ಹುಬ್ಬಳ್ಳಿಯಲ್ಲಿ 8 ಖಾಸಗಿ ಬಸ್ ಜಪ್ತಿಯಾಗಲು ಏನು ಕಾರಣ?

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್, ೦4: ರಾಷ್ಟ್ರೀಯ ಹೆದ್ದಾರಿ ನಂ.4 ರಲ್ಲಿ ಗುರುವಾರ ಕಾರ್ಯಾಚರಣೆ ನಡೆಸಿದ ಆರ್ ಟಿಒ ಅಧಿಕಾರಿಗಳು ಖಾಸಗಿ ಟ್ರಾವೆಲ್ಸ್ ಗೆ ಸೇರಿದ 8 ಬಸ್ ಗಳನ್ನು ಜಪ್ತಿ ಮಾಡಿದ್ದಾರೆ.

ಹುಬ್ಬಳ್ಳಿಯ ವಲಯಾಧಿಕಾರಿ ಪುರುಷೋತ್ತಮ ದಾಳಿಯ ನೇತೃತ್ವ ವಹಿಸಿ ಖಾಸಗಿ ಬಸ್ ಗಳಲ್ಲಿ ಬೆಂಕಿಗೆ ಕಾರಣವಾಗಬಹುದಾದ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಬಸ್ ಗಳ ಮಾಲೀಕ ಮತ್ತು ಚಾಲಕರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.[ಕಾರ್ಮಿಕನ ಕಾಡಿಸಿ ಬಸ್ ಕಳೆದುಕೊಂಡ ಕೆಎಸ್ಆರ್‌ಟಿಸಿ!]

Hubballi: Carrying flammable goods 8 Private buses seized

ಈ ಬಸ್ ಗಳಲ್ಲಿ ಶೀಘ್ರವಾಗಿ ಉರಿಯಬಲ್ಲ ಮತ್ತು ಬೆಂಕಿ ಹತ್ತುವಂತಹ ವಸ್ತುಗಳನ್ನು ಅನಧಿಕೃತವಾಗಿ ಸಾಗಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಸ್ ಗಳನ್ನು ಅಕ್ರಮವಾಗಿ ವಸ್ತುಗಳ ಸಾಗಾಟಕ್ಕಾಗಿ ಕೇಸ್ ದಾಖಲಿಸಲಾಗಿದೆ ಎಂದು ಆರ್ ಟಿಓ ಅಧಿಕಾರಿಗಳು ಹೇಳಿದ್ದಾರೆ.[ಹುಬ್ಬಳ್ಳಿಯಲ್ಲಿ ಖಾಸಗಿ ಬಸ್ ಬೆಂಕಿಗಾಹುತಿ]

Hubballi: Carrying flammable goods 8 Private buses seized

ಬಸ್ ಗೆ ಬೆಂಕಿ ಬಿದ್ದಿತ್ತು
ಜುಲೈ 27 ರಂದು ವರೂರು ಬಳಿ ಖಾಸಗಿ ಬಸ್ ವೊಂದಕ್ಕೆ ನಸುಕಿನ ಸಮಯದಲ್ಲಿ ಬೆಂಕಿ ಹೊತ್ತಿಕೊಂಡು ನಾಲ್ವರು ಮೃತಪಟ್ಟು, ಏಳು ಜನರು ಗಾಯಗೊಂಡು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚರಗೊಂಡ ಅಧಿಕಾರಿಗಳು ಬಸ್ ನಲ್ಲಿ ಬೆಂಕಿಗೆ ಕಾರಣವಾಗುವ ವಸ್ತುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪಡೆದುಕೊಂಡು ದಾಳಿ ನಡೆಸಿದ್ದಾರೆ.

ಬಸ್ ಬೆಂಕಿಗೆ ಆಹುತಿಯಾದ ವಿಡಿಯೋ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubballi: Transport Department officers (RTO) seized total 8 buses belonged to private travels company.
Please Wait while comments are loading...