'ಹುಬ್ಬಳ್ಳಿ ಕಾ ಮಹಾರಾಜ' ಗಣೇಶ ಮೂರ್ತಿಗೆ ಫೈನಲ್ ಟಚ್: ಪಾಲ್ ಸಹೋದರರು ತಯಾರಿಸುವ ಮೂರ್ತಿ ಹೇಗಿದೆ?
ಹುಬ್ಬಳ್ಳಿ, ಆಗಸ್ಟ್ 26: ಗಣೇಶ ಚತುರ್ಥಿ 2024 ಇನ್ನೇನು ಸಮೀಪಿಸುತ್ತಿದ್ದು, ಇಡಿ ರಾಜ್ಯವೇ ಸ್ವಾಗತಿಸಲು ಸಜ್ಜಾಗಿದೆ. ಈಗಾಗಲೇ ಸಿದ್ಧತೆ ಆರಂಭಿಸಲಾಗಿದೆ. ಮಾರುಕಟ್ಟೆಗಳಲ್ಲಿ ಬಣ್ಣ ಬಣ್ಣದ, ಅನೇಕ ಬಗೆಯ ಗಣೇಶ ಮೂರ್ತಿಗಳು ಮಾರಾಟಕ್ಕೆ ಸಿದ್ಧವಾಗಿದೆ. ಯಾವೆಲ್ಲ ಗಲ್ಲಿಗಳಲ್ಲಿ, ವೃತ್ತದಲ್ಲಿ ವಿಶೇಷ ಗಣಪತಿಗಳು ಪ್ರತಿಷ್ಠಾಪನೆಗೊಳ್ಳಲಿವೆ ಎಂಬ ಕುತೂಹಲವು ಜನರಲ್ಲಿ ಹೆಚ್ಚಾಗಿದೆ. ಈ ಪೈಕಿ ಹುಬ್ಬಳ್ಳಿಯ ಮರಾಠ ಗಲ್ಲಿಯಲ್ಲಿ ಪ್ರತಿಷ್ಠಾಪನೆಗೊಳ್ಳುವ ಗಣೇಶನ ಮೇಲೆ ತುಸು ಹೆಚ್ಚೇ ನಿರೀಕ್ಷೆ ಇದೆ.
ಏಕೆಂದರೆ ದೇಶದಲ್ಲಿಯೇ ಮುಂಬೈ ಹೊರತುಪಡಿಸಿದರೆ ಅತ್ಯಂತ ವಿಜೃಂಭಣೆಯಿಂದ ಗಣೇಶೋತ್ಸವ ಆಚರಣೆಯನ್ನು ಹುಬ್ಬಳ್ಳಿಯಲ್ಲಿ ಮಾಡಲಾಗುತ್ತದೆ. ಈಗಾಗಲೇ ಸಕಲ ಸಿದ್ಧತೆ ನಡೆದಿದೆ. ಹುಬ್ಬಳ್ಳಿಯಲ್ಲಿ ಬೃಹತ್ ಗಣೇಶ ಮೂರ್ತಿಗಳ ತಯಾರಿಕೆ ಸಹ ಅಷ್ಟೇ ಗಮನ ಸೆಳೆಯತ್ತದೆ.

ಛೋಟಾ ಮುಂಬೈ ಅಂತಲೇ ಕರೆಸಿಕೊಳ್ಳುವ ಹುಬ್ಬಳ್ಳಿಯ ನಗರದ ಮರಾಠಾ ಗಲ್ಲಿಯಲ್ಲಿನ ಪ್ರತಿಷ್ಠಾಪನೆಗೊಳ್ಳಲಿರುವ ಗಣಪತಿ ಮೂರ್ತಿ ತಯಾರಿಸಲು ಪಶ್ಚಿಮ, ಬಂಗಾಳದ ಕೋಲ್ಕತ್ತ ಸಹೋದರರಾದ ಅಪ್ಪು ಪಾಲ್ ಮತ್ತು ಸ್ವಪನ್ ಪಾಲ್ ನಿರತರಾಗಿದ್ದಾರೆ.
4 ತಿಂಗಳು ಮುನ್ನ ನಗರಕ್ಕೆ ಪಾಲ್ ಸಹೋದರರ ಆಗಮನ
ಈ ಸಹೋದರರು ಸಿದ್ಧಪಡಿಸುವ 23 ಅಡಿ ಎತ್ತರದ 'ಹುಬ್ಬಳ್ಳಿ ಕಾ ಮಹಾರಾಜ' ಗಣೇಶ ಮರಾಠಾ ಗಲ್ಲಿಯಲ್ಲಿ ಪ್ರತಿಷ್ಠಾಪನೆ ಆಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಹುಬ್ಬಳ್ಳಿಯೊಂದಿಗೆ 30 ವರ್ಷಗಳಿಂದ ನಂಟು ಹೊಂದಿರುವ ಈ ಪಾಲ್ ಸಹೋದರರು ಪ್ರತಿ ವರ್ಷ ನಾಲ್ಕು ತಿಂಗಳು ಮೂರ್ತಿ ತಯಾರಿಗೆಂದೇ ನಗರಕ್ಕೆ ಆಗಮಿಸುತ್ತಾರೆ. ಬೃಹತ್ ಮೂರ್ತಿಗಳನ್ನು ರೂಪಿಸುವುದರಲ್ಲಿ ನಿಷ್ಣಾತರಾದ ಅವರು ಪ್ರತಿ ಸಲವೂ ಬೇರೆ ಬೇರೆ ವಿನ್ಯಾಸಗಳಿಗೆ ಆದ್ಯತೆ ನೀಡುತ್ತಾರೆ.

