ಹುಬ್ಬಳ್ಳಿಯಲ್ಲಿ DCM ಡಿಕೆಶಿ ಸ್ವಾಗತಕ್ಕೆ ಕೇವಲ ಒಬ್ಬ ಶಾಸಕ ಮಾತ್ರ ಆಗಮನ, ಇನ್ನುಳಿದವರು ಗೈರು, ಏನಿದರ ರಹಸ್ಯ?
ಹುಬ್ಬಳ್ಳಿ, ನವೆಂಬರ್, 03: ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಜೋರಾಗಿಯೇ ಕೇಳಿಬರುತ್ತಿದೆ. ಸ್ವಪಕ್ಷದಲ್ಲೇ ಭಿನ್ನಮತಗಳು ಕೂಡ ಭುಗಿಲೆದ್ದಿವೆ. ಇದರ ಬೆನ್ನಲೇ ಇದೀಗ ಇಂದು (ನವೆಂಬರ್ 03) ಡಿ.ಕೆ.ಶಿವಕುಮಾರ್ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಈ ವೇಳೆ ಅವರನ್ನು ಸ್ವಾಗತಿಸಲು ಒಬ್ಬೇ ಒಬ್ಬ ಶಾಸಕರು ಮಾತ್ರ ಆಗಮಿಸಿದ್ದರು. ಇನ್ನು ಉಳಿದ ಶಾಸಕರು ಗೈರಾಗಿದ್ದ ಈ ಸನ್ನೀವೇಶ ಹಲವು ಊಹಾಪೋಹಗಳಿಗೂ ಕಾರಣವಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಜನ ಕಾಂಗ್ರೆಸ್ ಶಾಸಕರಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ಸ್ವಾಗತಕ್ಕೆ ನವಲಗುಂದ ಶಾಸಕ ಎನ್.ಎಚ್.ಕೋನರೆಡ್ಡಿ ಮಾತ್ರ ಆಗಮಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಲಘಟಗಿ ಶಾಸಕ ಸಂತೋಷ್ ಲಾಡ್, ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಅಬ್ಬಯ್ಯ ಗೈರಾಗಿದ್ದಾರೆ. ಇನ್ನು ಕೋರ್ಟ್ ಆದೇಶ ಹಿನ್ನೆಲೆ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಜಿಲ್ಲಯೊಳಗೆ ಪ್ರವೇಶ ಮಾಡುವಂತಿಲ್ಲ.

ಒಂದು ರಾಜಕೀಯ ಪಕ್ಷ ಅಂದಮೇಲೆ ಇರಿಸು ಮುನಿಸುಗಳು ಇದ್ದೇ ಇರುತ್ತವೆ. ಪಕ್ಷದ ನಾಯಕರು ಯಾರದರೂ ತಮ್ಮ ಕ್ಷೇತ್ರಗಳಿಗೆ ಬಂದರೆ ಅವರನ್ನು ಸ್ವಾಗಿತಿಸುವ ಕರ್ತವ್ಯ ಶಾಸಕರದ್ದಾಗಿರುತ್ತದೆ. ಆದರೆ ಇದೀಗ ಹುಬ್ಬಳ್ಳಿಯಲ್ಲಿ ಡಿ.ಕೆಶಿವಕುಮಾರ್ ಅವರನ್ನು ಸ್ವಾಗತ ಮಾಡಲಿಕ್ಕೆ ಒಬ್ಬೇ ಒಬ್ಬ ಶಾಸಕ ಬಿಟ್ಟರೆ ಇನ್ಯಾರೂ ಬರದಿರುವುದು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಂತಿದೆ. ಹಾಗೆಯೇ ಕೆಲವು ದಿನಗಳ ಹಿಂದೆಯಷ್ಟೇ ಬೆಳಗಾವಿಗೆ ಭೇಟಿ ನೀಡಿದಾಗಲೂ ಇಂತಹದ್ದೇ ಒಂದು ಘಟನೆ ನಡೆದಿತ್ತು.












Click it and Unblock the Notifications