DCM ಹುದ್ದೆಗಳ ಸೃಷ್ಟಿ: ದರ್ಶನ್ ಕೃಷಿ ರಾಯಭಾರಿಯಾಗಿ ಮುಂದುವರಿಕೆ ಬಗ್ಗೆ ಎಂಬಿ ಪಾಟೀಲ್ ಹೇಳಿದ್ದೇನು?
ಹುಬ್ಬಳ್ಳಿ, ಜೂನ್ 14: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೆ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಯ ವಿಚಾರ ಮುನ್ನೆಲೆಗೆ ಬಂದಿದೆ. ಸರ್ಕಾರದ ಇನ್ನು ಎರಡೂವರೆ ವರ್ಷ ಪೂರೈಸುವ ಮುನ್ನವೇ ಸಿಎಂ ಸ್ಥಾನದ ಬಗ್ಗೆಯೂ ಆಗಾಗ ಚರ್ಚೆಗಳು ಆಗುತ್ತಿವೆ.
ರಾಜ್ಯ ಸರ್ಕಾರದಲ್ಲಿ ಮೂವರು ಡಿಸಿಎಂ ಹುದ್ದೆ ಸೃಷ್ಟಿಸಬೇಕು ಎಂಬುದರ ಪಕ್ಷದ ಆಂತರಿಕ ವಲಯದಲ್ಲಿ ಚರ್ಚಿಸುತ್ತೇವೆ. ಇದನ್ನು ಬಹಿರಂಗವಾಗಿ ಚರ್ಚಿಸಲು ಆಗುವುದಿಲ್ಲ. ಅಗತ್ಯ ಇದ್ದಲ್ಲಿ ಮಾತನಾಡುತ್ತೇವೆ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್ ಅವರು, ಸರ್ಕಾರದಲ್ಲಿ ಒಂದು ಡಿಸಿಎಂ ಹುದ್ದೆ ಇದೆ. ಇನ್ನು ಕೆಲ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕು ಎಂಬ ಒತ್ತಾಯವಿದ್ದು, ಪಕ್ಷದ ಆಂತರಿಕ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸಲು ಆಗಲ್ಲ. ಈಗಾಗಲೇ ಪಕ್ಷದ ಆಂತರಿಕ ವೇದಿಕೆಯಲ್ಲಿ ನಮ್ಮ ವಿಚಾರ ತಿಳಿಸಿದ್ದೇವೆ. ಮುಂದೆಯೂ ಅಗತ್ಯವಿದ್ದಲ್ಲಿ ಅಭಿಪ್ರಾಯ ತಿಳಿಸುತ್ತೇವೆ ಎಂದರು.
ದರ್ಶನ್ ರಾಯಭಾರಿ ಆಗಿ ಮುಂದುವರೆಸುವ ಪ್ರಶ್ನೆಯೇ ಇಲ್ಲ
ಇನ್ನೂ ಚಿತ್ರದುರ್ಗದ ರೇಣುಕಾಚಾರ್ಯ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾಗಿದೆ. ದರ್ಶನ್‌ಗೆ ರಾಜಮರ್ಯಾದೆಯ ಪ್ರಶ್ನೆಯೇ ಇಲ್ಲ. ಆರೋಪಿ ಆರೋಪಿಯೇ.ಆರೋಪ ಸಾಬೀತಾದರೆ ಅವರಿಗೆ ಶಿಕ್ಷೆ ಆಗುತ್ತದೆ. ದರ್ಶನ್ ಕೃಷಿ ಇಲಾಖೆ ರಾಯಭಾರಿಯಾಗಿ ಮುಂದುವರೆಯುವ ಪ್ರಶ್ನೆಯೇ ಇಲ್ಲ.
ಇಂತಹ ಘಟನೆಯಾದ ನಂತರ ರಾಯಭಾರಿಯಾಗಿ ಮುಂದುವರಿಸೋಕೆ ಆಗುವುದಿಲ್ಲ. ಲೋಕಸಭೆಯಲ್ಲಿ ಲೀಡ್ ತಂದು ಕೊಡದ ಸಚಿವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು. ತಲೆದಂಡ ಎಂಬುದೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ತಿಳಿಸಿದರು.

