ಭರವಸೆ ಹುಸಿ: ಹುಬ್ಬಳ್ಳಿಯ ಜೈನ್ ಮುನಿಗಳು ಸರ್ಕಾರಕ್ಕೆ ಕೊಟ್ಟ ಎಚ್ಚರಿಕೆ, ಇಟ್ಟ ಬೇಡಿಕೆ ಏನು?
ಹುಬ್ಬಳ್ಳಿ, ಜನವರಿ 16: ಹುಬ್ಬಳ್ಳಿಯ ಜೈನಮುನಿಗಳು ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಕೋಪಗೊಂಡಿದ್ದಾರೆ. ಬೇಡಿಕೆ ಈಡೇರಿಸಲು ಮುಂದಿನ ಫೆಬ್ರವರಿ 7 ರವರೆಗೆ ಗಡುವ ನೀಡಿದ್ದಲ್ಲದೇ ಎಚ್ಚರಿಕೆ ಸಹ ನೀಡಿದ್ದಾರೆ.
ಹುಬ್ಬಳ್ಳಿ ಸಮೀಪದ ವರೂರಿನ ನವಗ್ರಹದ ತೀರ್ಥ ಕ್ಷೇತ್ರದಲ್ಲಿ ಮಂಗಳವಾರ ಈ ಕುರಿತು ಗುಣಧರ ನಂದಿ ಜೈನ್ ಮುನಿಗಳು ಮಾತನಾಡಿ, ಜೈನ ಮುನಿಗಳು ಪ್ರವಾಸ ವೇಳೆ ಶಾಲೆಗಳಲ್ಲಿ ವ್ಯವಸ್ಥೆ ಹಾಗೂ ಆಯೋಗ ಸ್ಥಾಪನೆ ಬೇಡಿಕೆಗಳನ್ನು ಸರ್ಕಾರ ಇನ್ನೂ ಈಡೇರಿಸಿಲ್ಲ.

ಈ ಬೇಡಿಕೆ ಈಡೇರಿಕೆಗೆ ಫೆಬ್ರವರಿ 7ರೊಳಗೆ ಈಡೇರಿಸಬೇಕೆಂದು ಸರ್ಕಾರಕ್ಕೆ ಅವರು ಗಡುವು ನೀಡಿದರು. ಇಲ್ಲವಾದರೆ ಮಾರನೇ ದಿನ ಫೆಬ್ರವರಿ 8ರಿಂದ ಚಿಕ್ಕೋಡಿ ಶಮನೇವಾಡಿ ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.
ಈ ಬೇಡಿಕೆ ಈಡೇರಿಸಿಲ್ಲ: ಜೈನಮುನಿಗಳು
ಹಿಂದೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನ್ ಮುನಿ ಕಾಮಕುಮಾರ ನಂದಿ ಸ್ವಾಮೀಜಿ ಅವರು ಹತ್ಯೆ ಬಳಿಕ ಸರ್ಕಾರಕ್ಕೆ ನಾಲ್ಕು ಬೇಡಿಕೆ ಈಡೇರಿಸಲು ಆಗ್ರಹಿಸಲಾಗಿತ್ತು. ಅದರಲ್ಲಿ ಜೈನ್ ಮುನಿಗಳ ಹತ್ಯೆ ತನಿಖೆ ನಡೆದು ಆರೋಪಿಗೆ ಶಿಕ್ಷೆ ಹಾಗೂ ಜೈನ್ ಮುನಿಗಳಿಗೆ ರಕ್ಷಣೆ ನೀಡಲಾಗಿದೆ. ಆದರೆ ಪ್ರವಾಸದಲ್ಲಿರುವ ಶಾಲೆಗಳಲ್ಲಿ ವ್ಯವಸ್ಥೆ, ಜೈನ್ ಆಯೋಗ ರಚಿಸುವ ಬೇಡಿಕೆ ಈಡೇರಿಸಿಲ್ಲ ಎಂದರು.

ಬೃಹತ್ ಪ್ರತಿಭಟನೆಯ ಎಚ್ಚರಿಕೆ
ಈ ಸಂಬಂಧ ಒಂದು ಲಕ್ಷದ ಜನರು ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಶ್ರೀರಾಮ ಮಂದಿರ ಉದ್ಘಾಟನೆ ಸಂತೋಷದ ಸಂಗತಿ. ಇದರಿಂದ ದೇಶದಲ್ಲಿ ರಾಮ ರಾಜ ನಿರ್ಮಾಣವಾಗಲಿ. ಕೇಂದ್ರ ಸರ್ಕಾರದ ಸಮಾರಂಭಕ್ಕೆ ಎಲ್ಲ ಮಠಾಧೀಶರ ಆಹ್ವಾನಿಸಲು ತಾರತಮ್ಯ ಮಾಡಿದಂತೆ ಅನಿಸುತ್ತಿಲ್ಲ. ಜೈನ್ ಮುನಿಗಳಿಗೂ ಸಹ ಆಹ್ವಾನಿಸಿದ್ದು, ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಜೈನ ಮುನಿಗಳು ಧರ್ಮ ಪ್ರಚಾರಕ್ಕಾಗಿ ವಿಹಾರ ನಡೆಸುವ ಸಂದರ್ಭದಲ್ಲಿ ಪೊಲೀಸ್ ಭದ್ರತೆ ಒದಗಿಸಲು ಸರ್ಕಾರ ಸಿದ್ಧವಿದೆ. ಪೊಲೀಸ್ ಇಲಾಖೆಯಿಂದ ಎಲ್ಲಾ ಠಾಣೆಗಳಿಗೆ ಶೀಘ್ರ ಸುತ್ತೋಲೆ ಹೊರಡಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ಪ್ರತಿಕ್ರಿಯಿಸಿದ್ದಾರೆ.
ಮುನಿಗಳು ವಿಹಾರ ಸಂದರ್ಭದಲ್ಲಿ ರಾತ್ರಿ ವೇಳೆ ವಿಶ್ರಾಂತಿ ಪಡೆಯಲು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಅವಕಾಶ ನೀಡಬೇಕು ಎಂದು ವಿನಂತಿಸಿದ್ದರು. ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಜೈನ ನಿಗಮ ಮಂಡಳಿ ರಚನೆ ಸ್ಥಾಪಿಸಬೇಕೆನ್ನುವ ಬೇಡಿಕೆ ಸಹ ಮುಂದಿಟ್ಟಿದ್ದು, ಆದರೆ ಇದುವರೆಗೆ ಯಾವುದೇ ಸರಿಯಾಗಿ ಭೇಡಿಕೆ ಈಡೇರಿಸಲು ಸರ್ಕಾರದಿಂದ ಆಗಲ್ಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications