ದೊಡ್ಡ ತ್ಯಾಗ ಮಾಡಿದ್ದಾರೆ, ಅವರಿಗೆ ಹುದ್ದೆ ಕೊಡುತ್ತೇವೆ; ಶೆಟ್ಟರ್
ಹುಬ್ಬಳ್ಳಿ, ಡಿಸೆಂಬರ್ 9: "ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಬಾರಿಸಿ, ಅಧಿಕಾರವನ್ನು ಭದ್ರಪಡಿಸಿಕೊಂಡಿದೆ. ಆದರೆ ಸೋತ ಕ್ಷೇತ್ರದಲ್ಲಿ ಯಾಕೆ ಸೋಲಾಯಿತು ಎನ್ನುವ ಕುರಿತು ಆತ್ಮಾವಲೋಕನ ಮಾಡುತ್ತೇವೆ" ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಬಿಜೆಪಿ ಅಭ್ಯರ್ಥಿಗಳು ಭರ್ಜರಿಯಾಗಿ ಜಯಸಾಧಿಸಿದ್ದಾರೆ. ಆದರೆ ಎಂಟಿಬಿ ನಾಗರಾಜ್ ಹಾಗೂ ಹಿರಿಯರಾದ ವಿಶ್ವನಾಥ ಯಾಕೆ ಸೋತರು ಎನ್ನುವ ಕುರಿತು ಆತ್ಮಾವಲೋಕನ ಮಾಡುತ್ತೇವೆ" ಎಂದು ತಿಳಿಸಿದರು.

"ಈ ಇಬ್ಬರು ನಾಯಕರು ದೊಡ್ಡ ತ್ಯಾಗ ಮಾಡಿದ್ದಾರೆ. ಹಾಗಾಗಿ ಅವರಿಗೆ ಪಕ್ಷದಿಂದ ಹುದ್ದೆ ಹಾಗೂ ಗೌರವ ಕೊಡುವ ಕೆಲಸ ಮಾಡಲಾಗುವುದು" ಎಂದು ಶೆಟ್ಟರ್ ಹೇಳಿದ್ದಾರೆ.












Click it and Unblock the Notifications