ಕಿಮ್ಸ್‌ನಿಂದ ಸಿಹಿ ಸುದ್ದಿ: ನವಜಾತ ಶಿಶು ಮರಣ ಪ್ರಮಾಣ ಇಳಿಕೆ
ಹುಬ್ಬಳ್ಳಿ, ಮಾರ್ಚ್ 11: ವಾಣಿಜ್ಯ ನಗರಿ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (KIMS) ಯಲ್ಲಿ ಒದಗಿಸುವ ಸೌಲಭ್ಯದಿಂದಾಗಿ ನವಜಾತ ಶಿಶುಗಳ ಮರಣ ಪ್ರಮಾಣ ಇಳಿಕೆಯಾಗಿದೆ ಎಂಬ ಸಿಹಿ ಸುದ್ದಿಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಬಹಿರಂಗಪಡಿಸಿದ್ದಾರೆ
ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ 10.70 ರು.ವೆಚ್ಚದ ಟೆಸ್ಲಾ 1.5 MRI ಮಷಿನ್ ಅಳವಡಿಕೆ ಕಾರ್ಯಕ್ರಮನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಕಿಮ್ಸ್‌ನಲ್ಲಿನ 'ಸ್ವರ್ಣ ಶಿಶು ಧಾಮ' ನಿರ್ಮಾಣದಿಂದ ನವಜಾತ ಶಿಶುಗಳ ಮರಣ ಪ್ರಮಾಣ ಇಳಿಕೆ ಕಂಡಿದೆ ಎಂದರು.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕೇಂದ್ರ ಸರ್ಕಾರದಿಂದ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕೋಲ್ ಇಂಡಿಯಾ ಮತ್ತು ಸ್ಥಳೀಯ ಸ್ವರ್ಣ ಕಂಪನಿಯಿಂದ ಶಿಶು ಧಾಮಕ್ಕೆ ಪ್ರಮುಖ ಪರಿಕರಗಳನ್ನು ಒದಗಿಸಲಾಗಿದೆ.
ಕಿಮ್ಸ್‌ಗೆ ಉತ್ತಮ ಆರೋಗ್ಯ ಸೌಲಭ್ಯ
ಈ ಕೋಲ್ ಇಂಡಿಯಾ 5.5 ಕೋಟಿ ವೆಚ್ಚದಲ್ಲಿ ನವಜಾತ ಶಿಶುಗಳ ರಕ್ಷಣೆಗೆ ಬೇಕಾದ ವೈದ್ಯಕೀಯ ಯಂತ್ರೋಪಕರಣಗಳನ್ನು ಒಗಿಸಿದೆ. ಇನ್ನೂ ಸ್ವರ್ಣ ಕಂಪನಿ 1.5 ಕೋಟಿ ವೆಚ್ಚದಲ್ಲಿ ಶಿಶು ಧಾಮದ ಕಟ್ಟಡ ನಿರ್ಮಾಣ ಮಾಡಿಕೊಟ್ಟಿದೆ. ಈ ಕಾರಣದಿಂದ ಆಸ್ಪತ್ರೆ ಈ ಸೌಲಭ್ಯಕ್ಕೆ 'ಸ್ವರ್ಣ ಶಿಶು ಧಾಮ' ಎಂದು ಹೆಸರಿಡಲಾಗಿದೆ ಎಂದು ಅವರು ವಿವರಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ಸರ್ವರಿಗೂ ಉತ್ತಮ ಆರೋಗ್ಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ದೇಶದ ಹತ್ತು ಹಲವು ಕಡೆ ಆಸ್ಪತ್ರೆಗಳಿಗೆ ಆಧುನಿಕ ಚಿಕಿತ್ಸಾ ವೈದ್ಯಕೀಯ ಉಪಕರಣಗಳನ್ನು ಕೋಲ್ ಇಂಡಿಯಾದಿಂದ ನೀಡುವ ಹೊಣೆ ಹೊತ್ತಿದೆ.

ಕಿಮ್ಸ್ ಈ ಭಾಗದ ಜನರಿಗೆ ಆಸರೆ
ಕಿಮ್ಸ್ ನಲ್ಲಿ ಎಂಆರ್‌ಐ ಮಷಿನ್ ಅಳವಡಿಸಿದ್ದರಿಂದ ಈ ಹುಬ್ಬಳ್ಳಿ ಧಾರವಾಡದ ಅವಳಿ ನಗರ ಸೇರಿದಂತೆ ಈ ಭಾಗದ ಜನತೆ ಹೆಚ್ಚಿನ ತಪಾಸಣೆಗಾಗಿ ಅನುಕೂಲವಾಗಲಿದೆ. ಚಿಕಿತ್ಸೆಗೆಂದು ನಾಗರಿಕರು, ಮಹಿಳೆಯರು ದೂರದ ಊರಿಗಳಿಗ ಹೋಗುವುದು ತಪ್ಪಲಿದೆ. ನವಜಾತ ಶಿಶುಗಳನ್ನು ಸಾವಿನ ದವಡೆಯಿಂದ ರಕ್ಷಿಸಲಾಗುತ್ತದೆ. ಸೂಕ್ತ ಚಿಕಿತ್ಸೆ ಒದಗಿಸಿದ್ದರಿಂದಲೇ ನವಜಾತು ಶಿಶುಗಳ ಸಂಖ್ಯೆ ಕಡಿಮೆ ಆಗಿದೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ, ಎನ್.ಎಚ್.ಕೋನರಡ್ಡಿ, ಸ್ವರ್ಣ ಗ್ರೂಪ್ ನ ಮುಖ್ಯಸ್ಥ ಪ್ರಸಾದ್, ಮೇಯರ್ ವೀಣಾ ಬರದ್ವಾಡ, ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಕಿಮ್ಸ್ ಸಂಸ್ಥೆಯ ಪ್ರಾಂಶುಪಾಲ ಡಾ. ಈಶ್ವರ ಹೊಸಮನಿ, ಪಾಲಿಕೆ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.












Click it and Unblock the Notifications