• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾನೂನು ಬಾಹಿರವಾಗಿ ಕೆಲಸದಿಂದ ತೆಗೆದು ಹಾಕಿದ್ದಾರೆ: ಹುಬ್ಬಳ್ಳಿಯಲ್ಲಿ ಪೌರ ಕಾರ್ಮಿಕರ ಗೋಳು

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್‌, 06: ಕಾನೂನು ಬಾಹಿರವಾಗಿ ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ಪೌರ ಕಾರ್ಮಿಕರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿ ನಡೆಸಿದ ಪೌರಕಾರ್ಮಿಕರು, ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಲೇ ಕಣ್ಣೀರಿಟ್ಟಿದ್ದಾರೆ.

ರಾಧಾ ಬಾಗಲವಾಡ, ದ್ಯಾಮವ್ವ ಗಬ್ಬೂರ, ರೇಣವ್ವ ನಾಗರಾಳ, ಲಕ್ಷ್ಮವ್ವ ಚಟಗೇರಿ, ಲಕ್ಷ್ಮೀ ಗೋಕಾಕ, ಯಲ್ಲಪ್ಪ ಪಾಳೆ ಪೌರ ಕಾರ್ಮಿಕರು ಕಣ್ಣೀರು ಹಾಕಿದರು. ನಮ್ಮನ್ನು ಕಾನೂನು ಬಾಹಿರವಾಗಿ ಕೆಲಸದಿಂದ ತೆಗೆದು ಹಾಕಲಾಗಿದೆ. ನಾವು ಏನು ತಪ್ಪು ಮಾಡಿದ್ದೇವೆ? ಎಂದು ಪ್ರಶ್ನಿಸುವ ಮೂಲಕ ಪೌರ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಾರ್ಡ ನಂಬರ್ 70ರಲ್ಲಿ ಸ್ವಚ್ಛತಾ ಕೆಲಸ ಮಾಡುವ ಈ ಗುತ್ತಿಗೆ ಪೌರ ಕಾರ್ಮಿಕರು, ಗುತ್ತಿಗೆದಾರ ವೆಂಕಟೇಶ್ ಮೊರಬದ ಅನ್ಯಾಯ ಮಾಡಿದ್ದಾನೆ ಎಂದು ಆರೋಪ ಮಾಡಿದರು.

ಬದುಕಿದ್ದರೂ ನಿಧನರಾಗಿದ್ದಾರೆ ಎಂದು ಮತದಾರರ ಪಟ್ಟಿಯಿಂದ ಪಾಲಿಕೆ ನಿವೃತ್ತ ಆಯುಕ್ತರ ಹೆಸರು ಡಿಲೀಟ್‌ಬದುಕಿದ್ದರೂ ನಿಧನರಾಗಿದ್ದಾರೆ ಎಂದು ಮತದಾರರ ಪಟ್ಟಿಯಿಂದ ಪಾಲಿಕೆ ನಿವೃತ್ತ ಆಯುಕ್ತರ ಹೆಸರು ಡಿಲೀಟ್‌

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ

ನಮಗೆ ಮಾಸಿಕ 9,500 ರೂಪಾಯಿ ವೇತನ ನೀಡಿ 4,500 ರೂಪಾಯಿ ವಾಪಸ್ ಪಡೆಯುತ್ತಿದ್ದರು ಎಂದು ಆರೋಪಿಸಿದರು. ಇನ್ನು ಪಾಲಿಕೆ ಬಿಲ್ ಪಾವತಿಸಿದರೂ ಕೂಡ ಎರಡು ತಿಂಗಳಿಂದ ವೇತನ ಕೊಟ್ಟಿಲ್ಲ. ಪೌರಕಾರ್ಮಿಕರ ಬ್ಯಾಂಕ್ ಪಾಸ್‌ಬುಕ್‌, ಎಟಿಎಂ ಕಾರ್ಡ್, ಇಎಸ್‌ಐ, ಇಪಿಎಫ್ ಕಾರ್ಡುಗಳು ಹಾಗೂ ಸರ್ವಿಸ್ ಲೇಟರ್ ನೀಡಿಲ್ಲ ಎಂದು ಅಳಲು ತೋಡಿಕೊಂಡರು. ಇದನ್ನು ಪ್ರಶ್ನಿಸಿದ್ದರೆ ಧಮ್ಕಿ ಹಾಕಿ ಕೆಲಸದಿಂದ ತೆಗೆದುಹಾಕಿದ್ದಾರೆ. ಮಹನಾಗರ ಪಾಲಿಕೆ ಕೂಡಲೆ ನಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಸಾಮೂಹಿಕವಾಗಿ ವಿಷ ಸೇವನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ದಯಾಮರಣ ಕೋರಿ ರಾಷ್ಟ್ರಪತಿಯವರಿಗೆ ಪತ್ರ

