ಸರ್ಕಾರದ ದುಡ್ಡಿನಿಂದ ಪ್ರಚಾರ ಗಿಟ್ಟಿಸಿಕೊಳ್ಳೋದು ಅವರ ತಂತ್ರ: ಮೋದಿ ವಿರುದ್ಧ ಸಂತೋಷ್‌ ಲಾಡ್ ಕಿಡಿ

ಹುಬ್ಬಳ್ಳಿ, ಆಗಸ್ಟ್‌ 28: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಿದ ಸಾಧನೆ ಪ್ರಚಾರ ಗಿಟ್ಟಿಸಿಕೊಳ್ಳೋದು, ಅದನ್ನು ಬಿಟ್ಟು ದೇಶಕ್ಕೆ ಯಾವುದೇ ಲಾಭವಾಗಿಲ್ಲ ಎಂದು ಸಚಿವ ಸಂತೋಷ್‌ ಲಾಡ್ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರು 10 ವರ್ಷ ಆಯ್ತು ಲೋಕ್ ಪಾಲ್ ಬಗ್ಗೆ ಪಾರ್ಲಿಮೆಂಟ್‌ನಲ್ಲಿ ಮಾತನಾಡುತ್ತಿಲ್ಲ, ಆದರೆ ಕಾಂಗ್ರೆಸ್ ಪಕ್ಷದ ಬಗ್ಗೆ ಬಹಳ ಮಾತನಾಡುತ್ತಿದ್ದಾರೆ. ಈಗಾಗಲೇ ಕ್ಯಾಗ್ ರಿಪೋರ್ಟ್ ಬಂದಾಗಿದೆ. ರೆಫೈಲ್ ಡೀಲ್ ಮುಚ್ಚಿ ಹೋಗಿದೆ. ಈಗಿರುವ ಕ್ಯಾಗ್ಸ್ ರಿಪೋರ್ಟ್ ನಲ್ಲಿ 6 ಜಾಗದಲ್ಲಿ ಸ್ಕ್ಯಾಮ್ ಆಗಿದೆ. ದೇಶ ಡೆಮೋಕ್ರೆಸಿ ಸೇಟಿಫೈನಲ್ಲಿ ನಡೀತಾ ಇಲ್ಲಾ ಎಂದು ಕಳವಳ ವ್ಯಕ್ತಪಡಿಸಿದರು.

Minister Santosh Lad Sarcasm Against PM Narendra Modi

ಇಂದಿರಾ ಗಾಂಧಿ, ಮನಮೋಹನ ಸಿಂಗ್ ಸೇರಿದಂತೆ ಹಲವರ ಕಾಲದಲ್ಲಿ ಆಗಿರುವ ಕೇಂದ್ರ ಸರ್ಕಾರದ ಸೆಂಟರ್‌ಗಳು ಹೆಚ್ಚು ಮಾರಾಟ ಆಗಿರೋದು ಬಿಜೆಪಿಯವರ ಕಾಲದಲ್ಲಿ, ಪ್ರಚಾರ ಗಿಟ್ಟಿಸಿಕೊಳ್ಳೋದನ್ನು ಬಿಟ್ರೆ ಪ್ರಧಾನಿ ಮೋದಿ ಕಳೆದ 10 ವರ್ಷದಲ್ಲಿ ದೇಶಕ್ಕೆ ಯಾವುದೇ ಲಾಭ ಆಗಿಲ್ಲ. ಚುನಾವಣೆ ಇದೆ ಗಿಮಿಕ್ ಸಹಿತ ನಡಿಯುತ್ತದೆ. ಸಾವಿರಾರು ಕೋಟಿ ಸರ್ಕಾರದ ದುಡ್ಡು ಖರ್ಚು ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳೋದು ಅವರ ತಂತ್ರ. ಮುಂದಿನ ದಿನಗಳಲ್ಲಿ ಯಾರು ಸರಿ, ತಪ್ಪು ಅಂತ ಜನ ಪಾಠ ಕಲಿಸ್ತಾರೆ ಎಂದು ಹರಿಹಾಯ್ದರು.

ಕೇಂದ್ರ ಸರ್ಕಾರದ ಪ್ರಹ್ಲಾದ್‌ ಜೋಶಿ ಅವರು ನಮಗೆ ಭ್ರಷ್ಟಾಚಾರಿಗಳು ಅಂತಾರೆ. ಅನಿಲ್ ಅಂಬಾನಿ ಕಂಪನಿ ಅವರು ಒಂದು ಸೈಕಲ್ ನೂ ಮಾಡಿಲ್ಲ. ಅವರಿಗೆ ಹೆಲಿಕಾಪ್ಟರ್ ಮಾಡಲು ಕೊಟ್ಟಿದ್ದಾರೆ. ಇದು ಯಾವ ಧರ್ಮ, ಅನುಭವ ಇಲ್ಲದ ಕಂಪನಿ ಅವರಿಗೆ ಫ್ರಾನ್ಸ್ ಕಂಪನಿ ಅವರಿಗೆ ನೇರವಾಗಿ ಕಾಂಟ್ರಾಕ್ಟ್ ಕೊಡ್ತೀರಿ ಅಂದ್ರೆ, ಇದು ನೇರ ಭ್ರಷ್ಟಾಚಾರ ತಾನೇ? ಎಂದು ಪ್ರಶ್ನೆ ಮಾಡಿದರು.

