ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ರದ್ದುಪಡಿಸಿ: ಹೊರಟ್ಟಿ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ,ಜುಲೈ,21: ರಾಜ್ಯ ಸರಕಾರ ಶಿಕ್ಷಕರ ವರ್ಗಾವಣೆಗಾಗಿ ಹೊರಡಿಸಿರುವ ಕೌನ್ಸೆಲಿಂಗ್ ಆದೇಶವನ್ನು ಕೂಡಲೇ ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು
ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.

ಹುಬ್ಬಳ್ಳಿ ಮಿನಿ ವಿಧಾನಸೌಧದಲ್ಲಿ ಗುರುವಾರ ಜರುಗಿದ ಶಿಕ್ಷಕರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಹೊರಟ್ಟಿ, ಸರಕಾರದ ಆದೇಶದಿಂದ ಬಹಳಷ್ಟು ಶಿಕ್ಷಕರಿಗೆ ತೊಂದರೆಯಾಗುತ್ತದೆ ಆದ್ದರಿಂದ ಸರಕಾರ ಕೂಡಲೇ ಆದೇಶವನ್ನು ಹಿಂದಕ್ಕೆ ಪಡೆದುಕೊಂಡು ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕೆಂದರು.[ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಹೊರಟ್ಟಿಗೆ ದಾಖಲೆ ಗೆಲುವು]

Government should Withdraw teachers counselling: Horatti

ಮೊದಲು 30 ಮಕ್ಕಳಿಗೊಬ್ಬರಂತೆ ಶಿಕ್ಷಕರಿದ್ದರು. ಈಗ 40 ಮಕ್ಕಳಿಗೊಬ್ಬ ಶಿಕ್ಷಕರನ್ನು ನೇಮಿಸಲಾಗುತ್ತದೆ. ಹಾಗೂ 3 ಸಾವಿರಕ್ಕೂ ಹೆಚ್ಚು ಇಂಗ್ಲೀಷ್ ಶಾಲೆಗಳಿಗೆ ಅನುಮತಿ ನೀಡಿಲಾಗುತ್ತಿದೆ. ಇದರಿಂದ ಸರಕಾರಿ ಕನ್ನಡ ಶಾಲೆಗಳು ಮುಚ್ಚುವುದು ಶತಸಿದ್ಧ ಎಂದರು.

ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ವಿಷಯ ತಿಳಿಸಿದ್ದೇನೆ. ಕೌನ್ಸೆಲಿಂಗ್ ಆದೇಶ ಹಿಂಪಡೆಯಲು ಒತ್ತಾಯಿಸಿ ಜು.23 ರಂದು ಶಿಕ್ಷಕರ ಸಂಘದವರೊಂದಿಗೆ ಪ್ರತಿಭಟನೆ ಮಾಡಲಾಗುವುದು ಎಂದರು.[ನರಗುಂದ ಬಂಡಾಯಕ್ಕೆ 36: ಹುಬ್ಬಳ್ಳಿಯಲ್ಲಿ ಕರಾಳ ದಿನ]

ಉರ್ದು ಶಿಕ್ಷಕರ ಪ್ರತಿಭಟನೆ:
ಉರ್ದು ಶಾಲಾ ಶಿಕ್ಷಕರ ವರ್ಗಾವಣೆಗಾಗಿ ಕೌನ್ಸೆಲಿಂಗ್ ಮಾಡುತ್ತಿರುವುದನ್ನು ಖಂಡಿಸಿ ಗುರುವಾರ ಉರ್ದು ಶಾಲಾ ಶಿಕ್ಷಕರು ಸ್ಥಳೀಯ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

Government should Withdraw teachers counselling: Horatti

ಭಾಷಾ ಅಲ್ಪಸಂಖ್ಯಾತ ಉರ್ದು ಶಾಲೆಗಳ ಶಿಕ್ಷಕರಿಗಾಗಿ 2011 ರಲ್ಲಿ ಮಾಡಿದ್ದ ಆದೇಶವನ್ನು ಮರಳಿ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 2016ರ ಆದೇಶದಲ್ಲಿ ಉರ್ದು ಶಾಲಾ ಶಿಕ್ಷಕರನ್ನು ಹೆಚ್ಚುವರಿಯಾಗಿ ಎಲ್ಲಿಯೂ ವರ್ಗಾವಣೆ ಮಾಡಿದಲ್ಲಿ ಕೌನ್ಸಲಿಂಗ್ ಬಹಿಷ್ಕಾರ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಒಟ್ಟು 42 ಶಿಕ್ಷಕರಿದ್ದು ಎಲ್ಲರಿಗೂ ಶಾಲಾ ಸುಧಾರಣಾ ಸಮಿತಿ ಬೆಂಬಲವಿದೆ ಎಂದರು. ಪಾಲಿಕೆ ಸದಸ್ಯ ಅಲ್ತಾಫ್ ಕಿತ್ತೂರ, ಅಬ್ದುಲ್ ನವಾಬ್ ಮುಲ್ಲಾ, ಬಶೀರ್ ಗೂಡಮಾಲೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi: JDS leader, West Teachers constituency MLC Basavaraj Horatti urges that state government should withdraw their counselling towards teachers transfer. Horatti conducted teachers meeting in Hubballi on 21 July, 2016.
Please Wait while comments are loading...