ಕರ್ನಾಟಕ ಬಂದ್ ಗೆ ಹುಬ್ಬಳ್ಳಿಯಲ್ಲಿ ಬೆಂಬಲದ ನಿರೀಕ್ಷೆ
ಹುಬ್ಬಳ್ಳಿ, ಜೂನ್ 12: ವಿವಿಧ ಸಂಘಟನೆಗಳು ಇಂದು (ಜೂನ್ 12) ಕರೆಕೊಟ್ಟಿರುವ ರಾಜ್ಯ ಬಂದ್‌ಗೆ ಹುಬ್ಬಳ್ಳಿ ಸೇರಿದಂತೆ ಮಲಪ್ರಭಾ ಅಚ್ಚು ಕಟ್ಟು ಪ್ರದೇಶದಲ್ಲಿ ಉತ್ತಮ ಬೆಂಬಲ ದೊರೆಯುವ ನಿರೀಕ್ಷೆ ಇದೆ. ಕಳಸಾ-ಬಂಡೂರಿ ಹೋರಾಟಗಾರರ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳಿಂದ ನಗರದಲ್ಲಿ ಪ್ರತಿಭಟನೆ ಆಯೋಜಿಸಲಾಗಿದ್ದು, ಬಂದ್ ಬೆಂಬಲಿಸಿ ಸಾವಿರಾರು ಕಾರ್ಯಕರ್ತರು ಬೀದಿಗಿಳಿಯಲಿದ್ದಾರೆ.
ಹೊಟೇಲ್ ಮಾಲೀಕರ ಸಂಘ, ಆಟೋ ಚಾಲಕರು ಹಾಗೂ ಮಾಲೀಕರ ಸಂಘ, ಕೆಎಸ್ ಆರ್ ಟಿಸಿ ಮತ್ತು ಎಡ ಪಕ್ಷಗಳ ಅಂಗ ಸಂಸ್ಥೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಎಂದಿನಂತೆ ಬಸ್ ಹಾಗೂ ಆಟೋ ಸಂಚಾರ ಇರಲಿದೆ ಎಂದು ಹೇಳಲಾಗಿದ್ದರೂ ನಿರೀಕ್ಷಿತವಲ್ಲ ಎಂದೇ ಹೇಳಲಾಗುತ್ತಿದೆ. ವೈದ್ಯಕೀಯ ಸೇರಿದಂತೆ ತುರ್ತು ಸೇವೆಗಳು ಅಭಾದಿತ.

ಇನ್ನು ನಗರದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿರುವ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಾದ್ಯಂತ ಇಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆ ವರೆಗೂ ಮದ್ಯ ಮಾರಾಟ ಹಾಗೂ ಮದ್ಯಪಾನ ನಿಷೇಧಿಸಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನ್ನಹಳ್ಳಿ ಆದೇಶ ಹೊರಡಿಸಿದ್ದಾರೆ.












Click it and Unblock the Notifications