ಉತ್ತರ ಕರ್ನಾಟಕದ ಮಹಾನ ಸಂತ ಸಿದ್ಧಾರೂಢ ಸ್ವಾಮಿ ಅಂಚೆ ಚೀಟಿ ಲೋಕಾರ್ಪಣೆ
ಉತ್ತರ ಕರ್ನಾಟಕದ ಭಾಗದ ಜನರ ಆರಾಧ್ಯ ದೈವ ಸದ್ಗುರು ಸಿದ್ಧಾರೂಢ ಸ್ವಾಮಿಜಿಗೆ ಸರ್ಕಾರ ಗೌರವ ಸಮರ್ಪಣೆ ಮಾಡಿದೆ. ಈ ಮೂಲಕ ಸಿದ್ಧಾರೂಢ ದೇವರ ಭಕ್ತರ ಬಹುದಿನಗಳ ಕನಸು ನನಸಾಗಿದೆ. ಕಳೆದ 25 ವರ್ಷಗಳಿಂದ ಸಿದ್ಧರೂಢ ಸ್ವಾಮಿಗಳ ಅಂಚೆ ಚೀಟಿಯನ್ನು ಹೊರ ತರುವಂತೆ ಭಕ್ತರು ಬಹುದಿನಗಳಿಂದ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಗೆ ಈಗ ಫಲ ಸಿಕ್ಕಿದೆ.
ಸಿದ್ಧಾರೂಢರ ಭಾವಚಿತ್ರ ಇರುವ ಅಂಚೆ ಚೀಟಿಯನ್ನು ಹೊರ ತರುವಂತೆ ಈ ಭಾಗದ ಜನರ 25 ವರ್ಷದ ಪ್ರಯತ್ನ ನಡೆಸಲಾಗಿತ್ತು. ಕೇಂದ್ರ ಸರ್ಕಾರದ ಸಂವಹನ ಸಚಿವಾಲಯ ಅಂಚೆ ಇಲಾಖೆಯ ಸಿದ್ಧಾರೂಢರ ಭಾವಚಿತ್ರ ಇರುವ ಅಂಚೆ ಚೀಟಿ ಬಿಡುಗಡೆ ಮಾಡಿದೆ. ಸಿದ್ಧಾರೂಢರು ಮಾಲೆ ಧರಿಸಿ ಆಸೀನರಾದ ₹5 ಮುಖಬೆಲೆಯ ಅಂಚೆ ಚೀಟಿ ಬಿಡುಗಡೆ ಆಗುತ್ತಿದ್ದಂತೆ ಕೋಟ್ಯಾಂತರ ಭಕ್ತರ ಕನಸು ನನಸಾದಂತೆ ಕಂಡು ಬಂದಿತು.

ಬಹು ದಿನಗಳ ಬೇಡಿಕೆ
ಅಂಚೇ ಚೀಟಿಯಲ್ಲಿ ಸಿದ್ಧಾರೂಢ ಸ್ವಾಮಿಗಳು ಪಚ್ಚೆ ಹಸಿರಿನ ಹಿಂಭಾದಲ್ಲಿ ಕಾಣಿಸಿಕೊಂಡರೆ, ಸ್ವಾಮೀಜಿಗಳು ತಮ್ಮದೇ ಧಾಟಿಯಲ್ಲಿ ಆಸೀನರಾಗಿದ್ದು, ಕೊರಳಲಲ್ಲಿ ಹಳದಿ ಹಾಗೂ ಕೆಂಪು ಹೂವಿನ ಮಾಲೆಗಳು ಕಂಗೊಳಿಸಿದವು. ಈ ಅಂಚೆ ಚೀಟಿ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಅಂಚೆ ಚೀಟಿ ಬಿಡುಗಡೆ ಮಾಡಬೇಕೆಂದು ಭಕ್ತರು, ಧರ್ಮದರ್ಶಿಗಳು ಬಹುದಿನಗಳ ಪ್ರಯತ್ನ ನಡೆಸಿದ್ದರು. ಅಲ್ಲದೆ ಇದೇ ವೇಳೆ ಶ್ರೀ ಮಠದಿಂದ ಸಿದ್ಧರೂಢ ಮಠದ ಐದು ರೂಪಾಯಿ ಬೆಲೆ ಒಂದು ಲಕ್ಷ ಅಂಚೇ ಚೀಟಿಗಳನ್ನು ಶ್ರೀಮಠದಿಂದ ಖರೀದಿಸಿ ಲೋಕಾರ್ಪಣೆ ಮಾಡಿದರು. ಅಂಚೆ ಚೀಟಿ ಬಿಡುಗಡೆ ಸಮಿತಿ ಅಧ್ಯಕ್ಷ ಚನ್ನವೀರ ಮುಂಗರವಾಡಿ, ಶ್ರೀಮಠದ ಟ್ರಸ್ಟ್ ಹಾಗೂ ನವದೆಹಲಿ ಕೇಂದ್ರ ಸರ್ಕಾರದ ಅಂವಹನ ಸಚಿವಾಲಯದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಂಚಿಕೊಳ್ಳಲಾಗಿತ್ತು.