ರೈಲ್ವೆ ಇಲಾಖೆ ಅಧಿಕಾರಿಯೊಬ್ಬರು 30 ವರ್ಷಗಳ ಹಿಂದೆ ದುರ್ಗಾ ಮಾತೆ ತಯಾರಿಸುವಂತೆ ಕೋರಿ ಈ ಇಬ್ಬರೂ ಸಹೋದರರನ್ನು ಹುಬ್ಬಳ್ಳಿಗೆ ಕರೆಸಿಕೊಂಡರು. ಅವರು ಬೃಹತ್ ಮೂರ್ತಿ ಸಿದ್ಧಪಡಿಸುವುದನ್ನು ಕಂಡು ಸ್ಥಳೀಯ ಗಣೇಶೋತ್ಸವ ಮಂಡಳಿಗಳ ಪ್ರಮುಖರು ಅವರಿಂದಲೇ ಮೂರ್ತಿ ತಯಾರು ಮಾಡುವುದು ಮತ್ತೊಂದ ವಿಶೇಷ.
ಹುಬ್ಬಳ್ಳಿಯಲ್ಲಿಯೇ ಮೂರ್ತಿ ತಯಾರಿಕೆ
ಹುಬ್ಬಳ್ಳಿಯಲ್ಲಿ ಮೂರ್ತಿಗಳನ್ನು ತಯಾರಿಸುವುದು ನಮಗೆ ಖುಷಿ ತರುತ್ತದೆ. ನಾವು ತಯಾರು ಮಾಡಿರುವ ಗಣಪತಿಗಳನ್ನು ಗಣೇಶ ಮೂರ್ತಿ ತಯಾರಕರಿಗೆ ಸಹ ವಿವಿಧ ಜಿಲ್ಲೆಗಳ ಗಣೇಶೋತ್ಸವ ಮಂಡಳಿಯವರು ಒಯ್ದು ಪ್ರತಿಷ್ಠಾಪಿಸುತ್ತಾರೆ ಇದು ಇಲ್ಲಿಯ ಮಂಡಳಿಯವರು ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಖುಷಿಪಡುತ್ತಾರೆ.
ಒಟ್ಟಾರೆ 'ಹುಬ್ಬಳ್ಳಿ ಕಾ ಮಹಾರಾಜ' ಕಣ್ತುಂಬಿಕೊಳ್ಳಲು, ವಿಜೃಂಭಣೆಯ ಆಚರಣೆ ನಡೆಸಲು ಭರ್ಜರಿ ತಯಾರಿ ನಡೆದಿದೆ. ಈಗಾಗಲೇ ಮೂರ್ತಿ ತಯಾರಾಗಿದೆ. ಬಣ್ಣ ಹಚ್ಚುವ ಕಾರ್ಯದಲ್ಲಿ ಪಾಲ್ ಸಹೋದರರ ನಿರತರಾಗಿದ್ದಾರೆ. ಇನ್ನೆರಡು ದಿನದಲ್ಲಿ ಮೂರ್ತಿ ಕಾರ್ಯ ಪೂರ್ಣಗೊಳ್ಳಲಿದೆ. ಸೆಪ್ಟಂಬರ್ 7ರಂದು ಶನಿವಾರ ಗಣೇಶ ಪ್ರತಿಷ್ಠಾಪಿಸಲಾಗುತ್ತದೆ. ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ಸಂಭ್ರಮ ಮನೆ ಮಾಡಿರಲಿದೆ.












Click it and Unblock the Notifications