಬಾರಿಗೆ ನಾನು 225 ಮೀಟರ್ ಭೂಗತ ಗಣಿಯೊಳಗೆ ಪ್ರವೇಶಿಸಿ ಗಣಿಗಾರಿಕೆಯನ್ನು ವೀಕ್ಷಿಸಿದ್ದೇವೆ. ಇಂತಹ ವಿಷಮ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವ ಗಣಿ ಕಾರ್ಮಿಕರ ಕಾರ್ಯಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ. ಅಲ್ಲದೆ ಈ ಎಲ್ಲ ಕಾರ್ಯಗಳಿಗೆ ಮಾರ್ಗದರ್ಶನ ಮಾಡುವ ಗಣಿ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ರಾಯಚೂರಿಗೆ ಏಮ್ಸ್‌ ಬರಲಿದೆ ಎಂದ ಸಿಎಂ: ಹುಬ್ಬಳ್ಳಿ-ಧಾರವಾಡ ಜನರಲ್ಲಿ ಅಸಮಾಧಾನ!ರಾಯಚೂರಿಗೆ ಏಮ್ಸ್‌ ಬರಲಿದೆ ಎಂದ ಸಿಎಂ: ಹುಬ್ಬಳ್ಳಿ-ಧಾರವಾಡ ಜನರಲ್ಲಿ ಅಸಮಾಧಾನ!

ಗುರುವಾರದಂದು ಪ್ರಲ್ಹಾದ ಜೋಶಿಯವರು ಗಣಿ ಇಲಾಖೆ ಅಧಿಕಾರಿಗಳೊಂದಿಗೆ ರಕ್ಷಣಾ ಕವಚ ಧರಿಸಿ 225 ಮೀಟರ್ ಆಳದ ಭೂಗತ ಗಣಿಯನ್ನು ವೀಕ್ಷಣೆ ಮಾಡಿದರು. ಇದುವರೆಗೆ ಯಾವುದೇ ಗಣಿ ಸಚಿವರು ಇಂತಹ ಸಾಹಸಕ್ಕೆ ಒಡ್ಡಿಕೊಂಡಿಲ್ಲ. ಆದರೆ ಈ ಸಾಹಸ ಕಾರ್ಯವನ್ನು ಜೋಶಿಯವರು ಮಾಡಿದ್ದು, ಎಲ್ಲರ ಪ್ರಶಂಸೆಗೆ ಪಾತ್ರರಾದರು. ಜೋಶಿ ಅವರ ಈ ಸಾಹಸ ಕಾರ್ಯಕ್ಕೆ ಗಣಿ ಇಲಾಖೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Pralhad Joshi who visited 225 meter deep Jhanjra mine

ಹೆಚ್ಚಿನ ಕಲ್ಲಿದ್ದಲು ಉತ್ಪಾದನೆಗೆ ಸೂಚನೆ
ಈ ಸಮಯದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅಧಿಕಾರಿಗಳೊಂದಿಗೆ ಮಾತನಾಡಿ, ಕಲ್ಲಿದ್ದಲು ಉತ್ಪಾದನೆಯನ್ನು ಮತ್ತಷ್ಟು ಹೆಚ್ಚು ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ. ಉತ್ಪಾದನಾ ಸಾಮರ್ಥ್ಯವನ್ನು ವರ್ಷಕ್ಕೆ 2 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಮಾಡಲು ಶ್ರಮವಹಿಸುವಂತೆ ಸೂಚಿಸಿದರು. ಈ ಸಮಯದಲ್ಲಿ ಎರಡು ಕಡಿಮೆ ಆಳದ ನಿರಂತರ ಗಣಿಗಾರಿಕೆಯನ್ನು ಪರಿಚಯಿಸಲಾಗುವುದು ಎಂದು ಹೇಳಿದರು. 5 ಮೆಟ್ರಿಕ್ ಟನ್ ಸಾಮರ್ಥ್ಯದ ಕಲ್ಲಿದ್ದಲು ಹೊರ ತೆಗೆಯುವಿಕೆಯನ್ನು ಹೆಚ್ಚಿಸಲು ರೈಲ್ವೆ ಕಾರಿಡಾರ್ ನಿರ್ಮಾಣ ಹಂತದಲ್ಲಿದೆ. ಝಂಜ್ರಾ ಕಲ್ಲಿದ್ದಲು ಗಣಿಯು ಭೂಗತ ಗಣಿಯಾಗಿದ್ದು, ಕೋಲ್ ಇಂಡಿಯಾದ ಅಂಗ ಸಂಸ್ಥೆಯಾದ ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್‌ನಿಂದ ನಿರ್ವಹಿಸಲ್ಪಡುತ್ತದೆ. ಇದು ವಾರ್ಷಿಕ 3.5 ಮಿಲಿಯನ್ ಟನ್‌ಗಳನ್ನು ಕಲ್ಲಿದ್ದಲನ್ನು ಉತ್ಪಾದಿಸುತ್ತದೆ ಎಂದರು.

Pralhad Joshi who visited 225 meter deep Jhanjra mine

2019 ರಲ್ಲಿ ಇದು ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನಿಂದ ಎಲ್ಲಾ ಭೂಗತ ಕಲ್ಲಿದ್ದಲು ಉತ್ಪಾದನೆಯಲ್ಲಿ ಶೇಕಡಾ 38ರಷ್ಟಿದೆ. ಈಸ್ಟರ್ನ್ ಕೋಲ್‌ಫೀಲ್ಡ್ಸ್‌ನ ಝಂಜ್ರಾ ಪ್ರದೇಶವು ಭೂಗತ ಯಾಂತ್ರೀಕೃತ ಝಂಜ್ರಾ ಎಂಬ ಒಂದು ಕಲ್ಲಿದ್ದಲು ಗಣಿಯನ್ನು ಮಾತ್ರ ಒಳಗೊಂಡಿದೆ. ಇನ್ನು ಈ ಝಂಜ್ರಾ ಕಲ್ಲಿದ್ದಲು ಗಣಿ 11.50 ಕಿಲೋ ಮೀಟರ್‌ 2 ಮೇಲ್ಮೈ ವಿಸ್ತೀರ್ಣವನ್ನು ಹೊಂದಿದೆ. ಇದು ಒಟ್ಟು 200 ಮಿಲಿಯನ್ ಟನ್ ಕಲ್ಲಿದ್ದಲು ಮೀಸಲು ಹೊಂದಿದೆ. ಈ ಗಣಿ ಅಭಿವೃದ್ಧಿಯನ್ನು 1980ರ ದಶಕದಲ್ಲಿ ಪ್ರಾರಂಭಿಸಲಾಯಿತು. ಭೂಗತ ಗಣಿಗಾರಿಕೆಗೆ ಹೋಲಿಸಿದರೆ ಇದು ಪರಿಸರ ಸ್ನೇಹಿಯಾಗಿದೆ ಎನ್ನಲಾಗಿದೆ.

English summary
Central minister Pralhad Joshi visited 225 meter deep Jhanjra mine in West Bengal, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X