ಒಲಿಂಪಿಕ್ 2017: ಕಬ್ಬಡ್ಡಿ ಪಂದ್ಯಗಳಲ್ಲಿ ಬೆಂಗಳೂರು ತಂಡಗಳ ಪಾರುಪತ್ಯ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಫೆಬ್ರವರಿ, 5: ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಾಜ್ಯ ಒಲಂಪಿಕ್ ಕ್ರೀಡಾಕೂಟದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರು ತಂಡಗಳು ಪಾರಮ್ಯ ಮೆರೆದಿವೆ. ಮಹಿಳೆಯರು ಮತ್ತು ಪುರುಷರ ವಿಭಾಗದ ಮೊದಲ ಸುತ್ತಿನ ಪಂದ್ಯಗಳಲ್ಲಿ ಬೆಂಗಳೂರು ತಂಡಗಳೇ ಜಯ ಸಾಧಿಸಿವೆ. [ಹುಬ್ಬಳ್ಳಿಯಲ್ಲಿ 10 ರೂ. ನಾಣ್ಯ ವದಂತಿ ಬಗ್ಗೆ ಬ್ಯಾಂಕ್ ಸ್ಪಷ್ಟನೆ]

ಶನಿವಾರ ಸಂಜೆಯಿಂದ ಮಹಿಳಾ ಮತ್ತು ಪುರುಷರ ಲೀಗ್ ಪಂದ್ಯಗಳು ಹುಬ್ಬಳ್ಳಿಯಲ್ಲಿ ನೆಹರೂ ಮೈದಾನದಲ್ಲಿ ಆರಂಭವಾದವು. ಮೊದಲ ಪಂದ್ಯದಿಂದಲೇ ಬೆಂಗಳೂರು ತಂಡಗಳ ಜಯದ ಓಟ ಆರಂಭವಾಯಿತು. ಇನ್ನು ಮಹಿಳೆಯರ ಕಬ್ಬಡ್ಡಿಯಲ್ಲೂ ಮೊದಲ ಪಂದ್ಯದಿಂದ ಬೆಂಗಳೂರು ತಂಡಗಳು ಗೆಲುವು ಕಾಯ್ದುಕೊಂಡು ಬಂದಿವೆ. [ಒಲಿಂಪಿಕ್ 2017: ವೀಕ್ಷಕರು, ಕ್ರೀಡಾಪಟುಗಳಿಗೆ ಜೀವ ವಿಮೆ]

ಎಚ್ಎಎಲ್ ಗೆ ಜಯ

ಎಚ್ಎಎಲ್ ಗೆ ಜಯ

ಪುರುಷರ ಕಬ್ಬಡಿಯಲ್ಲಿ ಮೊದಲ ಪಂದ್ಯ ಬೆಂಗಳೂರಿನ ಬಿಎಂಟಿಸಿ ಮತ್ತು ಹೆಚ್ಎಎಲ್ ತಂಡಗಳ ನಡುವೆ ನಡೆಯಿತು.
ಎಚ್ಎಎಲ್ ತಂಡವು 39-31 ಅಂಕಗಳಿಂದ ಬಿಎಂಟಿಸಿ ತಂಡವನ್ನು ಮಣಿಸಿತು. ಆರಂಭದಿಂದ ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯದಲ್ಲಿ 8 ಅಂಕಗಳ ಅಂತರದಲ್ಲಿ ಬಿಎಂಟಿಸಿ ಸೋಲಬೇಕಾಯಿತು.

ವಿಜಯಾ ಬ್ಯಾಂಕಿಗೆ ಭರ್ಜರಿ ಜಯ

ವಿಜಯಾ ಬ್ಯಾಂಕಿಗೆ ಭರ್ಜರಿ ಜಯ

ಎರಡನೇ ಪಂದ್ಯದಲ್ಲಿ ಬೆಂಗಳೂರಿನ ವಿಜಯಾ ಬ್ಯಾಂಕ್ ಹಾಗೂ ಧಾರವಾಡ ತಂಡಗಳ ನಡುವಿನ ಪಂದ್ಯ ಏಕಪಕ್ಷೀಯವಾಗಿ ಸಾಗಿತು. ಬೆಂಗಳೂರಿನ ವಿಜಯ ಬ್ಯಾಂಕ್ ತಂಡವು 57-19 ಅಂತರಗಳಿಂದ ಧಾರವಾಡ ತಂಡವನ್ನು ಮಣಿಸಿ 38 ಅಂಕಗಳ ಭರ್ಜರಿ ಜಯ ಗಳಿಸಿತು. ನಂತರ ನಡೆದ ಬೆಂಗಳೂರಿನ ಎಸ್.ಬಿ.ಎಂ ಹಾಗೂ ಹೆಚ್ಎಂಟಿ ತಂಡಗಳಲ್ಲಿ ಸ್ಟೇಟ್ ಬ್ಯಾಂಕ್ ತಂಡವು 42-13 ಅಂತರಗಳಿಂದ ಎಚ್.ಎಂ.ಟಿ ತಂಡವನ್ನು ಮಣಿಸಿತು.

