Ganesh chaturthi 2023: ಕೆಲವೇ ಕ್ಷಣಗಳಲ್ಲಿ ಹುಬ್ಬಳ್ಳಿ ಈದ್ಗಾ ಮೈದಾನದ ಗಣೇಶ ವಿಸರ್ಜನಾ ಮೆರವಣಿಗೆ
ಹುಬ್ಬಳ್ಳಿ, ಸೆಪ್ಟೆಂಬರ್, 21: ಹುಬ್ಬಳ್ಳಿಯ ರಾಣಿ ಚೆನ್ನಮ್ಮ (ಈದ್ಗಾ ) ಮೈದಾನದಲ್ಲಿನ ಗಣಪತಿ ಮೂರ್ತಿ ವಿಸರ್ಜನೆ ಮೆರವಣಿಗೆ ಇಂದು (ಸೆಪ್ಟೆಂಬರ್ 21) ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೂರು ದಿನಗಳ ಕಾಲ ಪ್ರತಿಷ್ಠಾನೆಗೊಂಡಿದ್ದ ಹುಬ್ಬಳ್ಳಿ ಈದ್ಗಾ ಮೈದಾನದ ಗಣಪತಿ ಮೂರ್ತಿ ವಿಸರ್ಜನೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಚಾಲನೆ ನೀಡಲಿದ್ದು, ಈ ವೇಳೆ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಅನೇಕ ಮಠಗಳ ಮಠಾಧೀಶರರು ಭಾಗಿಯಾಗಲಿದ್ದಾರೆ.

ಈ ಮುಂಚೆ ಈದ್ಗಾ ಮೈದಾನದಲ್ಲಿ ಗಣೇಶ ಕೂರಿಸಲು ಅನಮತಿ ನೀಡಬಾರದೆಂದು ಅಂಜುಮನ್ ಇಸ್ಲಾಂ ಸಮಿತಿ ಕೈಕೋರ್ಟ್ ಮೆಟ್ಟಲೇರಿತ್ತು. ಆದರೆ ಹೈಕೋರ್ಟ್ ಅಂಜುಮನ್ ಇಸ್ಲಾಂ ಸಮಿತಿ ಅರ್ಜಿ ತಿರಸ್ಕಾರ ಮಾಡಿತ್ತು. ನಂತರ ಪಾಲಿಕೆ ಮೂರು ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆ ಮಾಡಲು ಕೆಲವು ಷರತ್ತುಗಳನ್ನು ಹಾಕಿತ್ತು. ಈ ಆಧಾರದ ಮೇಲೆ ಗಜಾನನ ಮೈದಾನ ಉತ್ಸವ ಸಮಿತಿ ಈದ್ಗಾ ಮೈದಾನದಲ್ಲಿ ಮೂರು ದಿನಗಳ ಕಾಲ ಗಣೇಶ ಪ್ರತಿಷ್ಠಾನೆ ಮಾಡಿದ್ದು, ಇಂದು ಮೆರವಣಿಗೆ ಮಾಡಲು ಸಜ್ಜಾಗಿದೆ.












Click it and Unblock the Notifications