ಮೊದಲು ಮಹಾರಾಷ್ಟ್ರ ಸರ್ಕಾರ ಉಳಿಸಿಕೊಳ್ಳಲಿ
ಎಲ್ಲರೂ ಗಂಭೀರವಾಗಿ ಚುನಾವಣೆ ಮಾಡಿ ಅಂತ ಸೂಚಿಸಲಾಗಿತ್ತು ಚುನಾವಣೆಯಲ್ಲಿ ಸೋಲಿನ ಕುರಿತು ಪಕ್ಷದ ವೇದಿಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ರಾಜ್ಯ ಸರ್ಕಾರ ಪತನ ಎಂಬ ಬಿಜೆಪಿ ನಾಯಕರ ಹೇಳಿಕೆಯನ್ನು ಬಿಡಿ. ಮೊದಲು ಅವರು ಮಹಾರಾಷ್ಟ್ರದಲ್ಲಿ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳೋಕೆ ಹೇಳಿ ಎಂದು ತಿರುಗೇಟು ಕೊಟ್ಟರು.
ರಾಜ್ಯ ಸರ್ಕಾರ ಪತನ ಗೊಳಿಸಬೇಕಾದರೆ 60 ಶಾಸಕರ ಅಗತ್ಯವಿದೆ. ಬಿಜೆಪಿಯ ಒಬ್ಬರು ಶಾಸಕರು ನಮ್ಮ ಜೊತೆಗಿದ್ದಾರೆ
ಜೆಡಿಎಸ್ ನ ಬಹಳಷ್ಟು ಶಾಸಕರು ನಮ್ಮ ಪಕ್ಷ ಸೇರ್ಪಡೆಗೆ ಸಿದ್ದರಾಗಿದ್ದಾರೆ. ನಮ್ಮಲ್ಲಿ 60 ಶಾಸಕರು ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಬೇಕಾಗುತ್ತದೆ.
ಗ್ಯಾರೆಂಟಿ ರದ್ದು ಪ್ರಸ್ತಾವನೆ ಇಲ್ಲ
ಇದೇನು ಹುಡುಗಾಟವಾ..? ಒಬ್ಬ ಶಾಸಕರೂ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಗ್ಯಾರೆಂಟಿಗಳ ಕುರಿತು ಚರ್ಚೆ ಮಾಡುತ್ತೇವೆ. ಗ್ಯಾರೆಂಟಿಗಳನ್ನು ರದ್ದು ಮಾಡುವ ಪ್ರಸ್ತಾವನೆ ನಮ್ಮ ಬಳಿ ಸದ್ಯಕ್ಕಿಲ್ಲ. ಮುಖ್ಯಮಂತ್ರಿ ಯಾರು ಆಗಬೇಕು ಎನ್ನವುದನ್ನು ಪಕ್ಷ ತೀರ್ಮಾನಿಸುತ್ತದೆ.
ಮುಖ್ಯಮಂತ್ರಿ ಆಗಲು ಶಾಸಕರ ಬೆಂಬಲ ಬೇಕು. ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಸದ್ಯಕ್ಕೆ ಆ ಪ್ರಶ್ನೆ ಬರಲ್ಲ. ಆಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾರೆ. ಮುಖ್ಯಮಂತ್ರಿ ಖರ್ಚಿ ಖಾಲಿ ಇಲ್ಲ.
ಇನ್ನೂ ಕೇಂದ್ರದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಭಾರೀ ಕೈಗಾರಿಕಾ ಸಚಿವರಾಗಿದ್ದಾರೆ. ಕೆಲವು ಬೇಡಿಕೆಗಳನ್ನು ಶೀಘ್ರವಾಗಿ ಸಲ್ಲಿಸಲಾಗುತ್ತದೆ. ರಾಜ್ಯಕ್ಕೆ ಮಹತ್ವದ ಖಾತೆಗಳು ಸಿಕ್ಕಿರುವುದರಿಂದ ನಮ್ಮ ರಾಜ್ಯಕ್ಕೂ ಒಂದಷ್ಟು ನೇರವಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.












Click it and Unblock the Notifications