Hubali-Shirdi-Ahmedabad Trains: ಸೌಲಭ್ಯಗಳ ಹೆಚ್ಚಳಕ್ಕೆ ರೈಲ್ವೆಗೆ ಮನವಿ: ಟ್ರಿಪ್, ಹೆಚ್ಚುವರಿ ಮಾರ್ಗಗಳಲ್ಲಿ ವಿವರ

ಹುಬ್ಬಳ್ಳಿ, ಮೇ 26: ಹುಬ್ಬಳ್ಳಿ ಜಂಕ್ಷನ್ ಆಗಿದ್ದು, ಇಲ್ಲಿಗೆ ನಿತ್ಯ ಆಗಮಿಸುವ ಮತ್ತು ತೆರಳುವ ಪ್ರಯಾಣಿಕರಿಗೆ ಒಂದಷ್ಟು ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಹುಬ್ಬಳ್ಳಿಯಿಂದ ವಿವಿಧೆಡೆ ರೈಲು ಸಂಚಾರ, ಹೆಚ್ಚುವರಿ ಟ್ರಿಪ್ ಹೊಡೆಯುವಂತೆ ನೈಋತ್ಯ ರೈಲ್ವೆ ನಿಯೋಗವೊಂದು ಮನವಿ ಸಲ್ಲಿಸಿದೆ.

ಹುಬ್ಬಳ್ಳಿ-ಶಿರಡಿ ನೇರ ರೈಲು, ಹುಬ್ಬಳ್ಳಿ-ಅಹಮದಾಬಾದ್-ಜೋಧಪುರ, ಹುಬ್ಬಳ್ಳಿ-ಅಹಮದಾಬಾದ್-ಜಲೋರಕ್ಕೆ ರೈಲು ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಲಾಗಿದೆ. ಜೊತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಲಯ 'ರೈಲ್ವೆ ಬಳಕೆದಾರರ ಸಲಹಾ ಸಮಿತಿ' ಸದಸ್ಯ ಮಹೇಂದ್ರ ಸಿಂಘಿ ನೇತೃತ್ವದ ನಿಯೋಗ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ್ ಅವರಿಗೆ ಮನವಿ ಸಲ್ಲಿಸಿದೆ.

Hubballi Rail Users has urged few routes train Trips increased and make some trains permanent SWR

ಹುಬ್ಬಳ್ಳಿಯಿಂದ ಮನಮಾಡ ವಾಯಾ ಬೆಳಗಾವಿ, ಪುಣೆ, ಕೊಪರಗಾಂವ (ಶಿರಡಿ), ಮನಮಾಡ ಗೆ ಹೊಸ ರೈಲು ಸಂಚಾರ ಪ್ರಾರಂಭ, ಹುಬ್ಬಳ್ಳಿ- ಅಹಮದಾಬಾದ್ ಸಾಪ್ತಾಹಿಕ ವಿಶೇಷ ರೈಲನ್ನು (Special Train) ಒಂದು ತಿಂಗಳ ಅವಧಿವರೆಗೆ ಮರು ಪರಿಚಯಿಸಿದ್ದು ಸ್ವಾಗತಾರ್ಹವಾಗಿದೆ.

ಆದರೆ ಈ ರೈಲು ಸಂಚಾರವನ್ನು ಜುಲೈವರೆಗೆ ವಿಸ್ತರಿಸಬೇಕು ಮತ್ತು ಶಾಶ್ವತವಾಗಿ ವಾರದಲ್ಲಿ 4 ದಿನ ಬೆಳಗಾವಿ - ಮಿರಜ್ ಮೂಲಕ ಮತ್ತು ವಾರದಲ್ಲಿ 3 ದಿನ ಗದಗ-ಬಾಗಲಕೋಟೆ-ವಿಜಯಪುರ ಮೂಲಕ ಚಲಿಸುವಂತೆ ಅಧಿಕಾರಿಗಳು ತೀರ್ಮಾನಿಸಿ ಆದೇಶಿಸಬೇಕು ಎಂದು ನಿಯೋಗ ಕೋರಿತು.

