ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಲ್ಲಿ ಊಟದ ತಟ್ಟೆ, ಲೋಟ, ಬೌಲ್ ಉಚಿತ!

ಸಭೆ ಸಮಾರಂಭ, ಮದುವೆ, ಜನ್ಮದಿನ ಆಚರಣೆ ಇನ್ನಿತರ ಕಾರ್ಯಕ್ರಮಗಳಲ್ಲಿ ಅಪಾಯಕಾರಿ ಪ್ಲಾಸಿಕ್, ಥರ್ಮೋಕೋಲ್, ಸ್ಟೈರೋಫೋಮ್, ಪೇಪರ್ ತಟ್ಟೆ ಲೋಟ ಬಳಕೆಗೆ ಕಡಿವಾಣ ಹಾಕಲು ಬೆಂಗಳೂರು ಮೂಲದ ಅದಮ್ಯ ಚೇತನ ಸಂಸ್ಥೆ ಹುಬ್ಬಳ್ಳಿಯಲ್ಲಿ ನೂತನ ಪ್ಲೇಟ್ ಬ್ಯಾಂಕ

By Basavaraj
|
Google Oneindia Kannada News

ಹುಬ್ಬಳ್ಳಿ, ಜುಲೈ 4: ಹುಬ್ಬಳ್ಳಿ-ಧಾರವಾಡ ಜನರು ಮದುವೆ ಸೇರಿದಂತೆ ವೈಯಕ್ತಿಕ ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವುದು ತುಂಬಾ ಸುಲಭ. ಹೇಗೆ ಅಂತೀರಾ? ಮುಂದೆ ಓದಿ.

ಸಭೆ ಸಮಾರಂಭ, ಮದುವೆ, ಜನ್ಮದಿನ ಆಚರಣೆ ಇನ್ನಿತರ ಕಾರ್ಯಕ್ರಮಗಳಲ್ಲಿ ಅಪಾಯಕಾರಿ ಪ್ಲಾಸಿಕ್, ಥರ್ಮೋಕೋಲ್, ಸ್ಟೈರೋಫೋಮ್, ಪೇಪರ್ ತಟ್ಟೆ ಲೋಟ ಬಳಕೆಗೆ ಕಡಿವಾಣ ಹಾಕಲು ಬೆಂಗಳೂರು ಮೂಲದ ಅದಮ್ಯ ಚೇತನ ಸಂಸ್ಥೆ ಹುಬ್ಬಳ್ಳಿಯಲ್ಲಿ ನೂತನ ಪ್ಲೇಟ್ ಬ್ಯಾಂಕ್ ಆರಂಭಿಸಿದೆ.

People get Plate, glasses at plate bank in free of coast

ಉಚಿತವಾಗಿ ಪರಿಕರಗಳು: ಈ ಪ್ಲೇಟ್ ಬ್ಯಾಂಕ್ ಮೂಲಕ ಜನರು ಅಗತ್ಯ ಸ್ಟೀಲ್ ಲೋಟಾ ಹಾಗೂ ತಟ್ಟೆಗಳನ್ನು ಉಚಿತವಾಗಿ ಉಪಯೋಸಿ ಮತ್ತೆ ಮರಳಿಸಬಹುದಾಗಿದೆ. ಈ ವ್ಯವಸ್ಥೆ ಈಗಾಗಲೇ ಬೆಂಗಳೂರಿನಲ್ಲಿ ಆರಂಭವಾಗಿ ವರ್ಷ ಕಳೆದಿದ್ದು, ಈಗ ಉತ್ತರ ಕರ್ನಾಟಕದ ಪ್ರಮುಖ ನಗರಿ ಹುಬ್ಬಳ್ಳಿಯಲ್ಲಿಯೂ ಆರಂಭವಾಗಿದೆ.

ಈ ಅದಮ್ಯ ಚೇತನದ ರೂವಾರಿ ಬೇರಾರು ಅಲ್ಲ ಕೇಂದ್ರ ಸಚಿವ ಅನಂತಕುಮಾರ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರು.

೧೦ ಸಾವಿರ ತಟ್ಟೆ, ಲೋಟಾ: ೨೦೧೬ರಲ್ಲಿ ನಡೆದ ಅನಂತಕುಮಾರ್-ತೇಜಸ್ವಿನಿ ದಂಪತಿಯ ಮಗಳು ಐಶ್ವರ್ಯ ಮದುವೆಗೆ ೧೦,೦೦೦ ತಟ್ಟೆ, ಲೋಟಾ ಹಾಗೂ ಇನ್ನಿತರ ಸಾಮಗ್ರಿಗಳನ್ನು ಖರೀದಿಸಲಾಗಿತ್ತು. ಅವುಗಳನ್ನು ಉತ್ತಮ ಕಾರ್ಯಕ್ಕೆ ಬಳಸುವ ಉದ್ದೇಶ ಹೊಂದಿದ್ದ ಇವರಿಗೆ 'ಪ್ಲೇಟ್ ಬ್ಯಾಂಕ್' ಪರಿಕಲ್ಪನೆ ಹೊಳೆಯಿತು. ಮೊದಲು ಬೆಂಗಳೂರಿನಲ್ಲಿ ಆರಂಭಿಸಲಾಯಿತು. ಈಗ ಹುಬ್ಬಳ್ಳಿ ನಂತರ ಕಲಬುರ್ಗಿ, ರಾಜಸ್ಥಾನದಲ್ಲಿ ಈ ಯೋಜನೆ ಆರಂಭಿಸಲಾಗುವುದು ಎಂದು ಸಂಸ್ಥೆಯ ಮೂಲಗಳು ಖಚಿತಪಡಿಸಿವೆ.

