ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ-ಚೆನ್ನೈ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ, ವೇಳಾಪಟ್ಟಿ

|
Google Oneindia Kannada News

ಹುಬ್ಬಳ್ಳಿ, ಸೆಪ್ಟೆಂಬರ್ 15 : ವಾರಕ್ಕೆರಡು ಬಾರಿ ಸಂಚಾರ ನಡೆಸುವ ಹುಬ್ಬಳ್ಳಿ-ಚೆನ್ನೈ ಸೆಂಟ್ರಲ್ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಲಾಗಿದೆ. ಸೆಪ್ಟೆಂಬರ್ 17ರಿಂದ ಹುಬ್ಬಳ್ಳಿ ಮತ್ತು ಸೆಪ್ಟೆಂಬರ್ 18ರಿಂದ ಚೆನ್ನೈನಿಂದ ರೈಲು ಸೇವೆ ಆರಂಭವಾಗಲಿದೆ.

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಧಾರವಾಡ ಸಂಸದ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರೈಲು ಸೇವೆಗೆ ಚಾಲನೆಯನ್ನು ನೀಡಿದರು.

ಹುಬ್ಬಳ್ಳಿ-ಚೆನ್ನೈ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿ; ನಿಲ್ದಾಣಹುಬ್ಬಳ್ಳಿ-ಚೆನ್ನೈ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿ; ನಿಲ್ದಾಣ

ಹುಬ್ಬಳ್ಳಿ-ಚೆನ್ನೈ ರೈಲಿನಿಂದಾಗಿ ಧಾರವಾಡ, ಗದಗ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳ ಜನರಿಗೆ ಸಹಕಾರಿಯಾಗಲಿದೆ. ರೈಲು ನಂಬರ್ 17313/17314 ಎರಡೂ ನಗರಗಳ ನಡುವೆ ವಾರಕ್ಕೆರಡು ಬಾರಿ ಸಂಚಾರ ನಡೆಸಲಿದೆ.

ದಶಕಗಳ ಬೇಡಿಕೆಗೆ ಮನ್ನಣೆ; ಹುಬ್ಬಳ್ಳಿ-ಚೆನ್ನೈ ರೈಲು ಸೇವೆ ಆರಂಭದಶಕಗಳ ಬೇಡಿಕೆಗೆ ಮನ್ನಣೆ; ಹುಬ್ಬಳ್ಳಿ-ಚೆನ್ನೈ ರೈಲು ಸೇವೆ ಆರಂಭ

ಹುಬ್ಬಳ್ಳಿ-ಚೆನ್ನೈ ನಡುವೆ ರೈಲು ಸಂಚಾರ ಆರಂಭಿಸಬೇಕು ಎಂಬುದು ಬಹುದಿನದ ಬೇಡಿಕೆಯಾಗಿತ್ತು. ಬೆಳಗಾವಿ ಸಂಸದ ಸುರೇಶ್ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವರಾದ ಬಳಿಕ ಈ ಬೇಡಿಕೆಗೆ ವೇಗ ಸಿಕ್ಕಿತ್ತು. ಅಧಿಕಾರಿಗಳ ಜೊತೆ ಸರಣಿ ಸಭೆಗಳನ್ನು ಮಾಡಿ ಅವರು ರೈಲು ಸೇವೆ ಆರಂಭಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಹುಬ್ಬಳ್ಳಿ-ಬೆಂಗಳೂರು ಜನ ಶತಾಬ್ಧಿ ರೈಲು ವೇಳಾಪಟ್ಟಿ ಬದಲುಹುಬ್ಬಳ್ಳಿ-ಬೆಂಗಳೂರು ಜನ ಶತಾಬ್ಧಿ ರೈಲು ವೇಳಾಪಟ್ಟಿ ಬದಲು

