ಜಗದೀಶ್ ಶೆಟ್ಟರ್ ಬಿಜೆಪಿಗೆ ಸೇರ್ಪಡೆಗೆ ಏನಂದ್ರು ಪ್ರಹ್ಲಾದ್ ಜೋಶಿ?: ಸವದಿಗೂ ಸ್ವಾಗತ ಹೇಳಿದ್ಯಾರು?
ಹುಬ್ಬಳ್ಳಿ, ಜನವರಿ 28:ವಿಧಾನಸಭಾ ಚುನಾವಣೆಗೂ ಮೊದಲು ಕಾಂಗ್ರೆಸ್ ಸೇರಿ ಇದೀಗ ಲೋಕಸಭಾ ಚುನಾವಣೆಗೂ ಮುನ್ನ ಮತ್ತೆ ಬಿಜೆಪಿಗೆ ವಾಪಾಸ್ ಬಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಡೆ ಭಾರಿ ಚರ್ಚೆಯಾಗಿತ್ತು. ಇದೀಗ ಅವರ ಸೇರ್ಪಡೆಗೆ ಧಾರವಾಡ ಲೋಕಸಭಾ ಕ್ಷೇತ್ರ ಪ್ರತಿನಿಧಿಸುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳಿರುವುದು ಸಂತೋಷ ತಂದಿದೆ. ನಾನು ಬಹಳ ಖುಷಿಯಾಗಿದ್ದೇನೆ. ಅವರ ಸೇರ್ಪಡೆಗೆ ನನ್ನ ವಿರೋಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಜಗದೀಶ್ ಶೆಟ್ಟರ್ ಅವರು ಘರ್‌ವಾಪ್ಸಿ ಆಗಿ ನನಗೆ ಹೇಳಿದ್ದರು. ನನಗೆ ದೊಡ್ಡವರ ಜೊತೆ ಮೀಟಿಂಗ್ ಇತ್ತು ಹಾಗಾಗಿ ಹೋಗೋಕೆ ಆಗಿಲ್ಲ. ನಾವು ಈ ಬಾರಿಯ ಚುನಾವಣೆಯಲ್ಲಿ ಎಲ್ಲ 28 ಕ್ಷೇತ್ರಗಳನ್ನು ಗೆಲ್ಲಬೇಕಿದೆ. ಈ ಮಧ್ಯೆ ಶೆಟ್ಟರ್ ಪಕ್ಷ ಸೇರ್ಪಡೆ ಆಗಿದ್ದು, ಅದಕ್ಕೆ ನನ್ನ ವಿರೋಧ ಇಲ್ಲ. ವಿರೋಧವಿದ್ದರೆ ನಿಮಗೆ ಹೇಳುತ್ತಿದ್ದೆ ಎಂದು ತಿಳಿಸಿದರು.
ಲಕ್ಷ್ಮಣ್ ಸವದಿ ಬಂದರೂ ಸ್ವಾಗತ
ನಾನು ಆರು ತಿಂಗಳ ಹಿಂದೆ ಅವರು ವಾಪಸ್ ಬರೋದಾಗಿ ಹೇಳಿದ್ದೆ. ಈ ಬಗ್ಗೆ ಸ್ಥಳೀಯ ನಾಯಕರಿಗೆ ಮೊದಲೇ ಗೊತ್ತಿತ್ತು. ಜಗದೀಶ್ ಶೆಟ್ಟರ್ ಅವರ ಮರಳಿ ಬಿಜೆಪಿಗೆ ಬಂದಿರೋದು ಸಂತೋಷ ತಂದಿದೆ. ಉಳಿದ ವಿಚಾರಗಳೆನ್ನಲ್ಲ ಅವರನ್ನೇ ಕೇಳಿ ಎಂದರು.
ಅವರ ಸೇರ್ಪಡೆ ವೇಳೆ ಅರವಿಂದ ಬೆಲ್ಲದ್ ನನ್ನ ಜೊತೆ ಇರಲಿಲ್ಲ. ಅವರ ಸೇರ್ಪಡೆ ಹಿಂದಿನ ದಿನ ಅರವಿಂದ್ ಬೆಲ್ಲದ್ ಜೊತೆಗೆ ಶೆಟ್ಟರ್ ಇದ್ದರು. ನಮಗೆ ಲಿಂಗಾಯತ ಸೇರಿ ಎಲ್ಲರೂ ಬೇಕು. ಶಾಸಕ ಲಕ್ಷ್ಮಣ ಸವದಿ ಅವರಲ್ಲಿ ನಮ್ಮ ವೈಚಾರಿಕತೆ ರಕ್ತ ಇದೆ ಅವರು ಬಂದರೂ ಸ್ವಾಗತ ಎಂದು ತಿಳಿಸಿದರು.

