ರಾಜ್ಯದ ಈ ಜಿಲ್ಲೆಯಲ್ಲಿ ನವಜಾತ ಶಿಶುಗಳ ಮರಣ ಹೆಚ್ಚಳ!
Neonatal Mortality: ಕರ್ನಾಟಕದಲ್ಲಿ ಬಾಣಂತಿಯರು ಸಾವನ್ನಪ್ಪುವುದು ಮುಂದುವರಿದಿದೆ. ಇದರ ನಡುವೆ ರಾಜ್ಯದ ಪ್ರಮುಖ ಜಿಲ್ಲೆಯೊಂದರಲ್ಲಿ ಮತ್ತೆ ನವಜಾತ ಶಿಶುಗಳು ಸಾವನ್ನಪ್ಪುತ್ತಿರುವ ಗಂಭೀರ ಸುದ್ದಿಯೊಂದು ಬಂದಿದೆ. ಈ ಬೆಳವಣಿಗೆ ಆತಂಕಕ್ಕೆ ಕಾರಣವಾಗಿದೆ. ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರು ಸಾವನ್ನಪ್ಪುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ರೀತಿ ಇರುವಾಗಲೇ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ. ರಾಜ್ಯದ ಈ ಜಿಲ್ಲೆಯಲ್ಲಿ ನವಜಾತ ಶಿಶುಗಳ ಮರಣ ಮೃದಂಗ ಶುರುವಾಗಿದೆ.
ರಾಜ್ಯದಲ್ಲಿ ಕಳೆದ ಮೂರು ತಿಂಗಳಿಗೂ ಹೆಚ್ಚಿನ ಅವಧಿಯಿಂದ ಬಾಣಂತಿಯರ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದೀಗ ಹುಬ್ಬಳ್ಳಿ - ಧಾರವಾಡದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಹೆಚ್ಚಳವಾಗಿದೆ. ರಾಜ್ಯದಲ್ಲಿ ಬಾಣಂತಿಯರ ಸಾವಿನ ಪ್ರಕರಣ ಸಾಕಷ್ಟು ಸುದ್ದಿಯಾಗಿತ್ತು. ಆದರೆ ನವಜಾತ ಶಿಶುಗಳ ಸಾವಿನ ಅಂಕಿ - ಅಂಶಗಳು ಇನ್ನಷ್ಟು ಭಯಾನಕವಾಗಿದೆ. ಬಾಣಂತಿಯರ ಸಾವಿನ ನಡುವೆ ನವಜಾತ ಶಿಶುಗಳ ಮರಣ ಮುಂದುವರಿದಿರುವುದು ಆತಂಕಕಾರಿಯಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಮರಣ ಮೃದಂಗ ಮುಂದವರಿದಿದೆ.

ಇನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ಸುತ್ತಮುತ್ತಲಿನ 8 ಜಿಲ್ಲೆಗಳಿಂದ ಗರ್ಭಿಣಿಯರು ಚಿಕಿತ್ಸೆಗೆ ದಾಖಲಾಗುತ್ತಾರೆ. ಅಲ್ಲದೆ ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿ ಕಠಿಣ ಪರಿಸ್ಥಿತಿ ಅಥವಾ ಕೊನೆಯ ಹಂತದಲ್ಲಿ ಕಿಮ್ಸ್‌ಗೆ ಕಳುಹಿಸುವುದು ಸಹ ಇದೆ. ಕಳೆದ ಮೂರು ವರ್ಷಗಳ ಹಿಂದೆ ಈ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಇಳಿಕೆಯಾಗಿತ್ತು. ಆದರೆ, ಇದೀಗ ಮತ್ತೆ ಹೆಚ್ಚಳವಾಗುತ್ತಿದೆ.
ಕಳೆದ ಒಂದೇ ವರ್ಷದಲ್ಲಿ 498 ನವಜಾತ ಶಿಶುಗಳು ಸಾವನ್ನಪ್ಪಿವೆ. ಇದರಲ್ಲಿ 444 ಮಕ್ಕಳು ಕಿಮ್ಸ್ ಆಸ್ಪತ್ರೆಯಲ್ಲಿ ಜನಿಸಿದ್ದು, 54 ಮಕ್ಕಳು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಜನಿಸಿ ಕಿಮ್ಸ್‌ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಈ ಮಕ್ಕಳು ಸಹ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ನವಜಾತ ಶಿಶುಗಳ ಸಾವಿಗೆ ಅಪೌಷ್ಟಿಕತೆ, ತೂಕ ಕಡಿಮೆ ಹಾಗೂ ನಂಜು ಕಾರಣ ಎಂದು ಹೇಳಲಾಗಿದೆ. ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಿಂದ ಬಾಣಂತಿಯರು ಹೆರಿಗೆಗೆ ಕೆಎಂಸಿ ಆರ್.ಐಗೆ ಬರುತ್ತಾರೆ.
ಹೆರಿಗೆಯಾದ ಒಂದು ತಿಂಗಳಲ್ಲೇ ಸಾವನ್ನಪ್ಪುವ ಶಿಶುಗಳ ಸಂಖ್ಯೆ ಹೆಚ್ಚಾಗುತ್ತಿದೆ. ನವಜಾತ ಶಿಶುಗಳ ಹಾಗೂ ಗರ್ಭಿಣಿಯರ ಕಾಳಜಿಗೆ ವಿಶೇಷ ಆರೋಗ್ಯ ಕಾರ್ಯಕ್ರಮಗಳನ್ನು ಜಾರಿ ಮಾಡಬೇಕು. ಅಲ್ಲದೆ ಕಿಮ್ಸ್‌ನಲ್ಲಿ ಆರೋಗ್ಯ ಸೇವೆ ಸುಧಾರಿಸಬೇಕು ಎನ್ನುವ ಆಗ್ರಹಗಳು ಕೇಳಿ ಬಂದಿವೆ.
ತೂಕ ಕಡಿಮೆ ಮುಖ್ಯ ಕಾರಣ: ಇನ್ನು ಕಿಮ್ಸ್‌ನಲ್ಲಿ ಮಕ್ಕಳು ಸಾವನ್ನಪ್ಪುತ್ತಿರುವುದಕ್ಕೆ ಮುಖ್ಯ ಕಾರಣ ಅಪೌಷ್ಟಿಕತೆ ಹಾಗೂ ಕಡಿಮೆ ತೂಕ ಇರುವುದು ಸಹ ಆಗಿದೆ ಎಂದು ಕೆಎಂಸಿ ಆರ್.ಐ ಅಧಿಕ್ಷಕರಾದ ಡಾ.ಈಶ್ವರ ಹಸಬಿ ಅವರು ಹೇಳಿದ್ದಾರೆ. ಕಿಮ್ಸ್‌ಗೆ ದಾಖಲಾಗುವವರ ಸಂಖ್ಯೆ ಹೆಚ್ಚಳವಾಗಿದೆ.
ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಕಡಿಮೆ ಇದೆ. ಅಂದರೆ ಜನನ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಮರಣ ಸಂಖ್ಯೆ ಕಡಿಮೆ ಇದೆ. ಇಲ್ಲಿಗಿಂತ ಹೊರಗಿನ ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ. ನಮ್ಮಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications