MUDA Scam: ಪೇಪರ್ ಹಾವು ಬಿಟ್ಟು ಸಿಎಂ ಸಿದ್ದರಾಮಯ್ಯರ ರಕ್ಷಣೆ: ಜಗದೀಶ್ ಶೆಟ್ಟರ್ ಹೀಗಂದಿದ್ದೇಕೆ?
ಹುಬ್ಬಳ್ಳಿ, ಜುಲೈ 08: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಸರಿಯಾದ ದಿಕ್ಕಿನಲ್ಲಿ ತನಿಖೆ ಆಗುತ್ತಿಲ್ಲ. ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹೇದೇವಪ್ಪ ಅವರು ಮೈಸೂರಿನಲ್ಲಿ ಮಾತನಾಡಿ ಪೇಪರ್ ಹಾವು ಬಿಟ್ಟಿದ್ದಾರೆ ಎಂದು ಬಿಜೆಪಿ ನೂತನ ಸಂಸದ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮುಡಾ ಹಗರಣ ಬಗ್ಗೆ ಸಚಿವ ಹೆಚ್‌ಸಿ ಮಹಾದೇವಪ್ಪ ಅವರು, ಮೈಸೂರಿನಲ್ಲಿ ಸುದ್ದಿಗೋಷ್ಠಿ ಮಾಡಿ ಪೇಪರ್ ಹಾವು ಬಿಟ್ಟಿದ್ದಾರೆ ಇದು ಮುಖ್ಯಮಂತ್ರಿಗಳನ್ನ ರಕ್ಷಣೆ ಮಾಡುವ ವ್ಯವಸ್ಥೆ ಆಗಿದೆ ಎಂದು ಅವರು ದೂರಿದರು.

ಸಚಿವರು ಮುಡಾ ಹಗರಣದಲ್ಲಿ ಬೇರೆ ಪಕ್ಷದಲ್ಲಿ ಬೇರೆ ಪಕ್ಷದವರು ಇದ್ದಾರೆ. ಬೇರೆಯವರು ಹಗರಣದಲ್ಲಿ ಭಾಗಿಯಾಗಿದ್ದಾರೆ. ಎಲ್ಲ ಶಾಸಕರು ಇದ್ದಾರೆ ಎಂದು ಹೇಳಿದ್ದಾರೆ. ಇದೊಂದು ಪೇಪರ್ ಹಾವು ಅಷ್ಟೇ ಆಗಿದ್ದು, ಅವರ ಹುಳುಕು ಸಹ ಹೊರಗೆ ಬರುತ್ತದೆ. ಮುಡಾ ಹಗರಣ ಮುಖ್ಯಮಂತ್ರಿಗಳ ತಲೆಗೆ ಬರುತ್ತಿದೆ.
ಸಿಎಂ ಬಚಾವ್ ಮಾಡಲು ಸುದ್ದಿಗೋಷ್ಠಿ
ಹೀಗಾಗಿ ಮುಖ್ಯಮಂತ್ರಿಗಳನ್ನು ಉಳಿಸಿಕೊಳ್ಳಲು, ಸಿಎಂ ಸಿದ್ದರಾಮಯ್ಯ ಅವರನ್ನು ಬಚಾವ್ ಮಾಡಲು ಸುದ್ದಿಗೋಷ್ಠಿ ಮಾಡಿದ್ದಾರೆ. ಯಾವುದೇ ಕಾರಣಕ್ಕೋ ಮುಖ್ಯಮಂತ್ರಿಗಳನ್ನು ಬಚಾವ್ ಮಾಡುವ ಕೆಲಸ ಆಗಬಾರದು. ಮುಡಾ, ವಾಲ್ಮೀಕಿ ನಿಗಮದ ಹಗರಣದಿಂದ ಆಡಳಿತ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂದು ಅವರು ದೂರಿದರು.
ಉತ್ತರ ಕರ್ನಾಟಕದ ಜೀವನಾಡಿ ಮಹದಾಯಿ ಯೋಜನೆ ಆರಂಭದ ಕಣಕುಂಬಿಗೆ ಪ್ರವಾಹ ತಂಟ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು, ಕೇಂದ್ರದ ನಿಯೋಗ ಬಂದಿದೆ. ಪರಿಸರ , ಹುಲಿ ಕಾರಿಡಾರ್ ಹಿನ್ನೆಲೆ ಇರಿಸಿಕೊಂಡು ಬಂದರೆ ಓಕೆ ಆದರೆ ಕೇಂದ್ರದ ಇಂತಹ ತಂಡ ಬಂದಾಗ ರಾಜ್ಯ ಸರ್ಕಾರ ಫುಲ್ ಅಲರ್ಟ್ ಆಗಬೇಕಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ವರದಿ ಕೊಡಲಿ
ರಾಜ್ಯದಿಂದ ಸರಿಯಾದ ವರದಿ ಹೋಗದೇ ಇದ್ದಾಗ ಕಾನೂನು ತೊಡಕುಗಳು ಆರಂಭ ಆಗುತ್ತದೆ. ರಾಜ್ಯ ಸರ್ಕಾರ ಮಹಾದಾಯಿ ವಿಚಾರದಲ್ಲಿ ಗಂಭೀರವಾದ ಪ್ರಯತ್ನ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇದು ಮಹಾದಾಯಿ ಹೋರಾಟಗಾರರು, ರೈತರು ಸಹ ಎಚ್ಚರಿಕೆ ಕೊಟ್ಟಿದ್ದಾರೆ.
ತಂಡ ಬಂದಾಗ ಏನೇನೂ ಪರಿಶೀಲನೆ ಆಯಿತು, ಏನೆಲ್ಲಾ ವಿಚಾರಣೆ ನಡೆಸಲಾಯಿತು. ಈ ಆಧಾರದ ಮೇಲೆ ರಾಜ್ಯ ಸರ್ಕಾರ ವರದಿ ಕೊಡಬೇಕು ಎಂದು ಹೇಳಿದರು.

