Basavanna: ಬಸವಣ್ಣ 'ಕರ್ನಾಟಕದ ಸಾಂಸ್ಕೃತಿಕ ನಾಯಕ' ನಿರ್ಧಾರ ರಾಜಕೀಯ ಬಳಕೆ?: ಎಚ್‌ಕೆ ಪಾಟೀಲ್ ಹೇಳಿದ್ದೇನು?
ಹುಬ್ಬಳ್ಳಿ, ಜನವರಿ 19: ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜಗಜ್ಯೋತಿ ಶರಣ 'ಬಸವಣ್ಣ' ಅವರನ್ನು 'ಕರ್ನಾಟಕದ ಸಾಂಸ್ಕೃತಿಕ ನಾಯಕ' ಎಂದು ಘೋಷಿಸಲು ನಿರ್ಧರಿಸಲಾಗಿದೆ. ಈ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಪ್ರತಿಕ್ರಿಯಿಸಿರುವ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು, ಬಸವೇಶ್ವರರನ್ನ ಚುನಾವಣಾ ವಿಚಾರಕ್ಕೆ ಬಳಕೆಯ ವಿಷಯವಾಗಿ ಮುನ್ನಲೆಗೆ ತರುವವರೇ ಕ್ಷುಲ್ಲಕರು ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಾಂಸ್ಕೃತಿಕ ನಾಯಕರನ್ನಾಗಿ ಬಸವಣ್ಣನ ಘೋಷಣೆಗೆ ರಾಜಕಾರಣ ಬೆರೆಸುವ ಕುರಿತು ವಿಚಾರವಾಗಿ ಮಾತನಾಡಿದರು. ಅವರ ತಲೆಯಲ್ಲಿ ಕೇವಲ ರಾಜಕಾರಣ ಇದೆ. ನಾವು ನಮ್ಮ ದೃಡ ಹೆಜ್ಜೆ ಇಡುತ್ತಾ ಹೋಗುತ್ತಿದ್ದೇವೆ.

ಸುಮ್ಮನೆ ಇಲ್ಲ ಸಲ್ಲದ ಆರೋಪ
ಈಗ ಬಸವಣ್ಣನವರ ಈಗ ಸಾಂಸ್ಕೃತಿಕ ನಾಯಕರನ್ನಾಗಿ ಮಾಡಿದವು ಅದಕ್ಕೊ ಚುನಾವಣೆ, ರಾಜಕೀಯ ಎನ್ನುತ್ತಾರೆ. ಅಲ್ಲಮಪ್ರಭು ಅವರ ಉದ್ಯಾನವನ ಮಾಡಿದವು ಇದಕ್ಕೂ ಚುನಾವಣೆ ಎನ್ನುತ್ತೀರಿ, ಚೆನ್ನಮ್ಮನ ಕಿತ್ತೂರು ಮಾಡಿದವು ಅದಕ್ಕೂ ರಾಜಕಾರಣ ಎನ್ನತ್ತೀರಿ. ಏನೂ ಮಾಡದ ಅವರು ಇದೀಗ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಸಾಂಸ್ಕೃತಿಕ ಹಾಗೂ ಸಾಮಾಜಿಕ ಒಳ್ಳೆಯತನ ಅವರಲ್ಲಿ ಇಲ್ಲ. ಮನುಕುಲ ಕಂಡ ಶ್ರೇಷ್ಠ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ನಾಯಕ ಶ್ರೀ ಬಸವೇಶ್ವರರು ಮನುಕುಲಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಚಯಿಸಿದವರು ಬಸವಣ್ಣ ಅನುಭವ ಮಂಟಪ ಮೂಲಕ ಹೊಸ ಕಲ್ಪನೆ ಕೊಟ್ಟವರು. ನಾವು ಕರ್ನಾಟಕ ಸರ್ಕಾರದವರು ಸಾಂಸ್ಕೃತಿಕ ಸಾಂಸ್ಕೃತಿಕ ನಾಯಕನೆಂದು ನಿರ್ಣಯ ಮಾಡಲಾಗಿದೆ.