ರೋಚಕ ಹಣಾಹಣಿ

ರೋಚಕ ಹಣಾಹಣಿ

ಮಹಿಳೆಯರ ಕಬ್ಬಡ್ಡಿ ಪಂದ್ಯಗಳಲ್ಲಿ ಬೆಂಗಳೂರು ಮಾತಾ ತಂಡವು ಬೆಳಗಾವಿಯ ತಂಡವನ್ನು 33-31ಅಂಕಗಳ ಅಂತರದಿಂದ ಸೋಲಿಸಿತು. ಮಹಿಳೆಯರ ಪಂದ್ಯದ ಮೊದಲಾರ್ಧದಲ್ಲಿ ಬೆಳಗಾವಿ ತಂಡವು 23-10 ಅಂಕಗಳ ಭರ್ಜರಿ ಮುನ್ನಡೆ ಸಾಧಿಸಿತ್ತು. ಆದರೆ ಪಂದ್ಯದ ದ್ವೀತಿಯಾರ್ಧದಲ್ಲಿ ತಿರುಗಿ ಬಿದ್ದ ಮಾತಾ ತಂಡ 33-31 ಅಂಕಗಳ ರೋಚಕ ಮುನ್ನಡೆ ಸಾಧಿಸಿತು. ಈ ಮೂಲಕ ಕೇವಲ 2 ಻ಅಂಕಗಳ ಻ಅಂತರದಲ್ಲಿ ಬೆಳಗಾವಿ ತಂಡವನ್ನು ಸೋಲಿಸಿತು.

ಕೇಷವ್, ಜೆಕೆಸಿಗೆ ಗೆಲುವು

ಕೇಷವ್, ಜೆಕೆಸಿಗೆ ಗೆಲುವು

ಎರಡನೇ ಪಂದ್ಯದಲ್ಲಿ ಬೆಂಗಳೂರಿನ ಮತ್ತೊಂದು ತಂಡ ಜೆಕೆಸಿ, ಧಾರವಾಡದ ತಂಡವನ್ನು 48-18ರ ಅಂತರದಿಂದ ಸೋಲಿಸಿತು. ಕೊನೆಯದಾಗಿ ನಡೆದ ಪಂದ್ಯದಲ್ಲಿ ಬೆಂಗಳೂರಿನ ಕೇಷವ್ ಹಾಗೂ ಅಮೃತ್ ತಂಡಗಳು ಪೈಪೊಟಿ ನೆಡಸಿದವು. ಕೇಷವ್ ತಂಡವು 39-22 ಅಂತರದಿಂದ ಅಮೃತ್ ತಂಡವನ್ನು ಬಗ್ಗು ಬಡಿಯಿತು.

ರಂಗೇರಿದ ನೆಹರೂ ಕ್ರೀಡಾಂಗಣ

ರಂಗೇರಿದ ನೆಹರೂ ಕ್ರೀಡಾಂಗಣ

ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ನಡೆದ ಕಬ್ಬಡ್ಡಿ ಪಂದ್ಯಾವಳಿಗಳಿಗೆ ಶನಿವಾರ ಸಂಜೆ ಧಾರವಾಡ ಜಿಲ್ಲಾಧಿಕಾರಿ ಡಾ. ಎಸ್ ಬಿ ಬೊಮ್ಮನಹಳ್ಳಿ ಚಾಲನೆ ನೀಡಿದರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಐಗೂರು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಸದಾಶಿವ ಮಿರ್ಜಿ, ಸೇರಿದಂತೆ ಇತರ ಅಧಿಕಾರಿ ವರ್ಗದವರು ಈ ಸಂದರ್ಭ ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru teams won all the Kabaddi matches in its first day of the league at Karnataka Olympics games 2017, Hubballi.
Please Wait while comments are loading...