ಹುಬ್ಬಳ್ಳಿ ಬಿಎಸ್ಸೆನ್ನೆಲ್ ಗ್ರಾಹಕರಿಗೆ ಶುಭ ಸುದ್ದಿ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್, 24: ಹುಬ್ಬಳ್ಳಿಯ ಹಲವು ಕಡೆ ಬಿಎಸ್ ಎನ್ ಎಲ್ ನೆಟ್ ವರ್ಕ್ ಸಮಸ್ಯೆ ಬಗ್ಗೆ ದೂರುಗಳಿದ್ದು ಹೆಚ್ಚಿನ ಸಾಮರ್ಥ್ಯದ ಟವರ್ ಗಳನ್ನು ಅಳವಡಿಸಲಾಗುವುದು ಎಂದು ಭಾರತ ದೂರ ಸಂಚಾರ ನಿಗಮದ ಜನರಲ್ ಮ್ಯಾನೇಜರ್ ವಿವೇಕ ಜೈಸ್ವಾಲ ತಿಳಿಸಿದ್ದಾರೆ.

ಅವರು ಬುಧವಾರ ಬಿಎಸ್ಸೆನ್ನೆಲ್ ಸಭಾಂಗಣದಲ್ಲಿ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸಂಸದರ ಅನುದಾನದಲ್ಲಿ ಆರಂಭಿಸಲಾದ ಫ್ರೀ ವೈಪೈ ಸೇವೆಯನ್ನು ಸದ್ಯ ಹೊಸ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ 1300 ಜನರು, ಶಿರೂರ ಪಾರ್ಕ್ ನಲ್ಲಿ 300 ಜನರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.[ಬಿಎಸ್ ಎನ್ ಎಲ್ ಲ್ಯಾಂಡ್ ಲೈನ್ ನಿಂದ ಭಾನುವಾರ ಫ್ರೀ ಕಾಲ್ಸ್]

Hubballi gets good BSNL service soon

ನಗರದ ಹಲವಾರು ಭಾಗಗಳಲ್ಲಿ ಫೈಬರ್ ಕೇಬಲ್ ಗಳನ್ನು ಅಳವಡಿಸಲಾಗುತ್ತಿದ್ದು, ಬಿಎಸ್ಸೆನ್ನೆಲ್ ಕೆಲವೊಂದು ಕಡೆಗಳಲ್ಲಿ ಕೇಬಲ್ ಹಾಕಿಲ್ಲ. ಹೀಗಾಗಿ ಹೊಸದಾಗಿ ಕೇಬಲ್ ಹಾಕಲು ಚಿಂತನೆ ನಡೆಸಲಾಗಿದೆ ಎಂದರು.
ಬಿಎಸ್ ಎನ್ ಎಲ್ ಲ್ಯಾಂಡ್ ಫೋನನಿಂದ ಭಾರತದ ಯಾವುದೇ ಮೊಬೈಲ್ ಮತ್ತು ಲ್ಯಾಂಡಲೈನ್ ಪ್ರತಿ ರವಿವಾರ ಉಚಿತ ಕರೆ ಮಾಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಹಿಂದೆ ಇಂತಹ ಯಾವುದೇ ಕೊಡುಗೆಗಳನ್ನು ನೀಡಿರಲಿಲ್ಲ ಈಗ ಪ್ರತಿನಿತ್ಯ ಕೇವಲ ರಾತ್ರಿ 9 ರಿಂದ ಬೆಳಗಿನ 7 ರವರೆಗೆ ಉಚಿತ ಕರೆ ಸೌಲಭ್ಯವಿದೆ ಎಂದರು.[ಬಿಎಸ್ಎನ್ಎಲ್ ನಿಂದ 40 ಸಾವಿರ ವೈಫೈ ಹಾಟ್ ಸ್ಪಾಟ್]

ಇನ್ಮುಂದೆ ಕೇವಲ 49 ರೂ. ತಿಂಗಳ ಬಾಡಿಗೆಯಲ್ಲಿ ಲ್ಯಾಂಡ್ ಲೈನ್ ಫೋನ್ ನೀಡಲಾಗುತ್ತದೆ. ಇದಕ್ಕೆ ಯಾವುದೇ ಹೆಚ್ಚುವರಿ ಚಾರ್ಜ್ ಇಲ್ಲ. 6 ತಿಂಗಳ ನಂತರ ತಮಗೆ ಬೇಕಾದ ಪ್ಲಾನ್ ಗೆ ಗ್ರಾಹಕರು ಬದಲಾಯಿಸಿಕೊಳ್ಳಬಹುದು. ಇದರೊಂದಿಗೆ ಒಂದು ಸಿಮ್ ಉಚಿತವಾಗಿ ನೀಡಲಾಗುತ್ತದೆ ಎಂದರು.

ಸ್ವಾತಂತ್ರ್ಯ ದಿನ ಮತ್ತು ರಕ್ಷಾ ಬಂಧನ ಹಬ್ಬದಂಗವಾಗಿ 70 ರೂ. ಗೆ ಪುಲ್ ಟಾಕಟೈಮ್ ನೀಡಲಾಗುತ್ತಿದೆ ಎಂದು ಹಲವು ಯೋಜನೆಗಳ ಮಾಹಿತಿ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubballi: The customers who are using BSNL Land line gets good news from the Bharat Sanchar Nigam Limited. Customers can do free calls to any network land line and mobile phones on every Sundays informed by BSNL Gebnaral manager Vivek Jaiswal on August 24.
Please Wait while comments are loading...