Mahadayi Project: ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ಅನ್ಯಾಯ ಪ್ರಶ್ನಿಸಲು ಕರ್ನಾಟಕ ಪ್ಲಾನ್
ಹುಬ್ಬಳ್ಳಿ, ಸೆಪ್ಟಂಬರ್ 06: ಮಹದಾಯಿ ಯೋಜನೆ ಜಾರಿ ಕುರಿತಂತೆ ರಾಜ್ಯ ಸಚಿವ ಸಂಪುಟದಲ್ಲಿ ವನ್ಯಜೀವಿ ಮಂಡಳಿ ತಿರಸ್ಕಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ವಪಕ್ಷ ನಿಯೋಗ ಪ್ರಧಾನಿ ಬಳಿ ಕರೆದೊಯ್ಯಲು ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಮಾತನಾಡಿರುವ ಕಾನೂನು ಸಚಿವ ಎಚ್.ಕೆ.ಪಾಟೀಲ್ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ. ನಾವು ಸುಪ್ರೀಂ ಕೋರ್ಟ್ ಮೆಟ್ಟಲು ಹತ್ತುತ್ತೇವೆ ಎಂದು ತಿಳಿಸಿದರು.
ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಎಚ್‌ಕೆ ಪಾಟೀಲ್ ಅವರು, ಮಹದಾಯಿ ಯೋಜನೆ ಜಾರಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಉತ್ತರ ಕರ್ನಾಟಕದ ಪ್ರಮುಖ ನದಿ ನೀರು ಯೋಜನೆ ಜಾರಿಯನ್ನು ವನ್ಯಜೀವಿ ಮಂಡಳಿ ತಿರಸ್ಕಾರ ಮಾಡಿದೆ.

ಮಹದಾಯಿ ವಿಚಾರದಲ್ಲಿ ದೊಡ್ಡ ಅನ್ಯಾಯ
ಇದೇ ವಿಚಾರವಾಗಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಸಚಿವ ಸಂಪುಟದಲ್ಲಿ ಸುದೀರ್ಘವಾದ ಚರ್ಚಿಸಲಾಗಿದೆ. ಮಹದಾಯಿ ಯೋಜನೆಗೆ ಭಾರೀ ಹಿನ್ನಡೆ ಆಗಿದ್ದು. ಕೇಂದ್ರ ಸರ್ಕಾರದ ವನ್ಯ ಜೀವಿ ಮಂಡಳಿ ಮುಂದೆ ಸಹ ಹಾಕುವ ಮೂಲಕ ಕರ್ನಾಟಕಕ್ಕೆ ಮಾಡಿದ ದೊಡ್ಡ ಅನ್ಯಾಯ ಆಗಿದೆ.
ಈ ಹಿಂದೆಯೇ ಅರಣ್ಯ ಇಲಾಖೆಯ ಅವರು ಈಗಾಗಲೇ ಅನುಮತಿ ಕೊಡಲು ಸಿದ್ಧರಿದ್ದರು. ಆದರೆ ಕೇಂದ್ರ ಸರ್ಕಾರದವರು 10 ವರ್ಷಗಳಿಂದ ಸರಿಯಾಗಿ ನಡೆದುಕೊಂಡಿಲ್ಲ. ಚುನಾವಣೆಗೆ ಬಂದಾಗಲೇ ಎಲ್ಲ ಕೇಂದ್ರದಲ್ಲಿ ಆಡಳಿತ ಪಕ್ಷದ ನಾಯಕರು ಯೋಜನೆಗೆ ಅನುಮತಿ ಕೊಡಿಸುತ್ತೇವೆ ಯಾವುದೇ ಕಾರಣಕ್ಕೋ ಬಿಡಲ್ಲ. ಅನುಮತಿ ಸಿಗುತ್ತದೆ ಎಂಬ ಭರವಸೆ ಕೊಡುತ್ತಲೇ ಬಂದಿದ್ದಾರೆ.

