'ರೈತರ ಸಾಲ ಮನ್ನಾ : ಮಾತು ಮರೆತ ಸಿದ್ದರಾಮಯ್ಯ'

Written By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್ 05 : ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಜೆಡಿಯು ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಮಹಾದಾಯಿ ಹೋರಾಟ: ಊರಲ್ಲಿ ಇಲ್ಲದವರಿಗೂ ಕೋರ್ಟ್ ಸಮನ್ಸ್

ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ, ರಾಜ್ಯದ ಕೂಗಿಗೆ ಸ್ಪಂದಿಸದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಕಳಸಾ ಬಂಡೂರಿ ಯೋಜನೆ ಅನುಷ್ಠಾನಗೊಳಿಸುವಂತೆ ಆಗ್ರಹಿಸಿದರು.

JDU demands waiver of farmer's loan in nationalized banks

ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರರು ಹುಬ್ಬಳ್ಳಿಯ ಒಂದನೇಯ ಜಿಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರಾದರು. ಇವರ ಮೇಲೆ ಮಹದಾಯಿ, ಕಳಸಾ ಬಂಡೂರಿ ಹೋರಾಟದ ಸಮಯದಲ್ಲಿ ಸರ್ಕಾರಿ ಬಸ್ ಗೆ ಕಲ್ಲು ಎಸೆದು ಹಾಳು ಮಾಡಿದ ಆರೋಪ ಹೊರಿಸಲಾಗಿದೆ.

JDU demands waiver of farmer's loan in nationalized banks

ನವಲಗುಂದ ತಾಲೂಕಿನ 6 ರೈತರ ಮೇಲೆ ಮತ್ತು ಹೋರಾಟಗಾರರ ವಿರುದ್ಧ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಸಪ್ಟೆಂಬರ್ 26ಕ್ಕೆ ಮುಂದೂಡಿದೆ.

JDS ಅಧಿಕಾರಕ್ಕೆ ಬಂದ್ರೆ ನೀರಿನ ಸಮಸ್ಯೆಗೆ ಇತಿಶ್ರೀ: HDK

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮಹದಾಯಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ರೈತರ ಮೇಲೆನ‌ ಎಲ್ಲಾ ಕೇಸ್ ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದ ಸರ್ಕಾರ ಈವರೆಗೂ ಹಿಂತೆಗೆದುಕೊಂಡಿಲ್ಲ. ತನ್ನ ಮಾತನ್ನು ರಾಜ್ಯ ಸರಕಾರ ಮರೆತಿದೆ ಎಂದು ಅಳಲು ತೋಡಿಕೊಂಡರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
JDU workers have demanded that Karnataka farmer's loan in nationalized banks should be waived off and Kalasa Banduri irrigation project should be implemented immediately. JDU workers and farmers protested in Hubballi on Saturday. 'ರೈತರ ಸಾಲ ಮನ್ನಾ : ಮಾತು ಮರೆತ ಸಿದ್ದರಾಮಯ್ಯ'
Please Wait while comments are loading...