ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇಂದ್ರದ ನಡೆ ವಿರೋಧಿಸಿ ಹುಬ್ಬಳ್ಳಿ ಬಿಎಸ್ಎನ್ಎಲ್ ಸಿಬ್ಬಂದಿ ಮುಷ್ಕರ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್, 16 : ಬಿಎಸ್ಎನ್ಎಲ್ ಗೆ ಮತ್ತೊಂದು ಅಂಗ ಸಂಸ್ಥೆ ರಚಿಸಿ ಟವರ್ ನಿರ್ವಹಣೆ ಮಾಡಲು ಉದ್ದೇಶಿಸಿರುವ ದೂರ ಸಂಪರ್ಕ ಇಲಾಖೆ ನಡೆಯನ್ನು ನವದೆಹಲಿಯ ಭಾರತ ಸಂಚಾರ ನಿಗಮದ ಅಧಿಕಾರಿಗಳ ಹಾಗೂ ಅಧಿಕಾರೇತರ ನೌಕರರ ಜಂಟಿ ಸಮಿತಿ ಈ ಮುಷ್ಕರಕ್ಕೆ ಕರೆ ನೀಡಿತ್ತು.

ಅದರ ಹಿನ್ನಲೆಯಲ್ಲಿ ನಗರದಲ್ಲಿ ಬಿಎಸ್ಎನ್ಲ್ ಕಚೇರಿ ಮುಂದೆ ಸಿಬ್ಬಂದಿಗಳು, ಅಧಿಕಾರಿಗಳು ಗುರುವಾರ ಮುಷ್ಕರ ನಡೆಸಿದರು. ಕೇಂದ್ರ ಸರಕಾರ ಮೊದಲೇ ನಷ್ಟದಲ್ಲಿರುವ ಸಂಸ್ಥೆಯನ್ನು ಮತ್ತೊಂದಿಷ್ಟು ಹಾಳು ಮಾಡಲು ಹೊರಟಿದೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.

Hubballi BSNL staff strike against central government decision

ಸರಕಾರ ಹೊಸ ಟವರ್ ಕಂಪನಿಯನ್ನು ರಚಿಸಿ ಬಾಡಿಗೆ ನೀಡುವಂತೆ ಮಾಡಿದರೆ ಇದರಿಂದ ಸಂಸ್ಥೆಗೆ ಆರ್ಥಿಕವಾಗಿ ಹೊಡೆತ ಬಿಳುತ್ತದೆ ಈಗ ದೇಶದಲ್ಲಿ ಬಿಎಸ್ಎನ್ಲ್ ಮಾಲೀಕತ್ವದ 65 ಸಾವಿರ ಮೊಬೈಲ್ ಟವರ್ ಇವೆ.

ಈಗ ಬಿಎಸ್ಎನ್ಎಲ್ ಗೆ ಮತ್ತೊಂದು ಅಂಗ ಸಂಸ್ಥೆ ರಚಿಸಿ ಟವರ್ ನಿರ್ವಹಣೆ ಮಾಡಲು ಉದ್ದೇಶಿಸಿ ದೂರ ಸಂಪರ್ಕ ಇಲಾಖೆ ಸಚಿವ ಕ್ಯಾಬಿನೇಟ್ ನೋಟಿಸ್ ಗೆ ಸಹಿ ಮಾಡಿ ಅನುಮೋದನೆಗೆ ಕಳಿಸಿದ್ದು ಸರಿಯಾದ ಕ್ರಮವಲ್ಲ ಎಂದು ಮುಷ್ಕರ ನಿರತರು ದೂರಿದರು.

Hubballi BSNL staff strike against central government decision

ಸಂಸ್ಥೆಯಲ್ಲಿ ದುಡಿಯುವ ಲಕ್ಷಾಂತರ ಕುಟುಂಬಗಳ ಹೊಟ್ಟೆ ಮೇಲೆ ಹೊಡೆಯುವಂತಹ ಈ ನಿರ್ಧಾರ ಎಂದಿದ್ದಾರೆ. ಈಗಿರುವ ಒಂದೇ ಸಂಸ್ಥೆಯಿಂದ ಮತ್ತೊಂದು ಸಂಸ್ಥೆಯನ್ನು ಮಾಡಿ ಅದಕ್ಕೆ ತಾನೇ ಬಾಡಿಗೆ ನೀಡುವ ಈ ಪದ್ಧತಿಯಿಂದ ಬಿಎಸ್ಎನ್ಲ್ ಸಂಸ್ಥೆಯು ಒಡೆದು ಚೂರಾಗುತ್ತದೆ ಇದರಿಂದ ಖಾಸಗೀಕರಣಕ್ಕೆ ದಾರಿ ಮಾಡಿಕೊಟ್ಟಂಟತಾಗುತ್ತದೆ ಎಂದರು.

Hubballi BSNL staff strike against central government decision

ರೈತರ ಪ್ರತಿಭಟನೆ: ರೈತರ ಸಂಕಷ್ಟಗಳನ್ನು ಸದನದಲ್ಲಿ ಯಾರೂ ಹೇಳುತ್ತಿಲ್ಲ ಎಂದು ಕಳಸಾ ಬಂಡೂರಿ ಹೋರಾಟ ಸಮಿತಿ ಆರೋಪಿಸಿದೆ. ಸಮಿತಿಯ ಸದಸ್ಯರು ಗುರುವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಳೆದ 17 ವರ್ಷದಿಂದ ಕಳಸಾ ಬಂಡೂರಿ ಹೋರಾಟ ನಡೆಯುತ್ತಿದೆ ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ ಎಂದು ದೂರಿದರು.

English summary
Hubballi BSNL staff Thursday stalled work and observed a strike against the central government’s decision to bifurcate BSNL. Accusing the government of trying to end the organisation, employees raised slogans against the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X