• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ಟುಡೆಂಟ್ಸ್ ಒಲಿಂಪಿಕ್ಸ್: ಹುಬ್ಬಳ್ಳಿಯ ಸಹನಾ ಕುಲಕರ್ಣಿಗೆ ಚಿನ್ನ

By Basavaraj
|

ಹುಬ್ಬಳ್ಳಿ, ಜುಲೈ 03 : ಮಲೇಷ್ಯಾದಲ್ಲಿ ಜೂನ್ 29ರಿಂದ ಜುಲೈ 1ರ ವರಗೆ ನಡೆದ 3ನೇ ಅಂತಾರಾಷ್ಟ್ರೀಯ ಸ್ಟುಡೆಂಟ್ಸ್ ಒಲಿಂಪಿಕ್ಸ್ ಗೇಮ್ಸ್ ನ ಟೇಬಲ್ ಟೆನಿಸ್ ನಲ್ಲಿ ಹುಬ್ಬಳ್ಳಿಯ ಸಹನಾ ಕುಲಕರ್ಣಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

ಮಲೇಷ್ಯಾ ಸ್ಟುಡೆಂಟ್ಸ್ ಒಲಿಂಪಿಕ್ಸ್ ಗೆ ಹುಬ್ಬಳ್ಳಿಯ ಸಹನಾ ಕುಲಕರ್ಣಿ

ಫೈನಲ್ ನಲ್ಲಿ ಮಲೇಷ್ಯಾ ಆಟಗಾರ್ತಿಯನ್ನು 11-8 ಪಾಯಿಂಟ್ಸ್ ಗಳ ಅಂತರದಿಂದ ಮಣಿಸಿ ಚಿನ್ನದ ಪದಕವನ್ನು ಮುಗಿಡಿಗೇರಿಸಿಕೊಂಡಿದ್ದಾರೆ. ಫೈನಲ್ ಪಂದ್ಯದ 5 ಸೆಟ್‌ಗಳಲ್ಲಿ 3-2 ಅಂತರದಿಂದ ಜಯ ಸಾಧಿಸಿರುವ ಸಹನಾ ಮೊದಲ ಭಾರತದ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ.

ಹುಬ್ಬಳ್ಳಿಯ ಕೆಎಲ್ ಇ ಸಂಸ್ಥೆಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಇ ಅಂಡ್ ಸಿ ವಿಭಾಗದ 7ನೇ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿರುವ ಸಹನಾ, ಟೂರ್ನಿಯುದ್ದಕ್ಕೂ ಉತ್ತಮ ಸಾಧನೆ ಮಾಡಿದ್ದ ಸಹನಾ ಅಂತಿಮ ಸುತ್ತಿನಲ್ಲಿ ಕಠಿಣ ಸ್ಪರ್ಧೆ ಎದುರಿಸಿದರೂ ಎದುರಾಳಿಯನ್ನು ಸಮರ್ಥವಾಗಿ ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅತ್ತ ಸಹನಾ ಪ್ರಶಸ್ತಿ ಮುಡಿಗೇರಿಸಿಕೊಳ್ಳುತ್ತಿದ್ದಂತೆ, ಇತ್ತ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಸಹನಾ ತಂದೆ ಶ್ರೀನಿವಾಸ್ ಕುಲಕರ್ಣಿ ಹಾಗೂ ತಾಯಿ ಇಂಧು ಕುಲಕರ್ಣಿ ಮಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಹನಾ ವ್ಯಾಸಂಗ ಮಾಡುತ್ತಿರುವ ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದು, ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೋ ಅಶೋಕ ಶೆಟ್ಟರ್ ಹಾಗೂ ಕೆಎಲ್ ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಅಭಿನಂದಿಸಿದ್ದಾರೆ.

ಧಾರವಾಡ ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೆಶನ್ ವಿಜಯ್ ಪೈ, ಹುಬ್ಬಳ್ಳಿ ಟೇಬಲ್ ಟೆನಿಸ್ ಅಸೋಸಿಯೇಷನ್ ಕಾರ್ಯದರ್ಶಿ ಎಸ್.ಎಸ್.ಅರಳಿಕಟ್ಟಿ. ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಂ.ಕುರಗೋಡಿ ಅವರು ಸಹನಾಳಿಗೆ ತರಬೇತಿ ನೀಡಿದ್ದು, ಹುಬ್ಬಳ್ಳಿಯ ಕೀರ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಬ್ಬುವಂತೆ ಮಾಡಿದ್ದಾರೆ.

ಕಳೆದ 2016 ಇದೇ ಒಲಿಂಪಿಕ್ಸ್ ನಲ್ಲಿ ಬಂಗಾರ ಪದಕ ಗೆದ್ದಿರುವುದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi girl Sahana Kulkarni won gold medal in 3rd International Students Olympics Games held at Malaysia on Sunday. Sahana is pursuing 7th semester engineering in BVB Engineering Collage Hubballi, She was only women representative from our state in this game. Its proud to Hubballi as well as North Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more