Get Updates
Get notified of breaking news, exclusive insights, and must-see stories!

ನವೆಂಬರ್ 18ಕ್ಕೆ ಎಚ್ ಡಿಕೆ ಹುಬ್ಬಳ್ಳಿ ಮನೆ ಗೃಹಪ್ರವೇಶ

ಹುಬ್ಬಳ್ಳಿ, ನವೆಂಬರ್ 14: ನಗರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನವೆಂಬರ್ 18ರಂದು ಗೃಹಪ್ರವೇಶ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮತ್ತು ಜೆಡಿಎಸ್ ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ಸಂಬಂಧಿ ಸುರೇಶ ರಾಯರಡ್ಡಿ ಅವರ ಮನೆಯನ್ನು ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿರುವ ಭೈರಿದೇವರಕೊಪ್ಪದ ಮಾಯಕಾರ್ಸ್ ಕಾಲೋನಿ, ಬ್ಲಾಕ್ ನಂ.359,2, ಒಂದನೇ ಮುಖ್ಯರಸ್ತೆ, ಈಶ್ವರ ನಗರದಲ್ಲಿ ಸುರೇಶ ಅವರ ಏಕದಂತ ಕೃಪಾ ಹೆಸರಿನ ಎರಡು ಮಹಡಿಯ, ನಾಲ್ಕು ಕೋಣೆಯ ಮನೆಯಲ್ಲಿ ಕುಮಾರಸ್ವಾಮಿ ಅವರು ತಿಂಗಳಲ್ಲಿ 15 ದಿನ ವಾಸ ಮಾಡಲಿದ್ದಾರೆ.[ಹುಬ್ಬಳ್ಳಿಯಲ್ಲಿ ಕುಮಾರಸ್ವಾಮಿ 2ನೇ ಮನೆ ಮಾಡ್ತಿರೋದು ಯಾಕೆ?]

kumarswamy

ಒಟ್ಟು 6 ಸಾವಿರ ಚದರಡಿಯ ಈ ಮನೆಯಲ್ಲಿ ನೂರಕ್ಕೂ ಹೆಚ್ಚು ಜನ ಕುಳಿತುಕೊಳ್ಳುವ ಸಭಾ ಭವನ, ಕೆಲಸಗಾರರಿಗೆ ಪ್ರತ್ಯೇಕ ವ್ಯವಸ್ಥೆ ಮತ್ತು ಕಾರುಗಳ ನಿಲುಗಡೆ ಸಾಕಷ್ಟು ಜಾಗ ಮೀಸಲಿಡಲಾಗಿದೆ. ಜೊತೆಗೆ ಇಲ್ಲಿ ಕಚೇರಿಯನ್ನೂ ಮಾಡಿಕೊಳ್ಳಬಹುದಾಗಿದೆ.[ಉತ್ತರ ಕರ್ನಾಟಕದಿಂದ ಚುನಾವಣೆಗೆ ಸ್ಪರ್ಧಿಸ್ತೀನಿ: ಎಚ್ ಡಿಕೆ]

ಈಗಾಗಲೇ ಸಾಕಷ್ಟು ವಾಸ್ತು ಪರಿಣತರು ಬಂದು, ಮನೆ ಪರಿಶೀಲಿಸಿ ಉತ್ತರ ದಿಕ್ಕಿಗೆ ಬಾಗಿಲು ಇರುವ ಈ ಮನೆಯನ್ನೇ ಅಂತಿಮಗೊಳಿಸಿದ್ದಾರೆ. ಹೋಮ, ಹವನಗಳೊಂದಿಗೆ ಕುಮಾರಸ್ವಾಮಿ ಅವರು ತಮ್ಮ ಪತ್ನಿ ಅನಿತಾರೊಂದಿಗೆ ನವೆಂಬರ್ 18ರಂದು ಗೃಹಪ್ರವೇಶ ಮಾಡಲಿದ್ದಾರೆ. ಅಂದಹಾಗೆ, ಈ ಮನೆಯನ್ನು ಕುಮಾರಸ್ವಾಮಿ ಅವರು ಇನ್ನೂ ನೋಡಿಯೇ ಇಲ್ಲ. ಜೆಡಿಎಸ್ ನ ಸ್ಥಳೀಯ ಧುರೀಣರು ಈ ಮನೆಯನ್ನು ಆಯ್ಕೆ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+