ಜನವರಿ ಅಂತ್ಯದಲ್ಲಿ ಬಿಆರ್ ಟಿಎಸ್ ಕಾಮಗಾರಿ ಅಂತ್ಯ: ದರ್ಪಣ್ ಜೈನ್

ಧಾರವಾಡ, ಡಿಸೆಂಬರ್ 18 : ಹುಬ್ಬಳ್ಳಿ-ಧಾರವಾಡ ಮಧ್ಯದ ಬಿಆರ್ ಟಿಎಸ್ (ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಂ) ಕಾಮಗಾರಿ ಜನವರಿ 31 ರೊಳಗೆ ಪೂರ್ಣಗೊಳ್ಳುತ್ತದೆ, ಫೆಬ್ರವರಿಯಲ್ಲಿ ಬಸ್ ಸಂಚಾರ ಆರಂಭಿಸುವ ನಿರೀಕ್ಷೆ ಇದೆ ಎಂದು ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತ ದರ್ಪಣ್ ಜೈನ್ ಹೇಳಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಧ್ಯದ ಬಿಆರ್ ಟಿಎಸ್ ಕಾಮಗಾರಿ ವೀಕ್ಷಿಸಿ ಪ್ರಾಯೋಗಿಕವಾಗಿ ಚಿಗರಿ ಬಸ್‌ನಲ್ಲಿ ಪ್ರಯಾಣಿಸಿದ ಬಳಿಕ ಮಾತನಾಡಿದ ದರ್ಪಣ ಜೈನ್ ಬಿಆರ್ ಟಿಎಸ್ ಕಾಮಗಾರಿಗಳಿಗೆಲ್ಲವೂ ಜನೆವರಿ 31ರೊಳಗೆ ಪೂರ್ಣಗೊಳ್ಳುತ್ತದೆ. ಫೆಬ್ರುವರಿಯಲ್ಲಿ ಬಸ್ ಸಂಚಾರ ಆರಂಭಿಸುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದರು.

Hubballi-Dharwad BRTS will resume from February

ಒಟ್ಟು 900 ಕೋಟಿ ರೂಪಾಯಿ ವಿನಯೋಗ ಮಾಡಿದ್ದೇವೆ. ಅದರಲ್ಲಿ 400 ಕೋಟಿ ಭೂಸ್ವಾಧೀನಕ್ಕೆ ಹಾಗೂ 100 ಕೋಟಿಯಲ್ಲಿ 130 ಬಸ್‌ಗಳನ್ನು ಖರೀದಿ ಮಾಡಿದ್ದೇವೆ. ದೇಶದ ಇತರಡೆ ಇರುವ ಬಿಆರ್ಟಿಎಸ್ ಯೋಜನೆಗಳಿಗಿಂತ ಈ ಯೋಜನೆ ಹೆಚ್ಚಿನ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಮೆಟ್ರೋ ಮಾದರಿಯ ಸೇವೆಯನ್ನು ನಾವು ರಸ್ತೆ ಮಾರ್ಗದಡಿ ನೀಡಲಿದ್ದೇವೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+