People get Plate, glasses at plate bank in free of coast

ಉಚಿತ ಪ್ಲೇಟ್: ಅದಮ್ಯ ಚೇತನ ಸಂಸ್ಥೆಯ ಹುಬ್ಬಳ್ಳಿ ಪ್ಲೇಟ್ ಬ್ಯಾಂಕ್‌ನಲ್ಲಿ ೨೦೦೦ ಸ್ಟೀಲ್ ತಟ್ಟೆ , ಕಾಫಿ, ನೀರು, ಮಜ್ಜಿಗೆ ಲೋಟಗಳು, ಬಟ್ಟಲು, ಐಸ್ ಕ್ರೀಮ್, ಸಲಾಡ್ ಬೌಲ್‌ಗಳು ಇದ್ದು, ಈ ಸೌಲಭ್ಯ ಪಡೆಯಲು ಸಾರ್ವಜನಿಕರು ತಟ್ಟೆ ಲೋಟದ ಬೆಲೆಯ ಚೆಕ್ಕನ್ನು ಠೇವಣಿಯಾಗಿ ನೀಡಬೇಕಾಗುತ್ತದೆ. ಸಾಮುಗ್ರಿಗಳನ್ನು ಹಿಂದಿರುಗಿಸಿದ ಬಳಿಕ ಚೆಕ್ಕನ್ನು ಮರಳಿ ಪಡೆಯಬಹುದು. ಇದಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ಪ್ಲೇಟ್ ಬ್ಯಾಂಕ್‌ನಲ್ಲಿ ಉಚಿತ ಪ್ಲೇಟ್ ದೊರೆಯುತ್ತವೆ.

ಅಪಾಯಕಾರಿ ವಸ್ತುಗಳು: ಪ್ಲಾಸ್ಟಿಕ್‌ನಲ್ಲಿ ಥಾಲೆಟ್ಸ್, ಬಿಸ್‌ಫಿನಾಲ್ ಎಂಬ ರಾಸಾಯನಿಕ ವಸ್ತುಗಳು ಆಹಾರದ ಜೊತೆಗೆ ಸೇರಿ ವಿಷಪೂರಿತ ಮಾಡುತ್ತವೆ. ವಿಶೇಷವಾಗಿ ಬಿಸಿ ಪದಾರ್ಥದ ಜೊತೆ ಪ್ರತಿಕ್ರಿಯಿಸುವುದಲ್ಲದೆ, ತಂಪು ಪಾನೀಯ ಪದಾರ್ಥಗಳ ಜೊತೆಗೂ ಪ್ರತಿಕ್ರಿಯಿಸುತ್ತದೆ. ಊಟಕ್ಕಾಗಿ ಇಂಥ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸುವುದರಿಂದ ಕ್ಯಾನ್ಸರ್ ಕಾಯಿಲೆಗೆ ಸುಲಭವಾಗಿ ತುತ್ತಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಹಾರ್ಮೋನ್‌ಗಳು ವ್ಯತ್ಯಾಸ ಆಗುವುದರಿಂದ ಶ್ರವಣ ಹಾಗೂ ದೃಷ್ಟಿ ದೊಷಕ್ಕೆ ಕಾರಣವಾಗಬಹುದು. ಈ ಎಲ್ಲ ಕಾರಣಗಳಿಂದ ಅದಮ್ಯ ಚೇತನ ಸಂಸ್ಥೆ ಈ ಯೋಜನೆ ಆರಂಭಿಸಿದೆ.

ಅಧ್ಯಕ್ಷರೇನಂತಾರೆ?
ಅದಮ್ಯ ಚೇತನ ಸಂಸ್ಥೆಯ ಉದ್ಧೇಶ ಸಸಿ ನೆಡುವುದರ ಮೂಲಕ ಪರಿಸರ ರಕ್ಷಣೆ ಮಾಡುವುದು. ಪ್ಲೇಟ್ ಬ್ಯಾಂಕ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿಸುವುದು. ನಮ್ಮ ಪ್ರಯತ್ನಕ್ಕೆ ಸರ್ಕಾರ ಹಾಗೂ ಜನರ ಸಹಕಾರ ಅಗತ್ಯ ಎನ್ನುತ್ತಾರೆ ಅದಮ್ಯ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ.

English summary
Adamya Chetana NGO started ‘Plate Bank’ in Hubballi recently, public can get plates, glasses, bowls for use in functions, events personal and public uses in free of coast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X