Job Fair: ಹುಬ್ಬಳ್ಳಿಯಲ್ಲಿ ಬೃಹತ್ ಉದ್ಯೋಗ ಮೇಳ: ಉದ್ಯೋಗದಾತ ಕಂಪನಿಗಳು, ದಿನಾಂಕ, ಅರ್ಜಿ ಮಾಹಿತಿ ಇಲ್ಲಿದೆ

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಿಂದ ಬೆಂಗಳೂರಿಗೆ ಅದೆಷ್ಟೋ ಜನ ಕೆಲಸವನ್ನು ಅರಿಸಿಕೊಂಡು ಬರುತ್ತಾರೆ. ಆಗ ನಮ್ಮ ಊರಿನಲ್ಲೇ ನಮಗೆ ಒಳ್ಳೆಯ ಉದ್ಯೋಗಗಳು ಸೃಷ್ಟಿಯಾಗಿದ್ದರೇ ಎಂಬ ಮಾತನ್ನು ಸಹ ಆಡಿರುತ್ತಾರೆ. ಈಗ ಇಂತಹ ಉದ್ಯೋಗಿಗಳಿಗೆ ಖುಷಿ ಸುದ್ದಿಯೊಂದು ಬಂದಿದೆ. ಹುಬ್ಬಳ್ಳಿಯಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ನವನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಉದ್ಯೋಗ ಮೇಳವನ್ನು ಜುಲೈ 9 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅದರಗುಂಚಿಯ ಸಿ.ಆಯ್.ಸಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.

Hubli Job Fair Opportunities for Graduates and Skilled Workers on July 9

ಮೇಳದಲ್ಲಿ 20 ಕ್ಕೂ ಹೆಚ್ಚು ಖಾಸಗಿ ವಲಯದ ಉದ್ಯೋಗದಾತರುಗಳು ಭಾಗವಹಿಸಿ, ಸಂಸ್ಥೆಗಳಲ್ಲಿ ವಿವಿಧ ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ. 18 ರಿಂದ 35 ವಯೋಮಿತಿಯ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು.

ಅಭ್ಯರ್ಥಿಗಳು ತಮ್ಮ ಆಧಾರ ಕಾರ್ಡ, ಸ್ವವಿವರಗಳ ಪ್ರತಿಯನ್ನು ತರಬೇಕು. ಬರುವಾಗ ಅಭ್ಯರ್ಥಿಗಳು 5ಕ್ಕೂ ಹೆಚ್ಚಿನ ಪ್ರತಿಗಳನ್ನು ತಂದರೆ ಒಳ್ಳೆಯದು. ಆಕಸ್ತ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಮೇಳಕ್ಕೆ ಹಾಜರಾಗಬೇಕು. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು https://shorturl.at/qXip9 ವೆಬ್ ಸೈಟ್ ಮುಖಾಂತರ ನೋಂದಣಿ ಮಾಡಿಕೊಂಡು ಉದ್ಯೋಗ ಮೇಳದಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0836-2225288, 9535360259, 8453208555 , 9806905751 ಕಚೇರಿ ವೇಳೆಯಲ್ಲಿ ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಆನ್‌ಲೈನ್‌ ಲಿಂಕ್‌ನಲ್ಲಿ ಅಭ್ಯರ್ಥಿಗಳಿಗೆ ಅನುಕೂಲವಾಗುವ ಕ್ಯೂಆರ್‌ ಕೋಡ್‌ ಸಹ ನೀಡಲಾಗಿದೆ.

Hubli Job Fair Opportunities for Graduates and Skilled Workers on July 9

ಸುವರ್ಣ ಅವಕಾಶ ವಾಗಿದೆ.

ಉತ್ತರ ಕರ್ನಾಟಕದ ಭಾಗದ ಜನರಿಗೆ ಅನುಕೂಲವಾಗಲು ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಈ ಉದ್ಯೋಗ ಮೇಳೆದ ಲಾಭವನ್ನು ನಿರುದ್ಯೋಗಿ ಯುವಕರು, ಈಗ ಪದವಿ ಮುಗಿಸಿ ಕೆಲಸ ಹುಡುಕುತ್ತಿರುವ ಯುವ ಜನತೆಗೆ ಒಳ್ಳೆಯ ಸುವರ್ಣ ಅವಕಾಶ ಇದಾಗಿದೆ.

ದಾವಣಗೆರೆ ಉದ್ಯೋಗ ಮೇಳ

ಇನ್ನು ದಾವಣಗೆರೆಯಲ್ಲೂ ಉದ್ಯೋಗ ಮೇಳೆವನ್ನು ಜುಲೈ 6 ರಂದು ನಡೆಸಲಾಗುತ್ತಿದೆ. ಈ ಉದ್ಯೋಗ ಮೇಳ ಸಂತೇಬೆನ್ನರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗುತ್ತಿದೆ. ಆಕಸ್ತ ವಿದ್ಯರ್ಥಿಗಳು ತಮ್ಮ ಬಯೋಡಾಟಾಗಳ ವಿವರದ ಜೊತೆಗೆ ಭಾಗವಹಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+