1 ರೂಪಾಯಿಗೆ ಊಟ: ಬಡವರ ಹೊಟ್ಟೆ ತುಂಬಿಸುವ 'ರೋಟಿ ಘರ್'
ಹುಬ್ಬಳ್ಳಿ, ನವೆಂಬರ್3 : ಅನ್ನದಾನ ಶ್ರೇಷ್ಠ ದಾನ. ಹಸಿವು ಮುಕ್ತವಾಗಿರಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಇಂದಿನ ಈ ದುಬಾರಿ ದುನಿಯಾದಲ್ಲಿ ಅನೇಕರು ಒಪ್ಪತ್ತಿನ ಗಂಜಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಶ್ರೀಮಂತರು ಶ್ರೀಮಂತರಾಗಿ, ಬಡವರು ಬಡವರಾಗಿ ಉಳಿದಿದ್ದಾರೆ.
ಬೇರೆ ಬೇರೆ ಕೆಲಸಗಳಿಗಾಗಿ ನಗರಗಳಿಗೆ ಬರುವ ಜನರಿಗೆ ಹಸಿವು ನೀಗಿಸಿಕೊಳ್ಳುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಕಡಿಮೆ ದುಡ್ಡಿನಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಬಡ ಜನರು ಬಹಳ ಕಷ್ಟಪಡುತ್ತಾರೆ. ಅಂತವರ ಹೊಟ್ಟೆಯನ್ನು ತುಂಬಿಸುತ್ತಿದೆ ಈ 'ರೋಟಿ ಘರ್'. ಕೇವಲ ಒಂದು ರೂಪಾಯಿಯಲ್ಲಿ ಬಡವರ ಹೊಟ್ಟೆ ತುಂಬಿಸುವಂತಹ ಕೆಲಸವನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯ ರೋಟಿ ಘರ್ ಮಾಡುತ್ತಿದೆ.
ಕೆಲಸ ಸಿಗದಿದ್ದರೂ ಹಣವಿಲ್ಲದ, ಹಸಿದ ಬಡ ಕಾರ್ಮಿಕರಿಗೆ ಹುಬ್ಬಳ್ಳಿಯಂತಹ ನಗರದಲ್ಲಿ ಒಂದೊತ್ತು ಊಟ ಸಿಗುತ್ತದೆಯಲ್ಲ ಎಂಬುದು ಸಂತಸದ ಸುದ್ದಿಯಾಗಿದೆ. ಹುಬ್ಬಳ್ಳಿಯ ಸುತ್ತಮುತ್ತಲಿನ ಹಳ್ಳಿಯಿಂದ ಮಾರುಕಟ್ಟೆಗೆ ಬರುವ ನೂರಾರು ಕೂಲಿ ಕಾರ್ಮಿಕರಿಗೆ ಅತಿ ಕಡಿಮೆ ಹಣದಲ್ಲಿ ರೋಟಿ ಘರ್ ಹಸಿವು ನೀಗಿಸುತ್ತಿದೆ.

ರೋಟಿ ಘರ್‌ನಲ್ಲಿ ದಿನಕ್ಕೆ 160-190 ಮಂದಿಗೆ ಊಟ
ಹುಬ್ಬಳ್ಳಿಯ ಕಂಚಗಾರಗಲ್ಲಿಯ ಮಾರ್ಕೆಟ್ ಪ್ರದೇಶದಲ್ಲಿರುವ ಈ ರೋಟಿ ಘರ್‌ನಲ್ಲಿ ಎಂಟು ವರ್ಷಗಳಿಂದ ನಿತ್ಯ ಮಧ್ಯಾಹ್ನ ಊಟ ನೀಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ತಮಿಳುನಾಡಿನಲ್ಲಿ 'ಅಮ್ಮ ಕ್ಯಾಂಟಿನ್', ಕರ್ನಾಟಕದಲ್ಲಿ ಇಂದಿರಾ ಕ್ಯಾಂಟಿನ್ ಆರಂಭವಾಗುವ ಮುನ್ನವೇ ಈ 'ಘರ್' ಆರಂಭವಾಗಿದೆ ಎನ್ನುವುದು ವಿಶೇಷ. 'ರೋಟಿಘರ್'ನಲ್ಲಿ ಮಧ್ಯಾಹ್ನ 12.15 ರಿಂದ 2.15ರವರೆಗೆ ಊಟ ಪೂರೈಸುತ್ತಾರೆ. ದಿನವೊಂದಕ್ಕೆ 160 ರಿಂದ 190 ಮಂದಿ ಊಟ ಮಾಡುತ್ತಾರೆ. ವಾರದಲ್ಲಿ ಎರಡು ದಿನ ಚಪಾತಿ, ಉಳಿದ ದಿನಗಳಲ್ಲಿ ಚಿತ್ರಾನ್ನ, ಅನ್ನ ಮತ್ತು ಸಾರು, ಪಲಾವ್ ಇರುತ್ತದೆ.

ರೋಟಿ ಘರ್‌ನಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ
ಭಾನುವಾರ ಊಟದ ಜೊತೆಗೆ ಸಿಹಿ ತಿಂಡಿಯೂ ಇರುತ್ತದೆ. ಬುಧವಾರ ವಾರದ ರಜೆ. ಹೋಟೆಲ್‌ನಲ್ಲಿ ಮೂವರು ಸಿಬ್ಬಂದಿ ನೇಮಿಸಲಾಗಿದೆ. ಅಡುಗೆ ಮಾಡುವವರು ಹಾಗೂ ಬಂದವರಿಗೆ ಬಡಿಸುವ ಹೊಣೆಯನ್ನು ಅವರೇ ನಿರ್ವಹಿಸುತ್ತಾರೆ. ರೋಟಿ ಘರ್‌ನಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇದೆ. ಹುಬ್ಬಳ್ಳಿಯ ಮಹಾವೀರ ಯೂತ್ ಫೆಡರೇಷನ್ ಈ ಕಾರ್ಯದ ಹಿಂದಿನ ರೂವಾರಿ. ಇದರಲ್ಲಿ 29 ಮಂದಿ ಸದಸ್ಯರಿದ್ದಾರೆ. ಜೈನ್ ಸಮುದಾಯದ ಹಿರಿಯ ಮುಖಂಡರ ಮಾರ್ಗದರ್ಶನವಿದೆ. ಲೋಕೂರ ಕುಟುಂಬದವರು ನೀಡಿದ ಜಾಗದಲ್ಲಿ ಅಡುಗೆ ಮಾಡಲು ಸಣ್ಣದೊಂದು ಕೋಣೆ ಇದೆ.