ಬೇರೆ ರಾಜ್ಯಗಳ ಕೆಲಸಗಳು ತ್ವರಿತ, ಕರ್ನಾಟಕದ್ದು ನಿರ್ಲಕ್ಷ್ಯ
ಗೋವಾದ್ದು 4000 ಕೆವಿ ವಿದ್ಯುತ್ ಲೈನ್ ಎಳೆಯಲು 435 ಎಕರೆ ಭೂಮಿಯನ್ನ ಚಿಟಿಕೆ ಹೊಡೆಯುವುದರೊಳಾಗಿ ಕ್ಲೀಯರ್ ಮಾಡಲು ಬಿಜೆಪಿ ಕೇಂದ್ರದ ಸಚಿವರು ಪತ್ರ ಬರೆಯುತ್ತಾರೆ. ತ್ವರಿತವಾಗಿ ಬೇರೆ ರಾಜ್ಯಗಳ ಕೆಲಸಗಳು ನಿಮ್ಮುಂದ ಆಗುವಾಗ, ಕರ್ನಾಟಕ ಕೆಲಸಕ್ಕೆ ತಾತ್ಸಾರ ಏಕೆ? ಎಂದು ಅವರು ಪ್ರಶ್ನಿಸಿದರು.
ಇದುವರೆಗೆ ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಕಾನೂನು ತೊಡಕು ನಿವಾರಣೆ ಆಗಿದ್ದು, ನ್ಯಾಯಾಧೀಕರಣದಲ್ಲಿ ತೀರ್ಮಾನ ಸಹ ಆಯಿತು. ಮೊದಲು ಅಂತರರಾಜ್ಯ ವಿವಾದ ಬಗೆಹರಿಸಲಿ ಎಂದೆವು, ಆದರೆ ಈಗ ಏನಾಯಿತು? ಮತ್ತೇ ಅನ್ಯಾಯ ಮಾಡಲಾಗಿದೆ ಎಂದು ಅವರು ದೂರಿದರು.
ಮಹದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಆದ ಅನ್ಯಾಯವನ್ನು ಸಹಿಸುವುದಿಲ್ಲ. ಈಗ ತಕ್ಷಣ ನಮ್ಮ ಮುಖ್ಯಮಂತ್ರಿಗಳು ಸರ್ವ ಪಕ್ಷಗಳ ಸಭೆ ಕರೆಯುತ್ತಾರೆ. ಸಭೆಯಲ್ಲಿ ಹೋರಾಟದ ಬಗ್ಗೆ ಚರ್ಚೆ ನಡೆಸಲಾಗುವುದು. ನಂತರ ಪ್ರಧಾನಿ ನರೇಂದ್ರ ಮೋದಿ ಬಳಿ ಸರ್ವ ಪಕ್ಷಗಳ ನಿಯೋಗ ತೆಗೆದುಕೊಂಡು ಹೋಗಲಾಗುವುದು.
ತಜ್ಞರ ಸಲಹೆ ಮೇರೆಗೆ ಕಾನೂನು ಹೋರಾಟ
ಇದರ ಜೊತೆಗೆ ಸುಪ್ರೀಂಕೋರ್ಟ್ ಕಟ್ಟೆ ಹತ್ತಿ ಹತ್ತಬೇಕು ಎನ್ನುವ ಕಾರಣದಿಂದಾಗಿ ನಿರ್ಧಾರ ಆಗಿದೆ ಕಾನೂನು ತಜ್ಞರ ಜೊತೆಗೆ ಚರ್ಚೆ ಮಾಡಲಾಗುವುದು ಎಂದರು. ಇನ್ನು ಕೋವೀಡ್ ನಲ್ಲಿ ಆದ ಹಗರಣ ಕುರಿತು ಮೈಕಲ್ ಖುನ್ನಾ ವರದಿ ಅಧ್ಯಯನಕ್ಕಾಗಿ ಸರಕಾರದ ಮುಖ್ಯ ಕಾರ್ಯದರ್ಶಿ ಅತೀಖ್ ನೇತೃತ್ವದ ಸಮಿತಿ ರಚನೆ ಸಹ ಮಾಡಲಾಗುವುದು.
ಸಮಿತಿ ವರದಿ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ರಾಜ್ಯಪಾಲರು ಒಟ್ಟು 11 ಬಿಲ್ ವಾಪಸು ಕಳುಹಿಸಿದ್ದರು ಇದರಲ್ಲಿ ಕೇಲ ಬಲ್ ಗಳಲ್ಲಿ ಒಪ್ಪಿಗೆ ಪಡೆಯಬೇಕಾಗಿತ್ತು. ಕೇಲವು ಮಾಹಿತಿ ಕೋರಲಾಗಿತ್ತು. ಕೇಲವು ತಾಂತ್ರಿಕ ಸಮಸ್ಯೆ ಇದ್ದವು ಈಗಾಗಲೇ 5 ಬಿಲ್ ಗಳನ್ನ ಮತ್ತೇ ಮರಳಿ ಮಂಡನೆ ಮಾಡಲಾಗಿದೆ.
ಇನ್ನು ಆರು ಬಿಲ್ ಗಳಿಗೆ ರಾಜ್ಯಪಾಲರು ಕೇಳಿದ ಮಾಹಿತಿ ಸಂಗ್ರಹ ಮಾಡಲಾಗುವುದು. ಈ ವಾರಾಂತ್ಯದಲ್ಲಿ ಎಲ್ಲ ಬಿಲ್ ಗಳನ್ನ ಕಳುಹಿಸಲಾಗುವುದು. ಕಾನೂನು ತಜ್ಞರ ಸಲಹೆ ಪಡೆದುಕೊಂಡು ಈ ವಿಚಾರವನ್ನು ಸುಪ್ರೀಂ ಕೊರ್ಟ್‌ಗೆ ಹಾಕಲಾಗುವುದು ಎಂದು ಅವರು ರಾಜ್ಯ ಸರ್ಕಾರದ ಮುಂದಿನ ನಡೆ ಬಗ್ಗೆ ತಿಳಿಸಿದರು.












Click it and Unblock the Notifications