ಸರ್ಕಾರದ ನಿರ್ಣಯಕ್ಕೆ ಮಠಾಧೀಶರ ಅಭಿನಂದನೆ
ಇದನ್ನು ಬಹಳಷ್ಟು ಜನರು ಸ್ವಾಗತಿಸಿದ್ದಾರೆ, ಅಭಿಮಾನ ವ್ಯಕ್ತಪಡಿಸಿದ್ದಲ್ಲೆ, ನನಗೆ ಕರೆ ಮಾಡಿ ತಿಳಿಸುತ್ತಿದ್ದಾರೆ. ನಾಡಿನ ಅನೇಕ ಮಠಾಧೀರರು ಸಹ ಕರೆ ಮಾಡಿ ತಮ್ಮ ಪರವಾಗಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಲು ಕೋರಿದ್ದಾರೆ. ಸಾಮಾಜಿಕ ನಾಯಕರು ಜಾತಿ ಮತ ಪಂಥ ಮೀರಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಸರ್ಕಾರ ಗಮನಿಸಿ ಹೆಜ್ಜೆ ಇಡುತ್ತಿದೆ
ಹಾವೇರಿ ಜಿಲ್ಲೆಯ ಹಾನಗಲ್ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡಿಸಿ, ಎಸ್ ಐಟಿ ತನಿಖೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಭಾರತೀಯ ಜನತಾ ಪಕ್ಷದವರು ಪ್ರತಿಭಟನೆಗೆ ಮುಂದಾಗಿದ್ದರು. ಅವರಿಗೆ ಪ್ರತಿಭಟನೆ ಮಾಡುವ ಹಕ್ಕು ಅವರಿಗೆ ಇದೆ. ಆದರೆ ಸರ್ಕಾರ ಎಲ್ಲ ಗಮನಿಸಿ ಹೆಜ್ಜೆ ಇಡುತ್ತಿದೆ. ಸರ್ಕಾರ ಎಲ್ಲಿಯೂ ವಿಫಲವಾಗಿಲ್ಲ ಎಂದು ಸರ್ಕಾರ ನಡೆ ಸಮರ್ಥಿಸಿಕೊಂಡರು.
ಇಂಡಿಯಾದಿಂದ ದೇಶಕ್ಕೆ ಉತ್ತಮ ನಾಯಕ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು 'ಇಂಡಿಯಾ' ಮೈತ್ರಿ ಒಕ್ಕೂಟದ ಮುಖ್ಯಸ್ಥರಾಗಿ ನೇಮಕ ಮಾಡುವ ವಿಚಾರ ಕರ್ನಾಟಕ ಹೆಮ್ಮ ಪಡಬೇಕು. ಕರ್ನಾಟಕದ ಒಬ್ಬ ನಾಯಕ ರಾಷ್ಟ್ರಮಟ್ಟದಲ್ಲಿ ಎಲ್ಲರ ಒಪ್ಪಿಗೆ ಪಡೆದುಕೊಳ್ಳುತ್ತಿದ್ದಾರೆ. ಇಂಡಿಯಾ ನಿರ್ಣಯ ಒಳ್ಳೆಯದಾಗಿದ್ದು, ಪ್ರಧಾನಿ ಮೋದಿ ಅವರನ್ನು ಬದಲಾಯಿಸಿ ದೇಶಕ್ಕೆ ಉತ್ತಮ ನಾಯಕರನ್ನ ಕೊಡಲಿದೆ ಎಂದು ಹೇಳಿದರು.
ನ್ಯಾ. ಸದಾಶಿವ ಆಯೋಗದ ವರದಿ ಅನ್ವಯ ಮೀಸಲಾತಿ ಕೇಂದ್ರಕ್ಕೆ ಪ್ರಸ್ತಾವನೆ ನಿನ್ನೆ ಸಲ್ಲಿಸಲಾಗಿದೆ.ಈಗಾಗಲೇ ನಾವು ಕೇಂದ್ರಕ್ಕೆ ಕಳುಹಿಸಿದ್ದೇವೆ. ವೈಜ್ಞಾನಿಕ, ಕಾನೂನಾತ್ಮಕವಾಗಿ ಜನರಿಗೆ ಅನುಕೂಲ ಆಗುವ ರೀತಿಯಲ್ಲಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.












Click it and Unblock the Notifications