ಆಮೆಗತಿಯಲ್ಲಿ ಹುಧಾ ಮಹಾನಗರ ಪಾಲಿಕೆ ನವೀಕರಣ ಕಾಮಗಾರಿ : ಸಾಮಾನ್ಯ ಸಭೆಗೆ ಕೂಡಿ ಬರದ ಕಾಲ
ಹುಬ್ಬಳ್ಳಿ, ಆಗಸ್ಟ್ 10: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಭಾಂಗಣ ಕಟ್ಟಡ ನವೀಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಈಗಲೂ ಕಾಮಗಾರಿ ಇನ್ನು ಮುಗಿದಿಲ್ಲ. ಕಳೆದ ಎರಡು ವರ್ಷಗಳಿಂದ ಸಾಮಾನ್ಯ ಸಭೆ ಅಂದರೆ ಪಾಲಿಕೆಗೆ ಸಂಬಂಧಿಸಿದ ಯಾವುದೇ ಸಭೆಗಳನ್ನು ನಡೆಸುತ್ತಿಲ್ಲ.
ಬಹಳ ಚರ್ಚೆ ನಂತರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಭಾಂಗಣ ನವೀಕರಣ ಕಾಮಗಾರಿಗೆ ಅನುಮೋದನೆ ಕೊಡಲಾಗಿತ್ತು. ಈಗ ಆಗಸ್ಟ್ 15 ರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಾಗಿದೆ. ಆದರೆ ಆ ಅವಧಿಯಲ್ಲಿ ಮುಗಿಯುವ ಯಾವುದೇ ಲಕ್ಷಣ ಇಲ್ಲ.

ಬೆಂಗಳೂರು ಮೂಲದ ಬ್ಯುರೋ ವೆರಿಟಾಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸಭಾಭವನ ಕಟ್ಟಡ ಸುರಕ್ಷಿತ ಎಂದು ವರದಿ ನೀಡಿತ್ತು. ಇದರ ಆಧಾರದ ಮೇಲೆ 50 ಲಕ್ಷ ರೂ ವೆಚ್ಚದಲ್ಲಿ ನವೀಕರಣ ಕಾಮಗಾರಿ ಆರಂಭಿಸಲಾಗಿದೆ. 1977 ರಲ್ಲಿ ನಿರ್ಮಾಣಗೊಂಡ ಪಾಲಿಕೆಯ ಸಭಾಭವನ ಕಟ್ಟಡವು ನೆಲಮಹಡಿ ಸೇರಿ ಮೂರು ಅಂತಸ್ತು ಹೊಂದಿದೆ.
ಎರಡನೇ ಮಹಡಿಯಲ್ಲಿ 130 ಆಸನ ಸಾಮರ್ಥ್ಯದ ಸಭಾಭವನವಿದೆ. 2016ರಲ್ಲಿ 52ಲಕ್ಷ ರೂ ವೆಚ್ಚದಲ್ಲಿ ಇದೆ ಸಭಾಭವನವನ್ನು ನವೀಕರಿಸಲಾಗಿತ್ತು. ಹಳೆಯದಾದ ಕುರ್ಚಿ ಟೇಬಲ್ ಎಲೆಕ್ಟ್ರಿಕಲ್ ವೈರಿಂಗ್ ಬದಲಾಯಿಸಿ ಹೊಸದನ್ನು ಅಳವಡಿಸಲಾಗಿತ್ತು. ಹತ್ತು ಎಸಿ ಹಾಕಿ ಸಂಪೂರ್ಣ ಹವಾ ನಿಯಂತ್ರಿತ ವ್ಯವಸ್ಥೆ ರೂಪಿಸಿ ಸಭಾಭವನಕ್ಕೆ ಹೊಸ ರೂಪ ನೀಡಲಾಗಿತ್ತು.