ಸಚಿವರಿಂದ ಲೋಕಾರ್ಪಣೆ
ಶ್ರೀ ಸದ್ಗುರು ಸಿದ್ಧಾರೂಢರ ಅಂಚೆಚೀಟಿಯನ್ನು ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಲೋಕಾರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಅರವಿಂದ ಬೆಲ್ಲದ, ಟೆಂಗಿನಕಾಯಿ, ಕೋನರಡ್ಡಿ, ಅಬ್ಬಯ್ಯಾ ಪ್ರಸಾದ್, ಮೇಯರ್ ರಾಮಣ್ಣ ಬಡಿಗೇರ ಉಪಸ್ಥಿತಿರಿದ್ದರು.
ಸಿದ್ಧಾರೂಢ ಜೀವನ
ಸದ್ಗುರು ಸಿದ್ಧಾರೂಢ ಮಹಾರಾಜರು ತಮ್ಮ ಇಡೀ ಜೀವನವನ್ನು ತಪಸ್ವಿಯಾಗಿ ಕಳೆದವರು. ಅವರು ಜಾತೀಯತೆಯ ಆಚರಣೆಯನ್ನು ಖಂಡಿಸಿ ಮತ್ತು ಎಲ್ಲದರಲ್ಲೂ ದೈವತ್ವವನ್ನು ಕಲ್ಪಿಸಿಕೊಂಡರು. ಎಲ್ಲರೂ ಸಮಾನವಾಗಿ ಅರ್ಹರು ಎಂದು ಬಲವಾಗಿ ನಂಬಿದ್ದರು. ಹಿಂದೂ ಧರ್ಮದ ತ್ರಿಮೂರ್ತಿಗಳಲ್ಲಿ ಒಬ್ಬರಾದ ಶಿವನ ಅವತಾರವೆಂದು ಪರಿಗಣಿಸಲ್ಪಟ್ಟ ಸಿದ್ಧಾರೂಢರು ತಮ್ಮ 6 ನೇ ವಯಸ್ಸಿನಲ್ಲಿ ತಮ್ಮ ಮನೆ ಮತ್ತು ಕುಟುಂಬ ತೊರೆದು ಸನ್ಯಾಸಿ ಜೀವನ ಆರಂಭಿಸಿದರು. ಉತ್ತರ ಕರ್ನಾಟಕ ಭಾಗದ ಜನರ ಆರಾಧ್ಯ ಧೈವ ಸಿದ್ದಾರೂಡ ಜನರಲ್ಲಿ ಭಕ್ತಿಯ ದೀಪವನ್ನು ಹಚ್ಚುವಲ್ಲಿ ಯಶಸ್ಸಿಯಾಗಿದ್ದರು.












Click it and Unblock the Notifications