Breaking: ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಇಬ್ಬರು ಮಾಲಾಧಾರಿಗಳು ಸಾವು
ಹುಬ್ಬಳ್ಳಿ, ಡಿಸೆಂಬರ್ 26: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಬ್ಲಾಸ್ಟ್ ಪ್ರಕರಣ, ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮಾಲಾಧಾರಿಗಳ ನೆನ್ನೆವರೆಗೂ ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಮೃತರ ಕುಟುಂಬಸ್ಥರ ಗೋಳು, ಆಕ್ರಂದನ ಮುಗಿಲು ಮುಟ್ಟಿದೆ.
ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮಾಲಾಧಾರಿಗಳಾದ ನಿಜನಿಂಗಪ್ಪ ಮಲ್ಲಪ್ಪ ಬೇಪೂರು (58) ಹಾಗೂ ಸಂಜಯ ಪ್ರಕಾಶ್ ಸವದತ್ತಿ (17) ಮೃತಪಟ್ಟಿದ್ದಾರೆ. ಮೃತರು ಸೇರಿದಂತೆ ಘಟನೆಯಲ್ಲಿ ಗಾಯಗೊಂಡವರಿಗೆ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಅದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಮೃತಪಟ್ಟಿದ್ದಾರೆ.

ಹುಬ್ಬಳ್ಳಿಯ ಅಚ್ಚವನ ಕಾಲೋನಿಯ ಈಶ್ವರ ದೇವಾಲಯದಲ್ಲಿ ಮೂರು ದಿನಗಳ ಹಿಂದೆ ಸಿಲಿಂಡರ್ ಸೋರಿಕೆ ಯಾಗಿ ಬೆಂಕಿ ಅವಘಡ ಸಂಭವಿಸಿತ್ತು. ಘಟನೆ ಯಲ್ಲಿ ಒಟ್ಟು 09 ಮಂದಿ ಮಾಲಾಧಾರಿಗಳು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಕಿಮ್ಸ್‌ಗೆ ದಾಖಲಿಸಲಾಗಿತ್ತು.
ಸಚಿವರಾದ ಸಂತೋಷ್ ಲಾಡ್, ದಿನೇಶ್ ಗುಂಡೂರಾವ್ ಸೇರಿದಂತೆ ಸ್ಥಳೀಯ ಶಾಸಕರು, ನಾಯಕರು ಭೇಟಿ ನೀಡಿದ್ದಾರೆ. ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಲಾಗಿತ್ತು.
11 ವರ್ಷಗಳಿಂದ ಮಾಲೆ ಧರಿಸುತ್ತಿದ್ದ
ಘಟನೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದು, ಎಲ್ಲರ ಪರಿಸ್ಥಿತಿಯೂ ಚಿಂತಾಜನಕವಾಗಿದೆ. ಎಲ್ಲರ ಕುಟುಂಬದ ಕಥೆಯೂ ಭಿನ್ನ- ವಿಭಿನ್ನ. ಪ್ರಕಾಶ ಬಾರಕೇರ (42) ಮತ್ತು ವಿನಾಯಕ ಬಾರಕೇರ(12) ಅಪ್ಪ-ಮಗ ಸೇರಿ ಮಾಲೆ ಧರಿಸಿದ್ದರು.
ಮಗನಿಗೆ ಗಂಟೆಸ್ವಾಮಿ ಮಾಡಬೇಕೆಂದು ಅಪ್ಪ ಮೂರನೇ ವರ್ಷ ಮಾಲಾಧಾರಣೆ ಮಾಡಿಸಿದ್ದರು. ಅವರು 11 ವರ್ಷಗಳಿಂದ ಮಾಲೆ ಧರಿಸುತ್ತಿದ್ದರು. ಮನೆ ಯಜಮಾನನಾಗಿದ್ದ ಅವರ ದೇಹ ಘಟನೆಯಲ್ಲಿ ಶೇ 92 ರಷ್ಟು ಸುಟ್ಟಿದೆ.
ಹೇಗಾದರೂ ಬದುಕಿ ಬಂದರೆ ಸಾಕು, ಕಾಪಾಡು ಅಯ್ಯಪ್ಪ, ಅಯ್ಯಪ್ಪ' ಎಂದು ಸಂಬಂಧಿಕರು ಪ್ರಾರ್ಥಿಸುತ್ತಿದ್ದರು ಘಟನೆ ನಡೆದಾಗದಿಂದನೂ ಆಸ್ಪತ್ರೆ ಆವರಣದಿಂದ ಯಾರೂ ಕದಲತಾ ಇಲ್ಲ. ಸಾಯಿನಗರ, ಉಣಕಲ್ ಹಾಗೂ ಹುಬ್ಬಳ್ಳಿ ಧಾರವಾಡ ಅಯ್ಯಪ್ಪ ಸ್ವಾಮಿ ಮಾಲಾಧಿರಿಗಳು ತಂಡೋಪತಂಡವಾಗಿ ಬರುತ್ತಿದ್ದಾರೆ.
ವಿವಿಧ ಭಾಗಗಳ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಸಹ ಬಂದು, ಗಾಯಾಳುಗಳ ಸಂಬಂಧಿಕರಲ್ಲಿ ಮಾಹಿತಿ ಪಡೆದು, ಸಾಂತ್ವನ ಹೇಳುತ್ತಿದ್ದ ದೃಶ್ಯಗಳು ಆಸ್ಪತ್ರೆ ಆವರಣದಲ್ಲಿ ಕಂಡು ಬಂತು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಂತಾಪ್
ಹುಬ್ಬಳ್ಳಿಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 9 ಜನ ಅಯ್ಯಪ್ಪ ಮಾಲಾಧಾರಿಗಳ ಪೈಕಿ 58 ವರ್ಷದ ನಿಲಿಂಗಪ್ಪ ಬೇಪುರಿ ಹಾಗೂ 18 ವರ್ಷದ ಸಂಜಯ ಸವದತ್ತಿ ಎಂಬುವವರು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುವ ವಿಷಯ ತಿಳಿದು ತೀವ್ರ ಬೇಸರವಾಗಿದೆ.
ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಅವರು ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತ ಬಂಧುಗಳಿಗೆ ಸಾಂತ್ವನ ತಿಳಿಸಿದ್ದಾರೆ.












Click it and Unblock the Notifications