ಹುಬ್ಬಳ್ಳಿಯಲ್ಲಿ ತಲೆ ಎತ್ತಿದೆ ದೇಶದ ಮಾದರಿ ಕೋರ್ಟ್
ಹುಬ್ಬಳ್ಳಿ, ಜುಲೈ 10: ದೇಶದಲ್ಲಿಯೇ ಮಾದರಿ ಎನ್ನಬಹುದಾದ ಅತ್ಯಾಧುನಿಕ, ವಿಶಾಲ ಕೋರ್ಟ್ ಕಟ್ಟಡ ಹುಬ್ಬಳ್ಳಿಯಲ್ಲಿ ತಲೆ ಎತ್ತಿದೆ. ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸದ್ಯದಲ್ಲಿಯೇ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.
ಕೇಂದ್ರಿಕೃತ ಹವಾನಿಯಂತ್ರಣ ವ್ಯವಸ್ಥೆ ಹೊಂದಿರುವ ದೇಶದ ಏಕೈಕ ನ್ಯಾಯಾಲಯ ಕಟ್ಟಡ ಇದಾಗಿದ್ದು, ಹೈಕೋರ್ಟ್ ಕಟ್ಟಡದ ಮಾದರಿಯಲ್ಲಿದೆ.

122 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಟ್ಟಡ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದ್ದು, ವಿಶಾಲವಾದ 20 ಕೋರ್ಟ್ ಹಾಲ್‌ಗಳನ್ನು ಹೊಂದಿದೆ.
ಹುಬ್ಬಳ್ಳಿಯ ವಿದ್ಯಾನಗರದ 5.15 ಎಕರೆ ಪ್ರದೇಶದಲ್ಲಿ ಸುಸಜ್ಜಿತ 25,525 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಈ ಕಟ್ಟಡ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ನೋಟರಿಗಳು, ಕಕ್ಷಿದಾರರು ಕೂರಲು ವ್ಯವಸ್ಥೆ, ಕೇಂದ್ರೀಕೃತ ಹವಾನಿಯಂತ್ರಿಣ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಹವಾನಿಯಂತ್ರಿತ ನ್ಯಾಯಲಯ ದೇಶದಲ್ಲಿಯೇ ಪ್ರಥಮ
ಇಡೀ ಕೋರ್ಟ್ ಕಟ್ಟಡ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಗೆ ಒಳಪಟ್ಟಿದ್ದು, ಇದಕ್ಕಾಗಿ ಸರ್ಕಾರ 7.79 ಕೋಟಿ ರೂಪಾಯಿ ಹಣ ವಿನಿಯೋಗಿಸಿದೆ. ಕಟ್ಟದಲ್ಲಿರುವ 20 ಕೋರ್ಟ್ ಸಭಾಂಗಣಗಳು ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಗೆ ಒಳಪಟ್ಟಿದ್ದು, ಉಳಿದಡೆ ಸಾಮಾನ್ಯ ಹವಾನಿಯಂತ್ರಿತ ವ್ಯವಸ್ಥೆಗೆ ಒಳಪಡಿಸಲಾಗಿದೆ.
ಇದಕ್ಕಾಗಿ 300 ಟನ್ ಸಾಮರ್ಥ್ಯದ 3 ಬೃಹತ್ ಹವಾ ನಿಯಂತ್ರಣ ಯಂತ್ರಗಳನ್ನು ಅಳವಡಿಸಲಾಗಿದೆ. ಹೈದರಾಬಾದ್ ಮೂಲಕ ಎಲ್‌ಎಂವಿ ಕಂಪನಿ ಕಾಮಗಾರಿಯ ಗುತ್ತಿಗೆ ಪಡೆದಿದೆ.












Click it and Unblock the Notifications