ಸಂಸಾರದ ಗುಟ್ಟು ವ್ಯಾದಿ ರಟ್ಟು ಎಂಬ ಮಾತು ಕೇಳಿದ್ದಿರಿ. ಆದರೆ ಇಲ್ಲಿ ಮಾತ್ರ ವ್ಯಾದಿ ರಟ್ಟು ಅಷ್ಟೇ ಅಲ್ಲ ಸೀದಾ ರಾಷ್ಟ್ರಪತಿ ಭವನ ತಲುಪಿದೆ. ಇದು ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದರೂ, ಪುನಃ ಎರಡನೇ ಮದುವೆಯಾಗಿ ಸಂಕಷ್ಟ ಎದುರಿಸುತ್ತಿರುವವರ ವಿಚಿತ್ರ ತ್ರಿಕೋನ ಸ್ಟೋರಿ. ಒಂದು ಕಡೆ ಮೊದಲ ಗಂಡ ಬಿಟ್ಟು ಹೋದ, ಎರಡನೇ ಗಂಡನ ಜೊತೆಗೆ ಜೀವನ ಮಾಡಲು ಆತನ ಮೊದಲನೆ ಹೆಂಡತಿ ಬಿಡುತ್ತಿಲ್ಲ. ಹೀಗಾಗಿ, ರೂಪಮಾಲಾ ಎಂಬ ಗೃಹಿಣಿ ದಯಾಮರಣ ಕೋರಿ ರಾಷ್ಟ್ರಪತಿಯವರಿಗೆ ಅರ್ಜಿ ಸಲ್ಲಿಸಿದ್ದರು.

ನನ್ನ ಮೊದಲ ಗಂಡ ಬಿಟ್ಟು ಹೋದ, ಎರಡನೇ ಗಂಡನ ಜೊತೆಗೆ ಜೀವನ ಮಾಡಲು ಆತನ ಮೊದಲನೇ ಹೆಂಡತಿ ಬಿಡುತ್ತಿಲ್ಲ. ನನಗೆ ಮಾನಸಿಕ ಹಿಂಸೆ ಆಗುತ್ತಿದೆ, ನಾನು ಗರ್ಭಿಣಿ. ಆತ್ಮಹತ್ಯೆ ಸಹ ಮಾಡಿಕೊಳ್ಳಲು ಆಗುತ್ತಿಲ್ಲ. ದಯವಿಟ್ಟು ನನಗೆ ದಯಾಮರಣ ಕರುಣಿಸಿ ಅಂತಾ ರಾಷ್ಟ್ರಪತಿಗೆ ಮಹಿಳೆಯೊಬ್ಬಳು ಪತ್ರ ಬರೆದಿದ್ದರು. ಈಗಾಗಲೇ ಮದುವೆಯಾಗಿ ಸುಖ ಸಂಸಾರ ನಡೆಸಿದ್ದಾರೆ. ಎದೆಮಟ್ಟಕ್ಕೆ ಬೆಳೆದು ನಿಂತ ಮಕ್ಕಳಿವೆ. ಇದನ್ನ ಲೆಕ್ಕಿಸಿದೆ ಎರಡನೇ ಮದುವೆಯಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿರುವ ವಿಚಿತ್ರ ತ್ರಿಕೋನ ಪ್ರೇಮಕಥನ ಇದಾಗಿದೆ. ಈ ಕಥೆ ದೇಶದ ಪ್ರಥಮ ಪ್ರಜೆಯ ಅಂಗಳಕ್ಕೆ ತಲುಪಿದ್ದು, ಇದಕ್ಕೆ ಹುಬ್ಬಳ್ಳಿಯ ಗಿರಿನಗರ ಸಾಕ್ಷಿಯಾಗಿದೆ. ಗಿರಿನಗರದ ಎಲೆಕ್ಟ್ರಿಕಲ್ ಗುತ್ತಿಗೆದಾರ ಬಸವರಾಜ ಅವರು ಮೊದಲ ಪತ್ನಿ ರೂಪಶ್ರೀ ಎರಡನೇ ಪತ್ನಿ ರೂಪಮಾಲಾ ಸಂಸಾರದ ಗುಟ್ಟು ದಿಲ್ಲಿಯ ರಾಷ್ಟ್ರಪತಿಗಳ ಅಂಗಳಕ್ಕೂ ಸಹ ಕಾಲಿಟ್ಟಿದೆ. ಎರಡನೇ ಗಂಡನ ಜೊತೆಗೆ ಜೀವನ ನಡೆಸಲು ಅವರ ಮೊದಲ ಪತ್ನಿ ಬಿಡುತ್ತಿಲ್ಲ. ನನಗೆ ದಯಾಮರಣ ಕರುಣಿಸಿ ಎಂದು ರಾಷ್ಟ್ರಪತಿಗೆ ರೂಪಮಾಲಾ ಪತ್ರ ಬರೆದಿದ್ದರು.

ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ ಗೃಹಿಣಿದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ ಗೃಹಿಣಿ

English summary
Pourakarmikas protested against Hubballi -Dharwad Municipal Corporation condemning illegal dismissed. know more, Pourakarmikas tears
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X