ರೋಟಿ ಘರ್ ಪ್ರತಿ ತಿಂಗಳು 40 ಸಾವಿರ ಖರ್ಚು
ನಿತ್ಯ ಕೋಟ್ಯಂತರ ಜನ ಒಂದೊತ್ತು ಊಟ ಇಲ್ಲದೇ ಮಲಗುತ್ತಾರೆ ಎಂಬ ಸುದ್ದಿ ತಿಳಿದು ಮರುಗಿದ ಫೆಡರೇಷನ್ ಅಧ್ಯಕ್ಷ ಸುರೇಶ ಚಾಜೆಡ್, ಏನಾದರೂ ಮಾಡಿ ಬಡವರ ಹಸಿವು ನೀಗಿಸುವಂತಹ ಕೆಲಸ ಮಾಡಬೇಕು ಎಂದು ವಿಚಾರ ಮಾಡಿದರು. ಆ ಒಂದು ವಿಷಯ ತಿಳಿದು ಅಂದೇ 'ರೋಟಿ ಘರ್' ಆರಂಭಕ್ಕೆ ಪ್ರೇರಣೆಯಾಯಿತು ಎಂದು ಸಂಸ್ಥಾಪಕರು ಹೇಳುತ್ತಾರೆ. ರೋಟಿ ಘರ್ ನಡೆಸಲು ಪ್ರತಿ ತಿಂಗಳು 40 ಸಾವಿರ ಖರ್ಚು ಬರುತ್ತದಂತೆ. ದಾನಿಗಳ ನೆರವಿನಿಂದಲೇ ಎಲ್ಲವನ್ನೂ ನಡೆಸುತ್ತಿದ್ದಾರೆ. ಒಂದು ದಿನದಿಂದ ಹಿಡಿದು ತಿಂಗಳವರೆಗಿನ ಖರ್ಚನ್ನು ವಹಿಸಿಕೊಳ್ಳುವ ದಾನಿಗಳಿದ್ದಾರೆ. ಜನ್ಮದಿನದ ಅಂಗವಾಗಿಯೂ ಕೆಲವರು ದೇಣಿಗೆ ನೀಡುತ್ತಾರೆ. ಅವರ ಜನ್ಮದಿನ ಅಂಗವಾಗಿ ಊಟಕ್ಕೆ ಬಂದವರಿಗೆ ಅಂದು ಸಿಹಿ ಮಾಡಿ ಬಡಿಸಲಾಗುತ್ತದೆ.

ಕೂಲಿ ಕಾರ್ಮಿಕರ ಪಾಲಿಗೆ ಸಂಜೀವಿನಿಯಾದ ರೋಟಿ ಘರ್
ನಮ್ಮ ಸಮಾಜದವರು ಮಾತ್ರವಲ್ಲ ಅನೇಕ ಸಮುದಾಯದವರು ರೋಟಿ ಘರ್‌ಗೆ ನೆರವು ನೀಡುತ್ತಿದ್ದಾರೆ. ಹಾಗೆಯೇ ಜಾತ್ಯತೀತ, ಧರ್ಮಾತೀತವಾಗಿ ಇಲ್ಲಿ ಬಂದು ಊಟ ಮಾಡುತ್ತಾರೆ. 1 ರೂಪಾಯಿ ಪಡೆಯುವುದು ಕೂಡ, ಊಟ ಮಾಡುವವರಿಗೆ ಉಚಿತವಾಗಿ ಮಾಡುತ್ತಿದ್ದೇನೆ ಎಂಬ ಭಾವನೆ ಬರಬಾರದು ಎಂಬ ಕಾರಣಕ್ಕೆ ಎನ್ನುತ್ತಾ ಘರ್ ನಡೆಸುವ ಪ್ರಕ್ರಿಯೆಯನ್ನು ರೋಟಿಘರ್ ಸಮಿತಿ ಅಧ್ಯಕ್ಷ ಆನಂದಕುಮಾರ್ ಪಟ್ಟಾ ವಿವರಿಸಿದ್ದಾರೆ.
ಬಡವರ, ಕೂಲಿ ಕಾರ್ಮಿಕರ ಬೇರೆ ಬೇರೆ ಗ್ರಾಮಗಳಿಂದ ಕೆಲಸಕ್ಕೆ ಬರುವ ಜನರಿಗಾಗಿ ಹುಬ್ಬಳ್ಳಿಯ ಈ ರೋಟಿ ಘರ್ ಸಂಜೀವಿನಿಯಾಗಿದೆ. ಕೇವಲ ಒಂದು ರೂಪಾಯಿಯಲ್ಲಿ ಜನರ ಹೊಟ್ಟೆ ತುಂಬಿಸುವ ಕೆಲಸ ಮಾಡುವ ಈ ರೋಟಿ ಘರ್ ನಿರ್ಮಾಣ ಮಾಡಿರುವ ಕಾರ್ಯ ಮೆಚ್ಚುವಂತಹದು.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications