ಹುಬ್ಬಳ್ಳಿಯ ಸೈಂಟಿಸ್ಟ್ ಮಂಜ್ಯಾ ಹಾಗೂ 3 ಸಹಚರರಿಗೆ ಜೈಲು

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಡಿಸೆಂಬರ್, 09 : ಕುಖ್ಯಾತ ದರೋಡೆಕೋರ ಸೈಂಟಿಸ್ಟ್ ಮಂಜ್ಯಾ ಮತ್ತು ಆತನ ಮೂವರು ಸಹಚರರಿಗೆ ಸ್ಥಳೀಯ 5ನೇ ಸತ್ರ ನ್ಯಾಯಾಲಯ ಪ್ರತ್ಯೇಕ ಎರಡು ಕಳ್ಳತನ ಪ್ರಕರಣಗಳಲ್ಲಿ5 ಮತ್ತು 7 ಒಟ್ಟು 12 ವರ್ಷ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.

2-2 2010 ರ ಕಳ್ಳತನ ಪ್ರಕರಣದಲ್ಲಿ ನಾಲ್ವರೂ ಆರೋಪಿಗಳಿಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 2,500 ರೂ. ದಂಡ ಮತ್ತು 19-2-2009 ದರೋಡೆ ಪ್ರಕರಣಕ್ಕೆ 7 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 1 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಸ್ಥಳೀಯ ರಾಜಗೋಪಾಲನಗರದ ನಿವಾಸಿ ಮಂಜುನಾಥ ಅಲಿಯಾಸ್ ಸೈಂಟಿಸ್ಟ್ ಮಂಜ್ಯಾ ಕೃಷ್ಣಪ್ಪ ಭಂಡಾರಿ (28) ಹೆಗ್ಗೇರಿಯ ರಾಘವೇಂದ್ರ ಅಲಿಯಾಸ್ ರಾಘ್ಯಾ ಹನುಮಂತ ಅಂಬಿಗೇರ (26) ಶ್ರೀನಿವಾಸ ಅಲಿಯಾಸ್ ಶೀನ್ಯಾ ಸಿದ್ದಪ್ಪ ವಾಲ್ಮೀಕಿ (29) ಧಾರವಾಡ ಗೊಲ್ಲರ ಓಣಿಯ ನಾಸೀರ ಅಲಿಯಾಸ್ ರಾಣಿಬೆನ್ನೂರ ಅಶೋಕ ಸತ್ತರಸಾಬ ಖಾಜಿ (27) ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ.

Hubballi 5th Sessions Court ordered 7 year Sentenced Scientist Manjya And 3 Others

5ನೇ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಎಸ್. ಗಂಗಣ್ಣವರ ಎರಡು ಪ್ರತ್ಯೇಕ ಪ್ರಕರಣಗಳಿಗೆ ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕ ಡಿ.ಎ.ಬಾಂಡೇಕರ್ ಸರಕಾರದ ಪರವಾಗಿ ವಾದ ಮಂಡಿಸಿದ್ದರು.

19-2-2009 ರಂದು ಬೆಂಗಳೂರು ಗೊರಗುಂಟೆಪಾಳ್ಯದ ನಿವಾಸಿ ರಾಮಚಂದ್ರ ತಂದೆ ತಿಮ್ಮೇಗೌಡ ಗೊಲ್ಲರ ಎಂಬುವವರು ಲಾರಿಯಲ್ಲಿ ಮಲಗಿರುವ ವೇಳೆ ಚಾಕು ತೋರಿಸಿ ಹೆದರಿಸಿ ಅವರ ಹತ್ತಿರ 11,800. ರೂ ಹಾಗೂ ಮೊಬೈಲ್ ದೋಚಿಕೊಂಡು ಹೋಗಿದ್ದರು. ಹಾಗೂ 2-2 2010 ರಲ್ಲಿಯೂ ದರೋಡೆ ಕೇಸ್ ನಲ್ಲಿ ಸಿಕ್ಕಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi 5th sessions Court has sentenced Scientist Manjya, Hanumanth, Raghavendra, srinivasa and Naseer to seven years rigorous imprisonment in a 2009 and 2010 two stolen cases.
Please Wait while comments are loading...