Tricolour Flag: ಸಂಕಷ್ಟದಲ್ಲಿದ್ದಾರೆ ರಾಷ್ಟ್ರಧ್ವಜ ತಯಾರಕರು & ವ್ಯಾಪಾರಿಗಳು, ಕಾರಣವೇನು
ಹುಬ್ಬಳ್ಳಿ, ಆಗಸ್ಟ್ 05: ಕರ್ನಾಟಕ ಸೇರಿದಂತೆ ಭಾರತದಲ್ಲಿ ಆಗಸ್ಟ್ ತಿಂಗಳು ಬಂತೆಂದರೆ ಸಾಕು ಎಲ್ಲೆಲ್ಲೂ ಸಾತಂತ್ರ್ಯ ಸಂಭ್ರಮಾಚರಣೆಗೆ ಸಿದ್ಧತೆ ಆರಂಭವಾಗುತ್ತದೆ. ಆಗಸ್ಟ್ 15ರಂದು ಸರ್ಕಾರಿ ಕಚೇರಿಗಳು, ಶಾಲೆ ಮತ್ತು ಕಾಲೇಜು, ಖಾಸಗಿ ಕಚೇರಿ, ಸಂಘ ಸಂಸ್ಥೆಗಳು ಒಳಗೊಂಡಂತೆ ಎಲ್ಲೆಡೆ ತ್ರಿವರ್ಣ ಧ್ವಜಗಳು ಹಾರಾಡುತ್ತವೆ. ಹೀಗೆ ಭಾರತೀಯ ಪಾಲಿಗೆ ಮಹತ್ವದ ದಿನದ ಆಚರಣೆಗೆ ರಂಗೇರಲು ಮುಖ್ಯವಾಗುವ ರಾಷ್ಟ್ರಧ್ವಜದ ತಯಾರಕರ ಪರಿಸ್ಥಿತಿ ಈ ವರ್ಷ ಎಂದಿನಂತಿಲ್ಲ ಎಂಬುದು ದುಃಖಕರ ಸಂಗತಿಯಾಗಿದೆ.
ಏಕಂದರೆ ಈ ಭಾರಿ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆ ಮುಂದುವರಿದಿದೆ. ಇಲ್ಲಿನ ಜಿಲ್ಲೆಗಳಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಮಳೆ ಸಹಿತ ನಿರಂತರವಾಗಿ ತಂಪಾದ ಗಾಳಿ ಬೀಸುವುದರಿಂದ ರಾಷ್ಟ್ರ ಧ್ವಜ ಮಾರಾಟಗಾರರು ಮಾತ್ರವಲ್ಲದೇ ತಯಾರಿಕರ ಮೇಲೆ ಹೊಡೆತ ಬಿದ್ದಿದೆ.

ಧ್ವಜ ವ್ಯಾಪಾರ, ವಹೀವಾಟು ಕುಸಿತ
ಕಳೆದ ವರ್ಷ ಹೋದ ವರ್ಷ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ರಾಷ್ಟ್ರಧ್ವಜ ಮಾರಾಟದಲ್ಲಿ ಕರ್ನಾಟಕದಲ್ಲಿ ದಾಖಲೆಯ ವಹಿವಾಟು ಆಗಿತ್ತು. ಪ್ರತಿ ವರ್ಷ 1.5 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಯುತ್ತದೆ. ಆದರೆ ಪ್ರಸಕ್ತ 2024ರ ಜುಲೈ ವರೆಗೆ ₹97 ಲಕ್ಷ ಮೊತ್ತದ ವ್ಯಪಾರ ಮಾತ್ರ ಜರುಗಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿದೆ.
'ಭಾರತೀಯ ಮಾನಕ ಸಂಸ್ಥೆ' ಪ್ರಕಾರ 9 ವಿವಿಧ ಅಳತೆಯ ಧ್ವಜಗಳನ್ನು ತಯಾರಿಸಲಾಗುತ್ತದೆ. 21x14, 128, 9x6, 6x4, 4.5x3, 3x2, 1.5 1,9x6 5 6x4 ಅಳತೆಯ ಧ್ವಜಗಳನ್ನು ಸಿದ್ಧಪಡಿಸಿ, ಮಾರಾಟ ಮಾಡಲಾಗುತ್ತದೆ. ಅಳತೆಗೆ ತಕ್ಕಂತೆ ಧ್ವಜಗಳು ಅಳತೆಗೆ ತಕ್ಕಂತೆ ವಿವಿಧ ಬೆಲೆಗೆ ಮಾರಾಟವಾಗುತ್ತವೆ.
ಬೇಡಿಕೆ ಕ್ರಮೇಣ ಇಳಿಕೆ, ಕಾರಣವೇನು?
ಒಂದು ಧ್ವಜಕ್ಕೆ 250 ರೂಪಾಯಿಯಿಂದ ಬರೋಬ್ಬರಿ 30,000 ವರೆಗೆ ದರವಿದೆ. ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಉತ್ಪಾದನೆಯಾಗುವ ಖಾದಿ ಅಂಗಿ, ಪ್ಯಾಂಟ್, ಟಾವೆಲ್, ಕರವಸ್ತ್ರ, ಟೊಪ್ಪಿಗೆ, ಜಮಖಾನಿಯಂತಹ ವಸ್ತುಗಳಿಗೂ ಬೇಡಿಕೆ ಸಹ ಈ ವರ್ಷ ಕುಂಠಿತಗೊಂಡಿದೆ.
ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿಲ್ಲ, ನಗರ ಪ್ರದೇಶಗಳಲ್ಲಿ ಹಾಗೂ ಖಾದಿ ಬಗ್ಗೆ ತಿಳಿದವರು ಮಾತ್ರ ಖರೀದಿಸುತ್ತಾರೆ. ವೀವಿಂಗ್, ಸ್ಪಿನ್ನಿಂಗ್ ರೀತಿಯ ಕೆಲಸಗಳು ಹೆಚ್ಚಿನ ಸಿಬ್ಬಂದಿಯನ್ನು ಬೇಡುತ್ತವೆ. ಆದರೆ ಕೆಲಸಕ್ಕೆ ಕಾರ್ಮಿಕರೇ ಸಿಗುತ್ತಿಲ್ಲ.

ಜಿಎಸ್‌ಟಿ ಮುಕ್ತಿಗೊಳಿಸಿದರೆ ಅನುಕೂಲ
ಬಾಗಲಕೋಟೆ ಜಿಲ್ಲೆ ವ್ಯಾಪ್ತಿಯ ಬಾದಾಮಿ, ಬೀಳಗಿಯಲ್ಲಿ 21 ಹಳ್ಳಿಗಳಲ್ಲಿ ಸಂಘದ ಕಚೇರಿಗಳಿವೆ. ಧ್ವಜ ಉತ್ಪಾದನೆಗೆ ಬಳಸುವ ಕೆಲ ಕಚ್ಚಾ ಸಾಮಗ್ರಿಗಳ ಮೇಲಿನ ಜಿಎಸ್‌ಟಿಯಿಂದ ಆರ್ಥಿಕ ಹೊರೆ ಸಹ ಬಾಧಿಸುತ್ತಿದೆ. ಆಯಾ ವಸ್ತುಗಳ ಮೇಲೆ ತೆರಿಗೆ ಮುಕ್ತಗೊಳಿಸಿದರೆ ತಯಾರಕರಿಗೆ, ಧ್ವಜ ವ್ಯಾಪಾರಿಗಳಿಗೆ ತಕ್ಕ ಮಟ್ಟಿಗೆ ಸಹಾಯವಾಗಲಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.
ವಲಯಕ್ಕೆ ಕಾಡುತ್ತಿರುವ ಸಿಬ್ಬಂದಿ ಕೊರತೆ
'ರಾಷ್ಟ್ರಧ್ವಜದ ಬಟ್ಟೆ ತಯಾರಿಸುವ ಗರಗ ಕೇಂದ್ರಕ್ಕೆ 2023ರ ಜುಲೈ 23ರಿಂದ 2/3 ಅಳತೆಯ ಧ್ವಜ ತಯಾರಿಕೆಗೆ ಅನುಮತಿ ಸಿಕ್ಕಿದೆ. ಆದರೆ ಈವರೆಗೆ ಅಂದಾಜು ₹10 ಲಕ್ಷ ವಹಿವಾಟು ಮಾತ್ರವೆ ನಡೆದಿದೆ. ಅಲ್ಲಿಯೂ ಹವಾಮಾನ ವೈಪರಿತ್ಯ, ಕಚ್ಚಾ ಸಾಮಗ್ರಿ ಪೂರೈಕೆ ಮತ್ತು ಸಿಬ್ಬಂದಿ ಕೊರತೆಯಿಂದ ಉತ್ಪಾದನೆಗೆ ಸಮಸ್ಯೆ ಕಂಡು ಬರುತ್ತಿದೆ.
ಇನ್ನೂ ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಆಗುತ್ತಿದೆ. ಮಲೆನಾಡು ಬಿಟ್ಟರೆ ಉತ್ತರ ಕರ್ನಾಟಕದಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ. ಹವಾಮಾನ ತಂಪಾಗಿ ನೂಲು, ಬಟ್ಟೆಗೆ ಹಾಕಿದ್ದ ಮಸಿ ಒಣಗುತ್ತಿಲ್ಲ. ಇದರಿಂದ ಉತ್ಪಾದನೆಗೆ ಪೆಟ್ಟು ಬಿದ್ದಿದೆ. ಉತ್ಪಾದನೆಯ ವೇಗ ಕಡಿಮೆ ನಿಧಾನವಾಗಿದೆ.
ಕೌಶಲ್ಯಾಧಾರಿತ ಸಿಬ್ಬಂದಿ ಬೇಕಿದ್ದು, ಕಡಿಮೆ ವೇತನ ಹಿನ್ನೆಲೆಯಲ್ಲಿ ಕೆಲಸಗಾರರು ಸಿಗುವುದು ಕಡಿಮೆ ಆಗಿದೆ. ನಿತ್ಯ ಸುಮಾರು ₹250ಗೆ ಬರಲು ಯಾರು ಒಪ್ಪದೇ ಹೆಚ್ಚಿನ ಕೂಲಿ ಸಿಗುವ ಕೆಲಸಕ್ಕೆ ಹೋಗುವವರೇ ಅಧಿಕವಾಗಿದ್ದಾರೆ. ಈ ಕಾರಣದಿಂದಲೂ ರಾಷ್ಟ್ರಧ್ವಜ ಉತ್ಪಾದಕರು ಮತ್ತು ಮಾರಾಟಗಾರರು ಇತ್ತೀಚಿನ ದಿನಗಳಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications