ಸಾಮಾಜಿಕ ಅರಣ್ಯ ಇಲಾಖೆ ಅವ್ಯವಹಾರ ಕಂಡು ಲೋಕಾಯುಕ್ತರು ಕೆಂಡಾಮಂಡಲ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್ 30 : ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಾಮಾಜಿಕ ಅರಣ್ಯ ಇಲಾಖೆ ಹಗರಣದ ತನಿಖೆ ಪ್ರಾರಂಭವಾಗಿದೆ.

ನರೇಗಾ ಯೋಜನೆಯಡಿ ನೆಡುತೋಪು ಹೆಸರಲ್ಲಿ , ಕೆಲ ದಿನಗಳ ಹಿಂದೆ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ರಸ್ತೆ ಬದಿ ಗಿಡ ನೆಡುವ ಯೋಜನೆಯಲ್ಲಿ ಕೋಟ್ಯಾಂತರ ರೂಳನ್ನು ಅಧಿಕಾರಿಗಳು ಗುಳಂ ಮಾಡಿದ್ದರು.

Lokayukta enquiry starts for Plantation scam

ಹೀಗಾಗಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಉಪ ಲೋಕಾಯುಕ್ತ ನ್ಯಾಯಮೂರ್ತಿ ಜಿ. ಆನಂದರಿಂದ ತನಿಖೆ ಆರಂಭಿಸಿದ್ದಾರೆ. ಕುಂದಗೋಳ ತಾಲ್ಲೂಕ ಪಂಚಾಯಿತಿ, ಅರಣ್ಯ ಇಲಾಖೆ ಕಚೇರಿಗೆ ಖುದ್ದು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

Lokayukta enquiry starts for Plantation scam

ಖುದ್ದು ಸ್ಥಳ ಪರೀಕ್ಷೆ ಮಾಡಿದ ಅವರು ರಸ್ತೆ ಬದಿಯಲ್ಲಿ ಗಿಡವನ್ನು ನೆಡದೇ ಕೋಟ್ಯಾಂತರ ರೂಪಾಯಿ ಅವ್ಯವಹಾರ ಮಾಡಿದನ್ನು ಕಂಡು ಉಪಲೋಕಾಯುಕ್ತರು ಕೆಂಡಾಮಂಡಲರಾದರು. ಅಲ್ಲದೆ ಗಿಡ ನೆಡದೇ ಗಿಡಗಳಿಗೆ ನೀರು ಉಣಿಸಲಾಗಿದೆ ಎಂದು ಸರ್ಕಾರದಿಂದ ಲಕ್ಷಾಂತರ ಹಣ ಎತ್ತಿದ್ದಾರೆ , ಇದನ್ನು ಗಮನಿಸಿದ ಅವರು ಅಧಿಕಾರಿಗಳನ್ನು ಸಾರ್ವಜನಿಕರೆದುರೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಧಾರವಾಡ ಲೋಕಾಯುಕ್ತ ಎಸ್ಪಿ ಶಶಿಧರ, ಡಿವೈಎಸ್ಪಿ ಶಂಕರ ರಾಗಿ ಉಪಸ್ಥಿತರಿದ್ದರು...

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lokayukta enquiry starts for Plantation scam, There was a allegation regarding misuse of fund of Narega which is used to plantation.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