ಹುಬ್ಬಳ್ಳಿ-ಜಲೋರ ರೈಲಿನ ಆವರ್ತನೆ ಹೆಚ್ಚಿಸಿ

ಹುಬ್ಬಳ್ಳಿ-ಅಹ್ಮದಾಬಾದ್-ಜಲೋರ ರೈಲಿನ ಆವರ್ತನೆಯನ್ನು ವಾರಕ್ಕೆ 3 ದಿನಗಳವರೆಗೆ ಹೆಚ್ಚಿಸಲು ಮತ್ತು ಅದನ್ನು ಶಾಶ್ವತವಾಗಿ ಈ ಮಾರ್ಗದಲ್ಲಿ ಸಂಚರಿಸುವಂತೆ ಮಾಡಬೇಕು ಎಂದರು.

ಹುಬ್ಬಳ್ಳಿ, ಬೆಂಗಳೂರು ಮತ್ತು ಇನ್ನು ಕೆಲ ರೈಲು ನಿಲ್ದಾಣಗಳಲ್ಲಿ ಎಸ್ಕಲೇಟರಗಳ ಕಾರ್ಯವು ಸ್ಥಗಿತ ಗೊಂಡಿದೆ. ಇದರಿಂದ ಪ್ರಯಾಣಿಕರಿಗೆ ರೈಲು ನಿಲ್ದಾಣದಲ್ಲಿ ಸರಾಗವಾಗಿ, ಶೀಘ್ರವಾಗಿ ಚಲಿಸಲು ಅನಾನೂಕೂಲವಾಗಿದೆ. ಇವುಗಳನ್ನು ಸರಿಪಡಿಸಲು ನಿಯೋಗದಲ್ಲಿದ್ದ ಪ್ರಮುಖರು ಒತ್ತಾಯಿಸಿದರು.

Hubballi Rail Users has urged few routes train Trips increased and make some trains permanent SWR

ಮುಂಚಿತವಾಗಿ ಮಾಹಿತಿ ಪ್ರದರ್ಶಿಸಬೇಕು

ರೈಲು ನಿಲ್ದಾಣಗಳ ಪ್ಲಾಟಪಾರ್ಮ್ ಗಳಲ್ಲಿರುವ ಪ್ರದರ್ಶನ ಫಲಕದಲ್ಲಿ (ಡಿಸ್ಲೈ) ರೈಲು ಅಗಮಿಸುವ ಕೊನೆ ಗಳಿಗೆಯಲ್ಲಿ ರೈಲು ಯಾವ ಸಂಖ್ಯೆಯ ಪ್ಲಾಟಫಾರ್ಮ್‌ ಗೆ ಆಗಮಿಸುತ್ತಿದೆ ಎಂದು ಪ್ರದರ್ಶಿಸುತ್ತಾರೆ. ಇದರಿಂದ ಕೊನೆ ಗಳಿಗೆಯಲ್ಲಿ ಪ್ರಯಾಣಿಕರು ತಮ್ಮ ಮಕ್ಕಳು, ಚೀಲಗಳನ್ನು ಹೊತ್ತುಕೊಂಡು ರೈಲು ತಲುಪಲು ಪರದಾಡಬೇಕಾಗುತ್ತದೆ.

ಆದ್ದರಿಂದ ರೈಲು ಆಗಮಿಸುವ 15 ನಿಮಿಷಗಳ ಮೊದಲು ಪ್ಲಾಟಫಾರ್ಮ್ ಸಂಖ್ಯೆಯನ್ನು ಪ್ರದರ್ಶಿಸಬೇಕು ಹಾಗೂ ಪ್ರಮುಖ ರೈಲುಗಳನ್ನು ಪ್ಲಾಟಪಾಮ್ ನಂ. 1 ರಿಂದ ಹೊರಡಿಸಲು ನಿಯೋಗದಲ್ಲಿರುವ 'ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರು ಮನವಿ ಮಾಡಿದರು.

ಸಮಿತಿ ಮಾಜಿ ಸದಸ್ಯರಾದ ಗೌತಮ ಗುಲೇಚಾ, ಪ್ರಕಾಶ ಕಟಾರಿಯಾ, ಶ್ರೀ ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘದ ಕೋಶಾಧಜ್‌ಷ ಕಾಂತಿಲಾಲ ಬೊಹರಾ, ಪ್ರವಾಸಿ ಯಾತ್ರಿ ಸಂಘದ ಕಾರ್ಯದರ್ಶಿ ಹಾಗೂ ಇತರರು ನಿಯೋಗದಲ್ಲಿ ಇದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+