ಎಚ್ಡಿಕೆ ಹುಟ್ಟುಹಬ್ಬದಂದು ಸೆಟ್ಟೇರಲಿದೆ ಮಗನ 2ನೇ ಚಿತ್ರ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಅಕ್ಟೋಬರ್, 14 :ಮಾಜಿ ಸಿಎಂ ಕುಮಾರಸ್ವಾಮಿ ಅವರ ಮಗ ಜಾಗ್ವಾರ್ ಚಿತ್ರದ ನಾಯಕ ನಿಖಿಲ್ ಕುಮಾರ್ ಹುಬ್ಬಳಿಯ ಅಪ್ಸರಾ ಚಿತ್ರಮಂದಿರಕ್ಕೆ ಶುಕ್ರವಾರಭೇಟಿ ನೀಡಿ ಅಭಿಮಾನಿಗಳನ್ನು ಹುರಿದುಂಬಿಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ನಿಖಿಲ್ ಕುಮಾರ್, "ನಮ್ಮ ಮನೆಯ ಹಿರಿಯರ ಬೆಂಬಲದಿಂದ ಈವರೆಗೆ ಬೆಳೆದಿದ್ದೇನೆ. ಈ ಭಾಗದ ಜನತೆ ನಮ್ಮ ಇಡೀ ಕುಟುಂಬವನ್ನು ಸತತವಾಗಿ ಆಶೀರ್ವದಿಸಿದ್ದಾರೆ. ಡಿಸೆಂಬರ್ 16ಕ್ಕೆ ನನ್ನ ತಂದೆ ಕುಮಾರಸ್ವಾಮಿ ಅವರ ಜನ್ಮದಿನದಂದು ನನ್ನ ಎರಡನೇಯ ಚಿತ್ರ ಸೆಟ್ಟೇರಲಿದ್ದು, ಫೆಬ್ರವರಿಯಲ್ಲಿ ಚಿತ್ರೀಕರಣಆರಂಭವಾಗಲಿದೆ" ಎಂದರು. [ನ.1ರಿಂದ ನನ್ನ ರಾಜಕೀಯ ಜಾಗ್ವಾರ್ ಆರಂಭ : ಎಚ್ಡಿಕೆ]

Nikhil

ಸ್ಥಳೀಯ ಅಪ್ಸರಾ ಚಿತ್ರಮಂದಿರದಲ್ಲಿ ಜಾಗ್ವಾರ್ ಚಲನಚಿತ್ರವು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ನಿಖಿಲ್ ಕುಮಾರ್ ಆಗಮಿಸುತ್ತಿದ್ದಂತೆಯೇ ಅಭಿಮಾನಿಗಳು ಸಿಹಿ ಹಂಚಿಕೊಂಡು ಪಟಾಕಿ ಸಿಡಿಸಿ ಸಂಭ್ರಮಿಸಿದರು. [ಕಿಕ್ಕಿರಿದ ಅಭಿಮಾನಿಗಳ ನಡುವೆ ಜಾಗ್ವಾರ್ ಧ್ವನಿಸುರಳಿ ಬಿಡುಗಡೆ]

ಅಭಿಮಾನಿಗಳೊಂದಿಗೆ ಬೆರೆತು ಅವರೊಂದಿಗೆ ಸೆಲ್ಪಿ ತೆಗೆಯಿಸಿಕೊಂಡು ಖುಷಿ ಪಟ್ಟ ನಿಖಿಲ್, ಜಾಗ್ವಾರ್ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮೊಟ್ಟ ಮೊದಲ ಈ ಚಿತ್ರವನ್ನು ಅಭಿಮಾನಿಗಳು ಬೆಂಬಲಿಸುತ್ತಿರುವುದಕ್ಕೆ ಧನ್ಯವಾದ ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actor Nikhil Kumar son of former cm H D kumaraswamy Today visited apsara theater at hubballi. Nikhil Said his second film will be launched on a his father's birthday(Desember 16)
Please Wait while comments are loading...