ವಾರಕ್ಕೆರಡು ಬಾರಿ ಸಂಚಾರ

ವಾರಕ್ಕೆರಡು ಬಾರಿ ಸಂಚಾರ

ಹುಬ್ಬಳ್ಳಿ ಮತ್ತು ಚೆನ್ನೈ ನಡುವೆ ವಾರಕ್ಕೆರಡು ಬಾರಿ ರೈಲು ಸಂಖ್ಯೆ 17313 ಮತ್ತು 17314 ಸಂಚಾರ ನಡೆಸಲಿದೆ. ಮಂಗಳವಾರ ಮತ್ತು ಶುಕ್ರವಾರ ಹುಬ್ಬಳ್ಳಿಯಿಂದ, ಬುಧವಾರ ಮತ್ತು ಶನಿವಾರ ಚೆನ್ನೈನಿಂದ ರೈಲು ಸಂಚಾರ ನಡೆಸಲಿದೆ.

ಹುಬ್ಬಳ್ಳಿ ವೇಳಾಪಟ್ಟಿ

ಹುಬ್ಬಳ್ಳಿ ವೇಳಾಪಟ್ಟಿ

ರೈಲು ಸಂಖ್ಯೆ 17313 ಮಂಗಳವಾರ ಮತ್ತು ಶುಕ್ರವಾರ ಹುಬ್ಬಳ್ಳಿಯಿಂದ ಹೊರಡಲಿದೆ. ರಾತ್ರಿ 9 ಗಂಟೆಗೆ ಹುಬ್ಬಳ್ಳಿಯಿಂದ ಹೊರಡುವ ರೈಲು ಗದಗ ಮಾರ್ಗವಾಗಿ ಹೊಸಪೇಟೆಗೆ ರಾತ್ರಿ 11.40ಕ್ಕೆ ತಲುಪಲಿದೆ. ಬಳ್ಳಾರಿ, ಗುಂತಕಲ್, ಕಡಪ, ರೇಣಿಗುಂಟಾ ಅರಕೋಣಮ್ ಮಾರ್ಗವಾಗಿ ರೈಲು ಮರುದಿನ ಬೆಳಗ್ಗೆ 10.50ಕ್ಕೆ ಚೆನ್ನೈ ತುಲುಪಲಿದೆ.

ಚೆನ್ನೈನಿಂದ ವೇಳಾಪಟ್ಟಿ

ಚೆನ್ನೈನಿಂದ ವೇಳಾಪಟ್ಟಿ

ಪ್ರತಿ ಬುಧವಾರ ಮತ್ತು ಶನಿವಾರ ರೈಲು ಚೆನ್ನೈನಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದೆ. ರೈಲು ಸಂಖ್ಯೆ 17314 ಚೆನ್ನೈನಿಂದ ಮಧ್ಯಾಹ್ನ 3 ಗಂಟೆಗೆ ಹೊರಡಲಿದ್ದು, ರಾತ್ರಿ 1.40ಕ್ಕೆ ಹೊಸಪೇಟೆಗೆ ಆಗಮಿಸಲಿದೆ. ಮರುದಿನ ಬೆಳಗ್ಗೆ 5.15ಕ್ಕೆ ಹುಬ್ಬಳ್ಳಿಗೆ ತಲುಪಲಿದೆ.

ರೈಲು ಸಂಚರಿಸುವ ಮಾರ್ಗ

ರೈಲು ಸಂಚರಿಸುವ ಮಾರ್ಗ

ಹುಬ್ಬಳ್ಳಿ-ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಗದಗ, ಹೊಸಪೇಟೆ, ಬಳ್ಳಾರಿ, ಗುಂತಕಲ್, ಕಡಪ, ರೇಣಿಗುಂಟಾ, ಅರಕೋಣಮ್ ಮಾರ್ಗವಾಗಿ ಸಂಚಾರ ನಡೆಸಲಿದೆ.

English summary
Minister of State for Railways Suresh Angadi flagged of for the Hubballi- Chennai Central bi weekly express train. Train will run from 17/9/2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X