ಕೋವಿಡ್ ಸಂದರ್ಭದಲ್ಲಿ 30 ಸಾವಿರ ಕೋಟಿ ಸಪ್ರೇಟ್ ಟ್ರಸ್ಟ್ನಲ್ಲಿ ಕೇಂದ್ರ ಸರ್ಕಾರ ದುಡ್ಡು ತಗೊಂಡಿದ್ದಾರಲ್ಲ. ಇದಕ್ಕಿಂತ ಬೇರೆ ದೊಡ್ಡ ಉದಾಹರಣೆ ಏನು ಬೇಕು. ಪ್ರಧಾನ ಮಂತ್ರಿ ರಿಲೀಫ್ ಫೆಂಡ್ ಅಂತ ತಗೋ ಬಹುದಿತ್ತಲ್ಲ. ಬಿಜೆಪಿ ಅವರ ಕರ್ಮಕಾಂಡ ಮುಂದಿನ ದಿನಗಳಲ್ಲಿ ಕಾಣುತ್ತದೆ. ಚುನಾವಣೆ ಬಂದಿದೆ ನಮ್ಮ ಸರ್ಕಾರದ ಹೆಸರು ಕೆಡಿಸಬೇಕು ಅಂತ ಎವಿಡೆನ್ಸ್ ಇಲ್ಲದೇ ಬಿಜೆಪಿಯವರು ಮಾತನಾಡುತ್ತಾರೆ. ಅವರ ಅಭಿವೃದ್ಧಿ ಬಗ್ಗೆ ಕೇಳಿ ಉತ್ತರ ನೀಡಲ್ಲ ಎಂದರು.

ಪ್ರಧಾನ ಮಂತ್ರಿ ಯಾಕೆ ನೇರವಾಗಿ ಬಂದು ಪ್ರೆಸ್ ಮೀಟ್ ಮಾಡಲ್ಲ ಅನ್ನೋದೇ ನಮ್ಮ ಪ್ರಶ್ನೆ. ಯಾಕೆ 9 ವರ್ಷದಿಂದ ಪ್ರೆಸ್ ಮೀಟ್ ಮಾಡಿಲ್ಲ ಅಂತ ಪ್ರಶ್ನೆ ಮಾಡಿ. ನಿಮ್ಮ ರಿಟೈಡ್ ಆದ ಚೀಫ್ ಜೆಸ್ಟಿಸ್‌ಗಳು ಎಲ್ಲಿದ್ದಾರೆ ಈಗ, ಅವರು ಬೇರೆ ಬೇರೆ ಹುದ್ದೆಗಳಲ್ಲಿದ್ದಾರೆ. ನಾವು ಅದನ್ನು ಹೇಳಬಹುದಾ? ಅವರ ಇತಿಹಾಸ ತೆಗೆದು ನೋಡಿ. ಅವರಿಗೆ ಆರೋಪ ಮಾಡೋದನ್ನು ಬಿಟ್ಟು, ಬೇರೆ ಏನು ಇಲ್ಲಾ ಎಂದು ಕಿಡಿಕಾರಿದರು.

ಬಡವರ ಪರವಾಗಿ ಬಿಜೆಪಿಯವರು ಯಾವ ಕಾರ್ಯಕ್ರಮವನ್ನೂ ಮಾಡಿಲ್ಲ, ನಾವು ಮಾಡಿದ ಕಾರ್ಯಕ್ರಮದ ಹೆಸರನ್ನು ಬದಲಾಯಿಸಿದ್ದಾರೆ. ಅವರ ಎಲ್ಲಾ ಕಾರ್ಯಕ್ರಮಗಳು ಎಲ್ಲಿವೆ. ಚುನಾವಣೆ ಬಂದಿದೆ ಪ್ರಚಾರ ಗಿಟ್ಟಿಸಿಕೊಳ್ತಾ ಇದ್ದಾರೆ. 5 ಸಾವಿರ ಕೋಟಿ ಮೋದಿ ಪ್ರಚಾರ, ಅಷ್ಟು ಪ್ರಚಾರ ಮಾಡಿಕೊಂಡ್ರೆ ಮಹಾನ್ ವ್ಯಕ್ತಿಯಂತೆ ಕಂಡೆ ಕಾಣುತ್ತಾರೆ ಎಂದು ಲೇವಡಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+