ಗೌರಿ ಲಂಕೇಶ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್, 26: ಹಿರಿಯ ಪತ್ರಕರ್ತ ದಿ.ಲಂಕೇಶ್ ಅವರ ಪುತ್ರಿ ಗೌರಿ ಲಂಕೇಶ್ ಅವರ ವಿರುದ್ಧ ವಾರಂಟ್ ಜಾರಿಗೊಳಿಸಲಾಗಿದೆ.

ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಆರೋಪಿಯಾಗಿರುವ ಗೌರಿ ಲಂಕೇಶ್ ಅವರು ಶನಿವಾರ ಅಂತಿಮ ಕೋರ್ಟ್ ತೀರ್ಪಿಗೆ ಗೈರು ಹಾಜರಾಗಿದ್ದರಿಂದ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.

ಶನಿವಾರ ಹುಬ್ಬಳ್ಳಿ ಜಿಲ್ಲಾ 2ನೇ ಜೆಎಂಎಫಸಿ ನ್ಯಾಯಾಲಯದಲ್ಲಿ ಗೌರಿ ಲಂಕೇಶ್ ಅವರ ಪ್ರಕರಣದ ಅಂತಿಮ ತೀರ್ಪು ಹಿನ್ನಲೆಯಲ್ಲಿ. ಕೋರ್ಟ್ ಗೆ ಹಾಜರಾಗಬೇಕಿತ್ತು.

ಲಂಕೇಶ್ ಪರ ವಕೀಲ ಆರ್ ಎಂ ಜಾವೀದ್ ಅನಾರೋಗ್ಯ ಕಾರಣ ನೀಡಿ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಲು ಮುಂದಾದರು. ಆದರೆ ಅಂತಿಮ ತೀರ್ಪು ಇರುವುದರಿಂದ ಯಾವುದೇ ಅರ್ಜಿ ಪರಿಗಣಿಸಲಿಲ್ಲ. ಹೀಗಾಗಿ ಅವರಿಗೆಹುಬ್ಬಳ್ಳಿ 2ನೇ ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ ಅಮರವಿ ಎಲ್ಅವರು ಜಾಮೀನು ರಹಿತ ವಾರಂಟ್ ಜಾರಿ ಮಾಡಿ ಆದೇಶ ಕಾಯ್ದಿರಿಸಿದ್ದಾರೆ.

Hubballi Court issues Warrant against Gowri Lankesh

ಸಂಸದ ಪ್ರಹ್ಲಾದ್ ಜೋಶಿ‌ ಮತ್ತು ಮೂವರ ಮುಖಂಡರ ಮೇಲೆ 2008 ರಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಗೌರಿ ಲಂಕೇಶ್ ಅವರು ಅವಹೇಳನಕಾರಿಯಾಗಿ ಲೇಖನ ಬರೆದಿದ್ದಾರೆ ಎಂದು ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗಿತ್ತು.

ಹೀಗಾಗಿ ಕಳೆದ ಹಲವು ವರ್ಷಗಳಿಂದ ವಿಚಾರಣೆ ನಡೆದಿದ್ದು, ಅಂತಿಮ‌ ಹಂತಕ್ಕೆ ತಲುಪಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಬಿಜೆಪಿ ಧುರೀಣ ಉಮೇಶ ದುಶಿ ಪರವಾಗಿ ವಕೀಲ ಸಂಜು ಬಡಸ್ಕರ ಮತ್ತು ಸಂಸದ ಪ್ರಹ್ಲಾದ ಜೋಶಿ ಪರವಾಗಿ ವಕೀಲ ಲಕ್ಷ್ಮೇಶ್ವರ ವಾದ ಮಂಡಿಸಿದ್ದರು.

ಲಂಕೇಶ ಪತ್ರಿಕೆಯ ಹುಬ್ಬಳ್ಳಿ ವರದಿಗಾರ ಪ್ರಕರಣದ ಆರೋಪಿ ಜಗಾಪುರ ಕೋರ್ಟ್ ಗೆ ಹಾಜರಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubballi 2nd JMFC Court on Saturday, November 26, 2016 issued a non-bailable warrant against Gowri Lankesh in defamation case.
Please Wait while comments are loading...