ಹುಬ್ಬಳ್ಳಿಯಲ್ಲಿ ಮತ್ತೆ ಮೊಳಗಿತು ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆ

Posted By: Gururaj
Subscribe to Oneindia Kannada

ಹುಬ್ಬಳ್ಳಿ, ನವೆಂಬರ್ 5 : ಅಖಿಲ ಭಾರತೀಯ ವೀರಶೈವ ಮಹಾಸಭಾದವರು ಸ್ಪಂದಿಸದಿದ್ದರೆ ಪ್ರತ್ಯೇಕ ಲಿಂಗಾಯತ ಮಹಾ ಪರಿಷತ್ ರಚನೆ ಮಾಡಬೇಕಾಗುತ್ತದೆ ಎಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ. 'ವೀರಶೈವ ಮಹಾಸಭಾದವರು ಕುರ್ಚಿಗಾಗಿ ರಾಜಕೀಯ ಮಾಡುತ್ತಿದ್ದಾರೆ. ಆದ್ದರಿಂದ, ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆಗೆ ವಿರೋಧ ಮಾಡುತ್ತಿದ್ದಾರೆ' ಎಂದು ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದರು.

ಶಾಮನೂರು ಶಿವಶಂಕರಪ್ಪಗೆ ಮತಿಭ್ರಮಣೆ, ಮಾಜಿ ಸಚಿವರ ಆರೋಪಕ್ಕೆ ಆಕ್ರೋಶ

ಭಾನುವಾರ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ 'ಲಿಂಗಾಯತ ಧರ್ಮ ಸಾಂವಿಧಾನಿಕ ಮಾನ್ಯತೆಗಾಗಿ' ಬೃಹತ್ ಸಮಾವೇಶ ನಡೆಯಿತು. 2018ರ ಫೆಬ್ರವರಿಯೊಳಗೆ ಲಿಂಗಾಯತ ಧರ್ಮ ಸಾಂವಿಧಾನಿಕ ಮಾನ್ಯತೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲು ನಿರ್ಣಯಿಸಲಾಯಿತು.

ಸಮಾವೇಶದಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿ ಅವರು, 'ಹಲವು ಬಾರಿ ಮನವಿ ಮಾಡಿದರೂ ಶ್ಯಾಮನೂರು ಶಿವಶಂಕರಪ್ಪ ಅವರು ಸ್ಪಂದಿಸಿಲ್ಲ. ಅನಿವಾರ್ಯವಾಗಿ ಪ್ರತ್ಯೇಕ ಲಿಂಗಾಯತ ಮಹಾ ಪರಿಷತ್ ಆಗುವಂತೆ ಮಾಡಬೇಡಿ. ರಚನೆ ಮಾಡಿದ ಮೇಲೆ ನಮ್ಮನ್ನು ದೂರಬೇಡಿ' ಎಂದರು.

ಲಿಂಗಾಯಿತರು ಎಡಬಿಡಂಗಿಗಳು: ಚಂದ್ರಶೇಖರ ಪಾಟೀಲ್

ಕೆಎಲ್‌ಇ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರಭಾಕರ ಕೋರೆ ಅವರ ವಿರುದ್ಧ ಸಮಾವೇಶದಲ್ಲಿ ಆಕ್ರೋಶ ವ್ಯಕ್ತವಾಯಿತು. ಕೋರೆ ಅವರು ಬದಲಾಗಬೇಕು ಇಲ್ಲವಾದಲ್ಲಿ ಕೆಎಲ್‌ಇ ಅಧ್ಯಕ್ಷ ಸ್ಥಾನ ಬಿಡಬೇಕಾಗುತ್ತದೆ ಎಂದು ಸಮಾವೇಶದಲ್ಲಿ ವಿವಿಧ ನಾಯಕರು ಹೇಳಿದರು.

'ಒಬ್ಬ ತಂದೆಗೆ ಹುಟ್ಟಿದವರು ಲಿಂಗಾಯತರು'

'ಒಬ್ಬ ತಂದೆಗೆ ಹುಟ್ಟಿದವರು ಲಿಂಗಾಯತರು'

ಸಮಾವೇಶದಲ್ಲಿ ಮಾತನಾಡಿದ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, 'ಹುಬ್ಬಳ್ಳಿ ಅಂದರೆ ಸಾಕಷ್ಟು ಮಹಾಪುರುಷರಿಗೆ ಜನ್ಮ ನೀಡಿದೆ. ಒಬ್ಬ ತಂದೆಗೆ ಹುಟ್ಟಿದವರು ಲಿಂಗಾಯತರು. ಐವರು ತಂದೆಗೆ ಹುಟ್ಟಿದವರು ವೀರಶೈವರು' ಎಂಬ ವಿವಾದಾತ್ಮಕ ಹೇಳಿಕೆ ನೀಡಿದರು.