ಸಿಎಂ-ಡಿಸಿಎಂ ಪೈಟಿಂಗ್ ಬಿಟ್ಟು ಡೆಂಘಿ ನಿಯಂತ್ರಿಸಿ
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜಗಳ ಆಗುತಿದ್ದು, ಸರ್ಕಾರದ ಗೊಂದಲದಲ್ಲಿದೆ. ಸಿಎಂ-ಡಿಸಿಎಂ ಪೈಟಿಂಗ್ ಬಿಟ್ಟು ಯುದ್ದೋಪಾಧಿಯಲ್ಲಿ ಡೆಂಘಿ ಜ್ವರ ತಡೆಯುವ ಕೆಲಸ ಮಾಡಬೇಕು.
ಕೋವೀಡ್ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಂತೆ ಕಾರ್ಯ ಆಗಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಡೆಂಘಿ ತಡೆಗೆ ಮುಂದಾಗಲಿಲ್ಲ ಎಂದ ಅವರು, ಮುಖ್ಯಮಂತ್ರಿಗಳು ಯಾವುದೇ ರೀತಿಯ ಸಭೆ ಕರೆದು ಕ್ರಮ ಕೈಗೊಳ್ಲುವ ಕೆಲಸ ಮಾಡಿಲ್ಲ. ಅಧಿಕಾರಿಗಳಿಗೆ ಕಟ್ಟು ನಿಟ್ಟನ ಕ್ರಮ ಕೈಗೊಳ್ಳಬೇಕು. ರಾಜ್ಯದ ಜನತೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ರಾಜ್ಯದಂತೆ ಡೆಂಘೀ ಜ್ವರದಿಂದ ಸಾವು ನೋವು ಆಗುತ್ತಿದ್ದರೂ ಯಾವುದೇ ಕ್ರಮ ಆಗಿಲ್ಲ. ಸೂಕ್ತ ಮತ್ತು ಮುಂಜಾಗ್ರತಾ ಕ್ರಮಗಳು ಆಗದಿದ್ದಲ್ಲಿ ರಾಜ್ಯದ ಜನತೆ ಮೇಲೆ ದುಷ್ಪರಿಣಾಮ ಭೀರಲಿದೆ ಎಂದು ಅವರು ಎಚ್ಚರಿಸಿದರು.












Click it and Unblock the Notifications