ಬಿಜೆಪಿಯಲ್ಲಿ ಬಹುಮುಖ್ಯ ಬದಲಾವಣೆ ಆಗಲಿದೆ, ಆಗ ಪಕ್ಷಕ್ಕೆ ಮರಳುವೆ: ಕೆ.ಎಸ್.ಈಶ್ವರಪ್ಪ
ಹುಬ್ಬಳ್ಳಿ, ಸೆಪ್ಟಂಬರ್ 12: ಕರ್ನಾಟಕ ಲೋಕಸಭಾ ಚುನಾವಣೆ ವೇಳೆ ಟಿಕೆಟ್ ವಿಚಾರವಾಗಿ ಬಂಡಯಾವೆದ್ದು ಪಕ್ಷೇತರವಾಗಿ ಸ್ಪರ್ಧಿಸಿ ಪರಭಾವಗೊಂಡ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಸದ್ಯ ಬಿವೈ ವಿಜಯೇಂದ್ರ ನಾಯಕತ್ವ ಒಪ್ಪಿಕೊಂಡರೇ ಎಂಬ ಕುತೂಹಲ ಮೂಡಿದೆ. 'ತವರು ಮನೆಗೆ ಹೋಗಲು ಯಾವ ಮಹಿಳೆಯಾದರು ಒಲ್ಲೆ ಎನ್ನುತ್ತಾಳೆಯೆ' ಎಂದು ಹೇಳುವ ಮೂಲಕ ಬಿಜೆಪಿಗೆ ಮರಳುವ ಬಗ್ಗೆ ಅವರೇ ಮಾತನಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ತವರು ಮನೆಗೆ ಹೋಗಲು ಯಾವ ಮಹಿಳೆಯಾದರು ಒಲ್ಲೆ ಎನ್ನುತ್ತಾಳೆಯೆ? ಬಿಜೆಪಿಗೆ ಮರಳಲು ನಾನೇಕೆ ಒಲ್ಲೆ ಎನ್ನಲಿ. ತವರು ಮನೆಯಲ್ಲಿ ಕೆಲವು ಸಹೋದರರು ಇಲ್ಲಸಲ್ಲದ ಸ್ಥಿತಿ ನಿರ್ಮಿಸಿದ್ದಾರೆ. ಶೀಘ್ರವೇ ಅದು ಸರಿಯಾಗುತ್ತೆ ನಾನು ಮತ್ತೆ ತವರಿಗೆ ಮರಳುವೆ'' ಎಂದು ಮಾಜಿ ಸಚಿವ ಸತಃ ಅವರೇ ತಿಳಿಸಿದ್ದಾರೆ.

ರಾಜ್ಯಾಧ್ಯಕ್ಷ ಸ್ಥಾನ ಬಹಳ ದಿನ ಉಳಿಯುವುದಿಲ್ಲ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ಕೈಯಲ್ಲಿ ಪಕ್ಷ ಸಿಲುಕಿದೆ. ಎಲ್ಲವೂ ಸರಿಯಾಗಲಿದೆ ಎಂಬ ವಿಶ್ವಾಸ ನನಗೆ ವಿಶ್ವಾಸವಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಆರು ತಿಂಗಳ ಹಿಂದೆ ಖಾಲಿ ಆಯ್ತು, ಆಗ ಯಡಿಯೂರಪ್ಪ ಏನೋ ಮಾಡಿ ಶಾಸಕನಾಗಿದ್ದ ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸಿದ್ದರು. ಇದು ಬಹಳ ದಿನ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.
ಕುಟುಂಬ ಹಿಡಿತಕ್ಕೆ ಪಕ್ಷ ಸಿಲುಕಬಾರದು ಎಂಬ ಪ್ರಧಾನಿ ನರೇಂದ್ರ ಮೋದಿ ಆಶಯಕ್ಕೆ ವಿರುದ್ಧವಾಗಿ ಕರ್ನಾಟಕದಲ್ಲಿ ಬಿಜೆಪಿ ಸ್ಥಿತಿಯಿದೆ. ಯಡಿಯೂರಪ್ಪ ಕುಟುಂಬ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡಿದೆ ಎಂಬುದನ್ನು ನಾನು ಹೇಳುತ್ತಿಲ್ಲ. ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ್ ಬಹಿಂಗವಾಗಿಯೇ ವಿಜಯೇಂದ್ರ ನಮ್ಮ ಭಿಕ್ಷೆಯಿಂದ ನೀನು ಗೆದ್ದಿದ್ದೀಯ ಎಂದಿದ್ದರು. ಈ ಮೂಲಕ ಯಡಿಯೂರಪ್ಪ ಬಿಜೆಪಿಗೆ, ಡಿಕೆ ಶಿವಕುಮಾರ್ ಕಾಂಗ್ರೆಸ್ ಕಾರ್ಯಕರ್ತರಿಗೆ ದ್ರೋಹ ಬಗೆದಿದ್ದಾರೆ ಎಂದು ಹೇಳಿದರು.

ಈಶ್ವರಪ್ಪ ಬಿಜೆಪಿ ತೊರೆಯಲು ಕಾರಣವೇನು?
ವಿಧಾನಸಭೆಯಲ್ಲಿ ಪಕ್ಷ ನೀಡಿದ ಭರವಸೆ ಮೇರೆಗೆ ಸ್ಪರ್ಧಿಸದ ಕೆ.ಎಸ್.ಈಶ್ವರಪ್ಪ ಅವರು, ಅಂದೇ ಪುತ್ರನಿಗೆ ಲೋಕಸಭಾ ಟಿಕೆಟ್ ಕೊಡಿಸಲು ಪ್ಲಾನ್ ಮಾಡಿಕೊಂಡಿದ್ದರು. ಆದರೆ ಬದಲಾದ ರಾಜಕಾರಣ ಹಿನ್ನೆಲೆಯಲ್ಲಿ ಈಶ್ವರಪ್ಪ ಪುತ್ರನಿಗೆ ಟಿಕೆಟ್ ಸಿಗಲಿಲ್ಲ. ಹೀಗಾಗಿ ಕೆಎಸ್‌ಈಶ್ವರಪ್ಪ ಅವರು ಬಂಡಾಯವೆದ್ದರು.
ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಗೆ ಪಟ್ಟು ಹಿಡಿದ್ದ ಕೆ.ಎಸ್ ಈಶ್ವರಪ್ಪ ಅವರಿಗೆ ಪಕ್ಷದಿಂದ ನಿರಾಸೆ ಆಯಿತು. ಕೂಡಲೇ ಬಂಡಾಯ ಎದ್ದ ಅವರು, ಶಿವಮೊಗ್ಗದಲ್ಲಿ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಆದರೆ ಚುನಾವಣೆಯಲ್ಲಿ ಪರಾಭವಗೊಂಡರು.
ಈ ವೇಳೆಗಾಗಲೇ ಕುಟುಂಬ ರಾಜಕಾರಣ, ಪುತ್ರ ಪ್ರೇಮ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಲಾಭಿ ವಿಚಾರ ಇಟ್ಟುಕೊಂಡು ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ರಾಜ್ಯಾಧ್ಯಕ್ಷ ಸ್ಥಾನ, ಕುಟುಂಬ ಕೈಯಲ್ಲಿರುವ ಬಿಜೆಪಿ ಪಕ್ಷ ಸರಿಹೋಗಲಿದೆ. ನಂತರ ಪಕ್ಷಕ್ಕೆ ಬರುವುದಾಗಿ ತಿಳಿಸಿದ್ದಾರೆ.












Click it and Unblock the Notifications