ಧಾರವಾಡ ಅಭ್ಯರ್ಥಿ ಇವರೇ: ಬೆಲ್ಲದ್
ಧಾರವಾಡ ಲೋಕಸಭೆ ಚುನಾವಣೆ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅರವಿಂದ್ ಬೆಲ್ಲದ್ ಅವರು, ಪ್ರಹ್ಲಾದ್ ಜೋಶಿಯವರನ್ನು ಬಿಟ್ರೆ ಮತ್ತಿನ್ನೇನು ಎಂದು ಸುದ್ದಿಗಾರರ ಪ್ರಶ್ನೆಗೆ ಧ್ವನಿಗೂಡಿಸಿದರು. ಧಾರವಾಡ ಲೋಕಸಭಾ ಚುನಾವಣೆಗೆ ಜೋಶಿ ಅವರೇ, ಅವರನ್ನು ಬಿಟ್ಟು ಮತ್ತೆ ಯಾರಿದ್ದಾರೆ ಎಂಬಂತೆ ಬೆಲ್ಲದ್ ಹೇಳಿದರು.
ಧಾರವಾಡ ಟಿಕೆಟ್ ಬಗ್ಗೆ ಯಾವ ಚರ್ಚೆ ಇಲ್ಲ, ಸಾಹೇಬರೇ (ಪ್ರಹ್ಲಾದ್ ಜೋಶಿ) ಅಭ್ಯರ್ಥಿ. ಬಿಜೆಪಿ ಪಕ್ಷದೊಳಗೆ ಈಗಾಗಲೇ ಚುನಾವಣೆ ತಯಾರಿ ನಡೆಸಿದೆ. ಅಭ್ಯರ್ಥಿಗಳ ಹೆಸರು ಘೋಷಣೆ ಮುನ್ನ ನಾನ ಏನೂ ಮಾತಾಡುವುದಿಲ್ಲ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
ನಾನು ಚುನಾವಣೆ ತಯಾರಿ ನಡೆಸಿದ್ದೇನೆ. ಧಾರವಾಡ ಲೋಕಸಭೆ ಚುನಾವಣೆಗೆ ನಾನೇ ಅಭ್ಯರ್ಥಿ. ಗಾಲಿ ಜನಾರ್ದನ ರೆಡ್ಡಿ ಕೂಡಾ ಓರಿಜನಲ್ ಬಿಜೆಪಿ ಅವರು, ಅವರು ಬರಬಹುದು. ಇವತ್ತು ಜಗದೀಶ್ ಶೆಟ್ಟರ್ ಕಾರ್ಯಕಾರಿಣಿ ಸಭೆಯಲ್ಲಿ ಸಿಕ್ಕಿದ್ದರು. ವೆಲಕಮ್ ಬ್ಯಾಕ್ ಎಂದು ಹೇಳಿದ್ದೇನೆ. ರಾಜ್ಯದಲ್ಲಿ ಸರ್ಕಾರ ಐದು ವರ್ಷ ನಡೆಸಬೇಕು. ಆದ್ರೆ ಅವರು ಐದು ವರ್ಷ ಸರ್ಕಾರ ಸರಿಯಾಗಿ ನಡೆಸುತ್ತಿಲ್ಲ ಎಂದು ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ ಎಂದರು.
ಜನರಿಗೂ ಆಕ್ರೋಶ ಇದೆ, ನಮಗೂ ಅವಕಾಶ ಇದೆ. ಎಎಪಿ ಸಿಎಂ ಅರವಿಂದ್ ಕೇಜ್ರೀವಾಲ್ ಗೆ ನಾಚಿಕೆ ಆಗಬೇಕು. ಕೇಜ್ರೀವಾಲ್ ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡಿ, ಇವತ್ತು ಭ್ರಷ್ಟಾಚಾರದಿಂದ ಬಂದ ಹಣದಿಂದಲೇ ಜೀವನ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.












Click it and Unblock the Notifications