ಸದ್ಯ ಕುರ್ಚಿ ಟೇಬಲ್ ಡೋರ್ ಕಂಡಿಷನರ್ ಮೈಕ್ ಸಿಸ್ಟಮ್ ಯಾವುದೇ ಪಿಠೋಪಕರಣ ಬದಲಾಯಿಸುತ್ತಿಲ್ಲ. ಫ್ಲೋರಿಂಗ್ ತೆಗೆದು ನೆಲಕ್ಕೆ ವೆಟ್ರಿಫೈಡ್ ಟೈಲ್ಸ್ ಹಾಕಲಾಗಿದೆ. ಮಳೆಗಾಲದಲ್ಲಿ ಗೋಡೆಗಳು ತೇವಾಂಶ ಹೀರಿಕೊಳ್ಳದಂತೆ ವಾಟರ್ ಪ್ರೂಫೀಂಗ್ ಮಾಡಿ ವಾಲ್ ಪ್ಲಾನಿಂಗ್ ಮಾಡಲಾಗಿದೆ.
ಸಭಾಭವನದ ಹೊರಗೋಡೆಗೆ ಮಳೆ ನೀರು ಬಡಿಯದಂತೆ ಹೊರಗಿನ ಸಿಮೆಂಟ್ ಸಜ್ಜ ವಿಸ್ತರಣೆ ಮಾಡಲಾಗಿದೆ. ಸೀಲಿಂಗ್ ಮತ್ತು ಎಲೆಕ್ಟ್ರಿಕಲ್ ವೈರಿಂಗ್ ಹೊಸದಾಗಿ ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ. ಆಸನಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.
ಸಭಾಭವನದ ಹಿಂದಿನ ಕೊಠಡಿಗೂ ಹೊಸ ರೂಪ ನೀಡಲಾಗುತ್ತಿದ್ದು, ಇನ್ನು ಕಾಮಗಾರಿ ಮುಗಿದಿಲ್ಲ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರು ಸಂಖ್ಯೆಯನ್ನು 67 ರಿಂದ 82ಕ್ಕೆ ಏರಿಕೆ ಮಾಡಿ 2021ರ ಸೆಪ್ಟೆಂಬರ್‌ನಲ್ಲಿ ಚುನಾವಣೆ ನಡೆಸಲಾಗಿತ್ತು, ಆದರೆ ನೂತನ ಮೇಯರ್ ಉಪ ಮೇಯರ್ ಆಯ್ಕೆ ಚುನಾವಣೆ 2022ರ ಮೇ 28ರಂದು ಜರಗಿತ್ತು. ನಡುವಿನ 7 - 8 ತಿಂಗಳಗಳು ಅವಧಿಯಲ್ಲಿ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಸಭಾಭವನದ ಕಟ್ಟಡವನ್ನು ವಿಸ್ತರಿಸುವ ಪ್ರಸ್ತಾವನೆ ಆಗಿದ್ದವು. ಆದರೆ ಇದು ಅಪಾಯಕಾರಿ ಎಂದು ಹುಬ್ಬಳ್ಳಿಯ ಬಿವಿಪಿ ಇಂಜಿನಿಯರಿಂಗ್ ಕಾಲೇಜ್ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪರಿಣಿತರು ವರದಿ ನೀಡಿದ್ದರು.
2022ರ ಸೆಪ್ಟೆಂಬರ್‌ನಿಂದ 2023ರ ಜೂನ್ ತಿಂಗಳವರೆಗೆ ಪಾಲಿಕೆಯ ಸಾಮಾನ್ಯ ಸಭೆಗಳು ಧಾರವಾಡ ಪಾಲಿಕೆಯ ಅಮೃತ್ ಮಹೋತ್ಸವದ ಸಭಾಭವನದಲ್ಲಿ ನಡೆದಿದೆ. ಜುಲೈ ತಿಂಗಳ ಸಾಮಾನ್ಯ ಸಭೆಯು ಧಾರವಾಡನಲ್ಲಿಯೇ ನಡೆದಿದೆ. ಆದರೆ ನೂತನ ಮೇಯರ್ ವೀಣಾ ಭರದ್ವಾಡ ಸಹ ಇನ್ನು ಕಾಮಗಾರಿ ನಡೆಯುತ್ತಿದ್ದು, ಆದಷ್ಟು ಬೇಗ ಪೂರ್ಣಗೊಳುತ್ತದೆ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿಯೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆಯಬೇಕು. ನಾವು ಸಹ ಈ ಕುರಿತು ಹಲವಾರು ಸಲ ಒತ್ತಾಯ ಮಾಡಿದ್ದೇವು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಒತ್ತಾಯ ಮಾಡಿದರು.
-
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ












Click it and Unblock the Notifications