'ಕಲ್ಲಿಂದ ಹೊಡೆಯಬೇಕು'

'ಕಲ್ಲಿಂದ ಹೊಡೆಯಬೇಕು'

ಸುಲಫಲ ಮಠದ ಶಿವಯೋಗಿ ಶ್ರೀಗಳು, ‘ಪಂಚ ಪೀಠಾಧಿಪತಿಗಳು ಲಿಂಗಾಯತ ಸಮಾಜದ ಪೀಡಕರು, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಗಾಂಧೀಜಿಯನ್ನು ಕೊಂದವರು ಎಂ.ಎಂ.ಕಲಬುರ್ಗಿ ಅವರನ್ನು ಕೊಂದಿದ್ದಾರೆ. ಮನುಷ್ಯರ ಹೆಗೆಲ ಮೇಲೆ ಹತ್ತಿ ಮೆರೆಯುವವರನ್ನು ಕಲ್ಲಿನಿಂದ ಹೊಡೆಯಬೇಕು' ಎಂದರು.

'ಮಾನ್ಯತೆ ಸಿಕ್ಕರೆ ಯಾರಿಗೂ ತೊಂದರೆಯಾಗಲ್ಲ'

'ಮಾನ್ಯತೆ ಸಿಕ್ಕರೆ ಯಾರಿಗೂ ತೊಂದರೆಯಾಗಲ್ಲ'

ಸಭೆಯಲ್ಲಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್ ಅವರು, ‘ಕೆಲವು ಮಠಾಧೀಶರು ಬಸವನ್ಣನವರು ಬಿಟ್ಟುಬಂದ ವೈದಿಕ ಪದ್ಧತಿ ಆಚರಿಸುತ್ತಾರೆ. ನಾವು ಹಿಂದೂ ಧರ್ಮದ ವಿರೋಧಿಗಳಲ್ಲ. ನಮಗೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕರೆ ಯಾರಿಗೂ ತೊಂದರೆಯಾಗುವುದಿಲ್ಲ' ಎಂದು ಹೇಳಿದರು.

ಶ್ಯಾಮನೂರು ವಿರುದ್ಧ ಆಕ್ರೋಶ

ಶ್ಯಾಮನೂರು ವಿರುದ್ಧ ಆಕ್ರೋಶ

ಸಮಾವೇಶ ಉದ್ದೇಶಿಸಿ ಮಾತನಾಡಿದ ಮಾತೆ ಮಹಾದೇವಿ ಅವರು, ‘ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಅವರು ಲಿಂಗಾಯತರಿಗೆ ಸ್ವತಂತ್ರ ಧರ್ಮ ಸಿಗಬಾರದು ಎಂದು ವೀರಶೈವ ಲಿಂಗಾಯತ ಧರ್ಮ ಕೇಳುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ವೀರಶೈವರ ಬಾಲ ಹಿಡಿದುಕೊಂಡು ಓಡಾಡುತ್ತಿದ್ದಾರೆ'

'ವೀರಶೈವರ ಬಾಲ ಹಿಡಿದುಕೊಂಡು ಓಡಾಡುತ್ತಿದ್ದಾರೆ'

‘ಜಗದೀಶ್ ಶೆಟ್ಟರ್ ಅವರನ್ನು ಸಮಾವೇಶಕ್ಕೆ ಕರೆದರೂ ಬರಲಿಲ್ಲ. ಲಿಂಗಾಯತರ ಹೆಸರಲ್ಲಿ ಶಾಸಕ, ಮಂತ್ರಿ, ಸಿಎಂ ಆಗಿದ್ದಾರೆ. ಈಗ ವೀರಶೈವರ ಬಾಲ ಹಿಡಿದುಕೊಂಡು ಓಡಾಡುತ್ತಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿರುದ್ಧ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lingayat claim for a separate religion again in Hubballi, On November 5, 2017. Huge rally held in Nehru Stadium.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