ವಿದ್ಯಾರ್ಥಿಯ ತಲೆ ಬೋಳಿಸಿ ಕ್ರೌರ್ಯ ಮೆರೆದ ಹುಬ್ಬಳ್ಳಿ ಮುಖ್ಯ ಶಿಕ್ಷಕಿ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಫೆಬ್ರವರಿ 9: ಇಲ್ಲಿಯ ನೆಹರು ನಗರದ ಸೇಂಟ್ ಪೌಲ್ಸ್ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯ ತಲೆ ಬೋಳಿಸಿ ಅಮಾನವೀಯತೆ ಮೆರದ ಘಟನೆ ಬುಧವಾರ ಜರುಗಿದೆ.

ಈ ಕುರಿತು ಮಾತನಾಡಿದ ವಿದ್ಯಾರ್ಥಿಯ ತಂದೆ ಖಾಸಗಿ ಸಂಸ್ಥೆಯ ಉದ್ಯೋಗಿ ಸೀಸಿಲ್ ನನ್ನ ಮಗನಿಗೆ ಮೊದ ಮೊದಲು ತಲೆಗೂದಲು ಕತ್ತರಿಸಿಕೊಂಡು ಬರಲು ಮನೆಗೆ ಹೇಳಿ ಕಳಿಸುತ್ತಿದ್ದರು. 6ನೇ ತರಗತಿ ಓದುತ್ತಿರುವ ನನ್ನ ಪುತ್ರ ಸ್ಯಾಮುಯೆಲ್ ಸಿ. ಬೋರ್ಗಾಯಿ (12) ನನ್ನು ಬುಧವಾರ ಶಾಲೆಯಲ್ಲಿ ಎಲ್ಲರೆದುರು ಹಿಡಿದುಕೊಂಡು ತಲೆಯಲ್ಲಿನ ಅರ್ಧ ಕೂದಲು ಕತ್ತರಿಸಿದ್ದಾರೆ. ಇದರಿಂದ ನೊಂದ ನನ್ನ ಮಗ ಮಾನಸಿಕವಾಗಿ ಕುಗ್ಗಿ ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದಾನೆ ಎಂದು ತಿಳಿಸಿದರು.[ಮಂಗಳೂರು: ಪ್ರಾಂಶುಪಾಲರ ಮೇಲೆ ವಿದ್ಯಾರ್ಥಿ ಹಲ್ಲೆ]

Head teacher Shaven head her student in front of other student in hubballi

ಸ್ಪಷ್ಟನೆ ಕೇಳಲು ಶಾಲೆಗೆ ಹೋದರೆ ಶಾಲಾ ಸಿಬ್ಬಂದಿಯವರು ಇಲ್ಲಿ ಯಾರೂ ಇಲ್ಲ ನೀವು ನಾಳೆಗೆ ಬನ್ನಿ ಎಂದು ಹೇಳಿ ಬೇಜವಾಬ್ದಾರಿ ತನ ಮೆರೆದಿದ್ದಾರೆ. ಈ ರೀತಿ ಚಿಕ್ಕಮಕ್ಕಳಿಗೆ ಅಮಾನವೀಯತೆಯಿಂದ ನಡೆದುಕೊಳ್ಳುತ್ತಿರುವ ಶಾಲಾ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನನ್ನ ಒತ್ತಾಯವಾಗಿದೆ. ಅಲ್ಲದೇ ಶಾಲಾ ಮುಂಭಾಗ ಮೈದಾನವನ್ನು ಶಾಲೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದೆ ಎಂಬ ಆರೋಪವೂ ಇದೆ ಎಂದರು.

Head teacher Shaven head her student in front of other student in hubballi

ಈ ಹಿಂದೆಯೂ ಅನೇಕ ರೀತಿಯ ಅಮಾನವೀಯ ಘಟನೆಗಳು ಈ ಶಾಲೆಯಲ್ಲಿ ನಡೆದಿದೆ. ಆದರೆ ನಾನು ಮತ್ತು ನನ್ನ ಮಗನಿಗಾದ ತೊಂದರೆ ಬೇರೆಯವರಿಗೆ ಆಗಬಾರದು, ನನಗೆ ನ್ಯಾಯ ದೊರಕಿಸಿ ಕೊಡಿ ಎಂದು ಸೀಸಿಲ್ ಅಲವತ್ತುಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Head teacher Shaven head her student in front of other student in Saint Pauls School at Neharu nagar, Hubballi. Parents against the accused teacher.
Please Wait while comments are loading...